ಕಬಕ : ಇಲ್ಲಿನ ಸ.ಹಿ.ಪ್ರಾ.ಶಾಲೆ ಬಳಿಯೇ ಅವೈಜ್ಞಾನಿಕವಾಗಿ ಡಂಪಿಂಗ್ ಯಾರ್ಡ್ ನಿರ್ಮಿಸಿರುವ ಸ್ಥಳೀಯಾ ಆಡಳಿತದ ವಿರುದ್ಧ ಶಾಲಾಡಳಿತ ಗರಂ ಆಗಿದೆ. ದುರ್ವಾಸನೆ ಬೀರುವ ತ್ಯಾಜ್ಯ ತೆರವು ಗೊಳಿಸದಿದ್ದರೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಶಾಲೆಗಳ ಅಭಿವೃದ್ಧಿಗೆ ಮಹತ್ವ ನೀಡಿ, ವಿದ್ಯಾರ್ಥಿಗಳ ಆರೋಗ್ಯದ ಕಾಳಜಿ ವಹಿಸಬೇಕಾದ ಗ್ರಾಮ ಪಂ., ಇಲ್ಲಿ ಕಸ ಸುರಿಯುತ್ತಿದೆ. ಕಬಕ ಪೇಟೆ ಯಲ್ಲಿ ರಾಶಿ ಬೀಳುತ್ತಿದ್ದ ಕಸವನ್ನು ವಿಲೇವಾರಿ ಮಾಡಲು ತರಾತುರಿಯಲ್ಲಿ ಕ್ರಮ ಕೈಗೊಂಡ ಗ್ರಾಪಂ, ಬೀಸುವ ದೊಣ್ಣೆಯಿಂದ ಪಾರಾಗಲು ಯತ್ನಿಸಿ, ಮತ್ತೂಂದು ಪ್ರಮಾದ ಎಸಗಿದೆ.
ಕಸ ವಿಲೇವಾರಿ ಮಾಡಲು ಶಾಲೆ ಪಕ್ಕದ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಲ್ಲದೆ, ಹಸಿ, ಒಣ ಕಸ ಬೇರ್ಪಡಿಸದೆ ಯಥಾವ ತ್ತಾಗಿ ತಂದು ಸುರಿಯುತ್ತಿದೆ. ಶಾಲೆಯ ಆವರಣದಲ್ಲಿ ದುರ್ವಾಸನೆ ಹಾಗೂ ರೋಗ ಹರಡುವ ಭೀತಿ ಎದುರಾಗಿದೆ.
ಇದರಿಂದ ಬೇಸತ್ತಿರುವ ವಿದ್ಯಾರ್ಥಿ ಗಳು, ಗ್ರಾಮಸ್ಥರು ಹಾಗೂ ಶಾಲೆಯ ಆಡಳಿತ ಮಂಡಳಿ, ಗ್ರಾಪಂ ವಿರುದ್ಧ ಪ್ರತಿ ಭಟನೆಗೆ ಮುಂದಾಗಿದ್ದಾರೆ. ಹೆತ್ತವರು ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ಕಸ ಸುರಿಯುವ ಸ್ಥಳಕ್ಕೆ ಭೇಟಿ ನೀಡಿ, ಅವ್ಯವಸ್ಥೆಯನ್ನು ಗಮನಿಸಿದ್ದಾರೆ. ಕಬಕ ಶಾಲೆಯ ಮಕ್ಕಳು ಆಟವಾಡುತ್ತಾ ಡಂಪಿಂಗ್ ಯಾರ್ಡ್‌ವರೆಗೂ ಹೋಗು ತ್ತಾರೆ. ಅವೈಜ್ಞಾನಿಕ ಗುಂಡಿಗಳು, ಕಸದ ರಾಶಿಗಳು ಅಪಾಯಕಾರಿಯಾಗಿ ಪರಿಣಮಿಸಿವೆ. ಕಸದಲ್ಲಿ ಆಹಾರ ಹುಡುಕುತ್ತಾ ಬರುವ ನಾಯಿ, ಹಾವು, ಹದ್ದು ಇತ್ಯಾದಿ ಗಳೂ ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡುವಂತಿವೆ. ಕೆಲವೊಮ್ಮೆ ಪ್ರಾಣಿಗಳು ಕಸದ ಮೂಟೆಯನ್ನು ತಂದು ಶಾಲೆ ಆವರ ಣದಲ್ಲಿ ಹಾಕುತ್ತಿವೆ. ಹೀಗಾಗಿ, ಶಾಲೆಯಲ್ಲಿ ಶುಚಿತ್ವಕ್ಕೂ ಸಮಸ್ಯೆಯಾಗಿದೆ. ಶಾಲೆ ಪ್ರದೇಶವನ್ನು ಕೊಳಕು ಮುಕ್ತ ಗೊಳಿಸುವ ಆಗ್ರಹ ವ್ಯಕ್ತಪಡಿಸಲಾಗಿದೆ.
ಧರಣಿ ಎಚ್ಚರಿಕೆ
ಗ್ರಾಪಂ ಆಡಳಿತ ತತ್‌ಕ್ಷಣ ಇಲ್ಲಿನ ಕಸದ ರಾಶಿತೆಗೆದು, ಸ್ವತ್ಛತೆಗೆ ಸಹಕರಿಸಬೇಕು. ವಿದ್ಯಾರ್ಥಿಗಳೇ ಮಕ್ಕಳ ಗ್ರಾಮಸಭೆಯಲ್ಲಿ ಜನಪ್ರತಿನಿಧಿಗಳ ಕ್ರಮ ಖಂಡಿಸಲು ಸಿದ್ಧತೆ ಮಾಡಿದ್ದಾರೆ. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲು ಜನಪ್ರತಿನಿಧಿಗಳು ಮುಜುಗರ ಪಡಬೇಕಾದೀತು. ಸಮಸ್ಯೆ ಪರಿಹರಿ ಸದಿದ್ದರೆ ತ್ಯಾಜ್ಯ ತರುವ ವಾಹನ ತಡೆದು ಪ್ರತಿಭಟನೆ ನಡೆಸುತ್ತೇವೆ. ಗ್ರಾ.ಪಂ. ಮುಂಭಾಗದಲ್ಲೂ ಧರಣಿ ಕುಳಿತು ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇವೆ ಎಂದು ಎಸ್‌ಡಿಎಂಸಿ ಉಪಾಧ್ಯಕ್ಷಹಮೀದ್ ಮೌಲ ಹೇಳಿದರು.