Advertisement

ಗೊಬ್ಬರ ನಿರ್ವಹಣೆಯೇ ಮಹತ್ವದ ಪಾತ್ರ

07:28 AM Jul 22, 2020 | Suhan S |

ಮಾಗಡಿ: ಬಾಳೆ ಬೆಳೆಯಲ್ಲಿ ಗೊಬ್ಬರ ನಿರ್ವಹಣೆ, ಲಘು ಪೋಷಕಾಂಶ ಬಳಕೆ, ಜೈವಿಕ ಗೊಬ್ಬರ ಬಳಕೆ ಮತ್ತು ಕೀಟ ಮತ್ತು ರೋಗ ನಿರ್ವಹಣೆ ಮಹತ್ವದ ಪಾತ್ರ ಬಹಳ ಮುಖ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಎ.ಎನ್‌.ವಿಕಾಸ್‌ ತಿಳಿಸಿದರು.

Advertisement

ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಬೆಂಗಳೂರು ಕೃಷಿ ವಿವಿ ದತ್ತು ಗ್ರಾಮದ ಯೋಜನೆಯಡಿಯಲ್ಲಿ ಮಾಗಡಿ ತಾಲೂ ಕಿನ ಹಲಸಬೆಲೆ ಗ್ರಾಮದಲ್ಲಿ ಬಾಳೆಬೆಳೆ ಬೇಸಾಯ ಕ್ರಮಗಳ ಕುರಿತು ಕೇಂದ್ರದ ತೋಟಗಾರಿಕೆ ವಿಜ್ಞಾನಿ ವಿಕಾಸ್‌ ಎ. ಎನ್‌. ಅವರ ಮುಂದಾಳತ್ವದಲ್ಲಿ ಕಾರ್ಯ ಕ್ರಮದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.

ಜೈವಿಕ ಗೊಬ್ಬರ: ಐಐಎಚ್‌ಆರ್‌ನ “ಅರ್ಕಾ ಮೈಕ್ರೋಬಿಯಲ್‌ ಕನ್ಸಾರ್ಷಿಯಂ’ ಬಳಕೆ ಮಾಡುವುದರಿಂದ ಸಾರಜನಕ ಸ್ಥಿರೀಕರಿಸುವ, ರಂಜಕ ಮತ್ತು ಸತು ಕರಗಿಸುವುದರ ಜೊತೆಗೆ ಸಸ್ಯದ ಬೆಳ ವಣಿಗೆ ಪ್ರಚೋದಿಸುವ ಕಾರ್ಯಕ್ಷಮತೆ ಹೊಂದಿ ರುತ್ತದೆ. ಬೆಳೆ ಇಳುವರಿಯಲ್ಲಿ ಶೇ.10-15ರಷ್ಟು ಹೆಚ್ಚಳವಾಗುತ್ತದೆ. ಒಂದು ಟನ್‌ ಕೊಟ್ಟಿಗೆ ಗೊಬ್ಬ ರಕ್ಕೆ ಎರಡು ಕೆ.ಜಿ. ಜೈವಿಕ ಗೊಬ್ಬರವನ್ನು ಚೆನ್ನಾಗಿ ಮಿಶ್ರಣ ಮಾಡಿ, ಭೂಮಿಗೆ ಹಾಕಬೇಕು ಎಂದು ಮಾಹಿತಿ ನೀಡಿದರು.

ಬಾಳೆ ಸ್ಪೆಷಲ್‌: ಕೃಷಿ ಜ್ಞಾನ ಕೇಂದ್ರದ “ರಾಮ್‌ ಬಾಳೆ ಸ್ಪೆಷಲ್‌’ ಬಳಸುವುದರಿಂದ ತ್ವರಿತ ಗತಿಯಲ್ಲಿ ಪೋಷಕಾಂಶಗಳ ಕೊರತೆ ನಿವಾರಣೆ, ಒಂದೇ ಸಮಯದಲ್ಲಿ ಗೊನೆಗಳು ಪಕ್ವವಾಗಿ ಕಟಾವಿಗೆ ಬರು ವುದು. ಅಧಿಕ ಇಳುವರಿ ಹಾಗೂ ಉತ್ತಮ ಗುಣ ಮಟ್ಟದ ಗೊನೆ ಪಡೆಯಬಹುದಾಗಿದೆ. ಒಂದು ಪ್ಲಾಸ್ಟಿಕ್‌ ಬಕೆಟ್‌ನಲ್ಲಿ 75 ಗ್ರಾಂ. ರಾಮ್‌ ಬಾಳೆ ಸ್ಪೆಷಲ್‌ + 1 ನಿಂಬೆ ಹಣ್ಣಿನ ರಸ + 1 ಶ್ಯಾಂಪೂ ಪ್ಯಾಕೆಟ್‌ನ್ನು 15 ಲೀಟರ್‌ ಶುದ್ಧ ನೀರಿನಲ್ಲಿ ಮಿಶ್ರಣ ಮಾಡಿಕೊಂಡು ನಂತರ ಸಿಂಪಡಿಸುವುದು.

ಸಿಂಪಡಣೆಯನ್ನು ಬಾಳೆ ನಾಟಿ ಮಾಡಿದ 5ನೇ ತಿಂಗಳ ನಂತರ ಪ್ರಾರಂಭಿಸಿ, ಮೂವತ್ತು ದಿನಗಳ ಅಂತರದಲ್ಲಿ 4-5 ಬಾರಿ (ಹಂತಗಳಲ್ಲಿ) ಎಲೆ ಮತ್ತು ಗೊನೆಯ ಮೇಲೆ ಮುಂಜಾನೆ ಅಥವಾ ಸಂಜೆಯ ವೇಳೆಯಲ್ಲಿ ಸಿಂಪಡಿಸುವುದು ಉತ್ತಮ. ಒಂದು ಎಕರೆ ಪ್ರದೇಶಕ್ಕೆ 10 ಕೆ.ಜಿ. ರಾಮ್‌ ಬಾಳೆ ಸ್ಪೆಷಲ್‌ ಬೇಕಾಗುತ್ತದೆ. ಈ ಬಾಳೆ ಸ್ಪೆಷಲ್‌ ಬಳಸುವುದರಿಂದ ಶೇ.20ರಷ್ಟು ಅಧಿಕ ಇಳುವರಿ ಪಡೆಯಬಹುದು ಎಂದು ವಿವರಿಸಿದರು.

Advertisement

ಬೇವಿನ ಸೊಪ್ಪು: ಐಐಎಚ್‌ಆರ್‌ ಬಿಡುಗಡೆಗೊಳಿಸಿರುವ ಬೇವಿನ ಸೊಪ್ಪು ಬಳಕೆಯಿಂದ ಬಾಳೆಯಲ್ಲಿ ರಸಹೀರುವ ಕೀಟಗಳಾದ ಸಸ್ಯ ಹೇನು, ಹಿಟ್ಟು ತಿಗಣೆ ಮತ್ತು ಬಿಳಿನೊಣಗಳ ಬಾಧೆ ಹತೋಟಿ ಮಾಡಬಹುದು. 7 ಗ್ರಾಂ. ಬೇವಿನ ಸಾಬೂನನ್ನು ಒಂದು ಲೀಟರ್‌ ನೀರಿನಲ್ಲಿ ಕರಗಿಸಿ ಎಲೆಯ ಕೆಳ ಭಾಗದಲ್ಲಿ ತಲುಪುವಂತೆ ಸಿಂಪಡಿಸುವುದರಿಂದ ಹತೋಟಿ ಮಾಡಬಹುದು ಎಂದು ತಿಳಿಸಿಕೊಟ್ಟರು. ಕೇಂದ್ರದ ಮತ್ತೂಬ್ಬ ಗೃಹಜಾnನದ ವಿಜ್ಞಾನಿ ಡಾ. ಲತಾ, ಆರ್‌.ಕುಲಕರ್ಣಿ ಮಾತನಾಡಿದರು

Advertisement

Udayavani is now on Telegram. Click here to join our channel and stay updated with the latest news.

Next