Advertisement
ಮಕ್ಕಳಿಂದ ಯೋಗ: ಅವಧೂತ ದತ್ತಪೀಠದ ನಾದಮಂಟಪದಲ್ಲಿ ಯೊಗ ಪ್ರದರ್ಶನ ಹಾಗೂ ರಂಗರಾವ್ ಅಂಗವಿಕಲರ ಶಾಲೆಯಲ್ಲಿ ದೃಷ್ಟಿವಿಶೇಷಚೇತನ ಮಕ್ಕಳಿಂದ ಯೋಗ ಪ್ರದರ್ಶನ ಗಮನ ಸೆಳೆಯಿತು. ನಂಜನಗೂಡು ರಸ್ತೆಯಲ್ಲಿರುವ ಅವದೂತ ದತ್ತ ಪೀಠ, ದತ್ತ ಕ್ರಿಯಾ (ಅಂತಾರಾಷ್ಟ್ರೀಯ)ಯಿಂದ ಆಶ್ರಮದ ನಾದ ಮಂಟಪದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಯಿತು.
Related Articles
Advertisement
ಚುಮುಚುಮು ಚಳಿಯನ್ನೂ ಲೆಕ್ಕಿಸದೇ ಶಾಲಾ ವಿದ್ಯಾರ್ಥಿಗಳೂ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು. ಗಂಗೋತ್ರಿ ಪಬ್ಲಿಕ್ ಶಾಲೆಯ ಆಡಳಿತ ಸಂಯೋಜನಾಧಿಕಾರಿ ಕಾಂತಿನಾಯಕ್, ಶಾಲೆಯ ಮುಖ್ಯ ಶಿಕ್ಷಕಿ ಝರೀನಾ ಬಾಬುಲ್ ಸೇರಿದಂತೆ ಮತ್ತಿತರಿದ್ದರು.
ವಿವಿಧ ಆಸನ: ಕುವೆಂಪು ನಗರದಲ್ಲಿರುವ ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಯೋಗ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸೂರ್ಯನಮಸ್ಕಾರ, ಉತಿತತಾಡಾಸನ, ಅರ್ಧಕಟಿಚಕ್ರಾಸನ, ಅರ್ಧಚಕ್ರಾಸನ, ಪಾದಹಸ್ತಾಸನ, ತ್ರೀಕೋಣಾಸನ, ವೃಕ್ಷಾಸನ, ವಕ್ರಾಸನ, ಭುಜಾಂಗಾಸನ, ಪದ್ಮಾಸನ, ಮಣಿಪರಾಸನ, ಪಶ್ಚಿಮೋತ್ತಾಸನ, ವಜ್ರಾಸನ, ಧ್ಯಾನ, ಶವಾಸನ ಆಸನ ಪ್ರದರ್ಶಿಸಲಾಯಿತು. ನಂತರ ಉತ್ತಮ ಆರೋಗ್ಯಕ್ಕೆ ಯೋಗದ ಮಹತ್ವ ಮತ್ತು ಪ್ರಾಮುಖ್ಯತೆ ತಿಳಿಸಿಸಲಾಯಿತು.