ಹೊಸದಿಲ್ಲಿ: ವಿದೇಶದ ವಿವಿಗಳಲ್ಲಿ ಉನ್ನತ ಅಧ್ಯಯನ ಮತ್ತು ಸಂಶೋಧನೆಗೆ ಬಯಸುವವರು ಪ್ರವೇಶ ಪಡೆಯಬೇಕೆಂದರೆ ಅವರ ಇಂಗ್ಲಿಷ್ ಮೇಲಿನ ಪ್ರಾವೀಣ್ಯವನ್ನು ಒರೆಗೆ ಹಚ್ಚಲಾಗುತ್ತದೆ.
ಅಂದರೆ ಇದಕ್ಕಾಗಿಯೇ ಇರುವ ಇಂಟರ್‌ನ್ಯಾಶನಲ್ ಇಂಗ್ಲಿಷ್ ಲಾಂ ಗ್ವೇ ಜ್ ಟೆಸ್ಟಿಂಗ್ ಸಿಸ್ಟಮ್ (Interna tional English Language Tes ting System – IELTS) ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾಗಬೇಕಾಗುತ್ತದೆ. ಈಗ ಇಂಥ ಶಿಕ್ಷಣಾಕಾಂಕ್ಷಿಗಳ ಅನುಕೂಲಕ್ಕಾಗಿ ಹೊಸ ವ್ಯವಸ್ಥೆ ತರಲು ಉದ್ದೇಶಿಸಲಾಗಿದೆ. ನಾಲ್ಕು ವಿಭಾಗಗಳಲ್ಲಿ ನಡೆಯು ವ ಪರೀಕ್ಷೆಗಳ ಪೈಕಿ ಒಂದರಲ್ಲಿ ಕಡಿಮೆ ಅಂಕ ಬಂದರೆ, ಅದನ್ನು ಮಾತ್ರ ಕೇಂದ್ರೀ ಕರಿಸಿ ಇನ್ನೊಂದು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ.
ಲಿಸನಿಂಗ್ (ಕೇಳುವಿಕೆ), ರೀಡಿಂಗ್ (ಓದುವಿಕೆ), ರೈಟಿಂಗ್ (ಬರವಣಿಗೆ), ಮಾತುಗಾರಿಕೆ (ಸ್ಪೀಕಿಂಗ್), ಹೀಗೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಪರೀಕ್ಷೆ ನಡೆಯುತ್ತದೆ. ಸದ್ಯದ ನಿಯಮಗಳ ಪ್ರಕಾರ ಒಂದು ವಿಭಾಗದಲ್ಲಿ ನಿರೀಕ್ಷೆ ಮಾಡಿದಷ್ಟು ಅಂಕಗಳು ಬಾರದೇ ಇದ್ದರೆ, ಮತ್ತೂಂದು ನಾಲ್ಕೂ ವಿಭಾಗಗಳಿಗೆ ಪರೀಕ್ಷೆ ಬರೆಯಬೇಕು. ಒಂದು ಬಾರಿಯ ಪರೀಕ್ಷೆಗೆ 15,500 ರೂ. ಆಗುತ್ತದೆ. ಆದರೆ, ಇನ್ನು ಮುಂದೆ ಒಂದರಲ್ಲಿ ಕಡಿಮೆ ಅಂಕ ಬಂದರೆ, ಆ ವಿಭಾಗದ ಪರೀಕ್ಷೆಯನ್ನಷ್ಟೇ ಬರೆದರೆ ಸಾಕು.
ಯಾರಿಗೆ ಅಗತ್ಯ?: ಆಸ್ಟ್ರೇಲಿಯಾ, ಕೆನಡಾ, ಐರ್ಲೆಂಡ್, ನ್ಯೂಜಿಲೆಂಡ್, ಯುಕೆ ಮತ್ತು ಅಮೆರಿಕದ ವಿವಿಗಳಲ್ಲಿ ಉನ್ನತ ಅಧ್ಯಯನ ಮತ್ತು ಸಂಶೋಧನೆ ಪ್ರವೇಶಾಕಾಂಕ್ಷಿಗಳಿಗೆ ಇಂಟರ್‌ನ್ಯಾಶನಲ್ ಇಂಗ್ಲಿಷ್ ಲಾಂಗ್ವೇಜ್ ಟೆಸ್ಟಿಂಗ್ ಸಿಸ್ಟಮ್ ಪರೀಕ್ಷೆ ಅಗತ್ಯ. ನಿಗದಿತ ಒಂದು ವಿಭಾಗದಲ್ಲಿ ಮಾತ್ರ ಪರೀಕ್ಷೆ ಬರೆಯುವಂತೆ ನಿಯಮ ಬದಲು ಮಾಡಲು ಉದ್ದೇಶಿಸಿರುವುದು ಇವರಿಗೆ ಅನುಕೂಲವಾಗಿ ಪರಿಣಮಿಸಲಿದೆ. ಬ್ರಿಟಿಷ್ ಕೌನ್ಸಿಲ್, ಆಸ್ಟ್ರೇಲಿಯಾ ಮತ್ತು ಕೇಂಬ್ರಿಡ್ಜ್ನ ತಜ್ಞರು ಪರೀಕ್ಷೆಯನ್ನು ನಡೆಸುತ್ತಾರೆ.