Advertisement
ಇದರಿಂದ ಎಡದಂಡೆ ಕಾಲುವೆ ವ್ಯಾಪ್ತಿಯ ರೈತರು ಆತಂಕಕ್ಕೊಳಗಾಗಿದ್ದಾರೆ. ಗಂಗಾವತಿ, ಕಾರಟಗಿ ಸಿಂಧನೂರು ಭಾಗದಲ್ಲಿ ಭತ್ತದ ಸಸಿ ನಾಟಿ ಮಾಡಿದ್ದು ಮಾನ್ವಿ, ಮಸ್ಕಿ, ರಾಯಚೂರು ಕೊನೆ ಭಾಗದ ರೈತರು ಇದೀಗ ಭತ್ತದ ಸಸಿ ನಾಟಿ ಮಾಡುತ್ತಿದ್ದಾರೆ. ಈ ಮಧ್ಯೆ ಕೇಸಕ್ಕಿ ಹಂಚಿನಾಳ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆಯಿಂದ 22ನೇ ವಿತರಣಾ ಕಾಲುವೆಗೆ ನೀರು ಹರಿಯುವ ಸ್ಥಳದಲ್ಲಿ ಎಡ-ಬಲ ಭಾಗದಲ್ಲಿ ಬೃಹತ್ ಗಾತ್ರದ ಬೋಂಗಾ ಬಿದ್ದಿದ್ದು, ದೊಡ್ಡದಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ವಿತರಣಾ ಕಾಲುವೆ ಮೂಲಕ ರೈತರ ನಾಟಿ ಮಾಡಿದ ಭತ್ತದ ಗದ್ದೆಗೆ ನುಗ್ಗುತ್ತಿದ್ದು, ಅಪಾರ ಹಾನಿಯಾಗುವ ಸಂಭವವಿದೆ.
Related Articles
Advertisement
ಬೋಂಗಾ ಬಿದ್ದಿರುವ ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ ಹಾಗೂ ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಶಾಸಕ ಪರಣ್ಣ, ಈಗಾಗಲೇ ಮೇಲ್ಭಾಗದ ರೈತರು ಭತ್ತ ನಾಟಿ ಮಾಡಿದ್ದಾರೆ. ಕೆಳಮಟ್ಟದ ರೈತರು ಇನ್ನೂ ನಾಟಿ ಕಾರ್ಯ ಮಾಡುತ್ತಿದ್ದು, ಬೇಗ ದುರಸ್ತಿ ಮಾಡುವಂತೆ ಸ್ಥಳದಲ್ಲಿದ್ದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ರೈತರು ಆತಂಕಕ್ಕೊಳಗಾಗಬಾರದು. ಬೇಗ ದುರಸ್ತಿ ಕಾರ್ಯ ಮಾಡಿ ಪುನಃ ಕಾಲುವೆಗೆ ನೀರು ಹರಿಸಲಾಗುತ್ತದೆ ಎಂದು ತಿಳಿಸಿದರು.