ಬೆಳ್ತಂಗಡಿ: ಬೆಳ್ತಂಗಡಿ ಸೈಂಟ್ ಥೋಮಸ್ ಕಾಲೇಜಿನಲ್ಲಿ ಕರಿಯರ್ ಗೈಡೆನ್ಸ್‌ಮತ್ತು ಪ್ಲೇಸ್‌ಮೆಂಟ್ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಉದ್ಘಾಟಿಸಿ, ಎಲ್ಲಾ ವಿದ್ಯಾರ್ಥಿಗಳು ಉತ್ತಮವಾದ ವಿದ್ಯಾಭ್ಯಾಸವನ್ನು ಮಾಡಿ ಉತ್ತಮ ಉದ್ಯೋಗ ಪಡೆಯುವಂತಾಗಬೇಕು ಎಂದರು.
ವಿದ್ಯಾ ಸಂಸ್ಥೆಯ ಅಧ್ಯಕ್ಷ ಫಾ| ಜೋಸೆಫ್ ವಲಿಯಪರಂಬಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಶಿಸ್ತಿನಿಂದ ವಿದ್ಯಾಭ್ಯಾಸ ಮಾಡಬೇಕು. ಅದಕ್ಕೆ ಬೇಕಾಗುವ ಎಲ್ಲಾ ಆಧುನಿಕ ಸೌಲಭ್ಯವನ್ನು ಈ ಸಂಸ್ಥೆಯು ನೀಡುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ಜೋಸೆಫ್ ಪಿ. ಪಿ. ಮಾತನಾಡಿ, ಹಿಂದಿನ ಸಾಲಿನ ಪದವಿ ಫಲಿತಾಂಶದ ವಿವರಣೆಯನ್ನು ನೀಡಿ ಸುಮಾರು 26 ವಿಷಯಗಳಲ್ಲಿ ಶೇ.100 ಫಲಿತಾಂಶ, ಪ್ರತಿಯೊಂದು ತರಗತಿಯಲ್ಲಿಯೂ ಸುಮಾರು 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಅಧ್ಯಾಪಕರು ಮತ್ತು ಎಲ್ಲಾ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಬದ್ರಿಯಾ ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಇಸ್ಮಾಯಿಲ್, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪವಿತ್ರಾ, ಘಟಕದ ನಿರ್ದೇಶಕ ಪ್ರೊ| ಶ್ರೀಕಾಂತ್ ಬಿ.ಎಸ್. ಉಪಸ್ಥಿತರಿದ್ದರು.
ರೋಸ್ ಪೌಲ್ ಕಾರ್ಯಕ್ರಮ ನಿರೂಪಿಸಿ, ರುಕ್ಸಾನ ಸ್ವಾಗತಿಸಿ, ಜೆರಿನ್ ಥಾಮಸ್ ವಂದಿಸಿದರು.