ಮಹದೇವಪುರ: “ನಾಡಪ್ರಭು ಕೆಂಪೇಗೌಡರು ಜಲಮೂಲಗಳನ್ನು ಸೃಷ್ಟಿಸಲೆಂದೇ ಸಾವಿರಾರು ಕೆರೆಗಳ ನಿರ್ಮಾಣ ಮಾಡಿದ್ದರು. ಉತ್ತಮ ನಗರವನ್ನು ಅಭಿವೃದ್ಧಿ ಮಾಡುವ ಅವರ ಕಲ್ಪನೆ ಇಂದಿನಿ ಎಂಜಿನಿಯರ್‌ಗಳಿಗೆ ಮಾರ್ಗದರ್ಶಕ,’ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದರು.
ಕ್ಷೇತ್ರದ ಕಾಡುಗುಡಿಯಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, “5 ಶತಮಾನಗಳ ಹಿಂದೆ ಕೆಂಪೇಗೌಡರು ದೂರದೃಷ್ಟಿಯಿಂದ ವೈಜಾnನಿಕವಾಗಿ ನಗರ ನಿರ್ಮಾಣ ಮಾಡಿದ್ದರು. ನಗರವನ್ನು ಸಮೃದ್ಧವಾಗಿಸಲು ಕೆರೆ ಕಟ್ಟೆಗಳ ನಿರ್ಮಾಣ ಮಾಡಿದ್ದರು. ಆದರೆ ನಮ್ಮ ತಪ್ಪುಗಳು ಬೆಳ್ಳಂದೂರು, ವರ್ತೂರು ಕೆರೆ ಸೇರಿದಂತೆ ನಗರದ ಇತರೆ ಕೆರೆಗಳಿಗೆ ಕುತ್ತು ತಂದಿವೆ,’ ಎಂದರು.
“ಕೆಂಪೇಗೌಡರು ನಗರದ ನಾಲ್ಕು ದಿಕ್ಕುಗಳಿಗೆ ಸರಹದ್ದಿನ ರೀತಿಯಲ್ಲಿ ಗಡಿ ಗೋಪುರಗಳನ್ನು ನಿರ್ಮಿಸಿದ್ದರು. ಆದರೆ, ಅವುಗಳನ್ನು ಮೀರಿ ಅತ್ಯಂತ ವೇಗವಾಗಿ ನಗರ ಬೆಳಯುತ್ತಿದೆ. ಹೀಗಾಗಿ ಮೂಲಸೌಕರ್ಯ ಕೊರತೆ ಎದುರಾಗಿದೆ. ನಗರ ಯೋಜನೆಯಲ್ಲಿ ಕೆಂಪೇಗೌಡರು ಪ್ರತಿಯೊಬ್ಬ ಎಂಜಿನಿಯರ್‌ಗಳಿಗೂ ಮಾದರಿ,’ ಎಂದರು.
ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, “ಕೆಂಪೇಗೌಡರು ಸಮೃದ್ಧ ನಗರ ನಿರ್ಮಾಣಕ್ಕೆಂದೇ 1000 ಕೆರೆಗಳನ್ನು ಕಟ್ಟಿಸಿದ್ದರು. ಆದರೆ ಕೆರೆಗಳ ಹಿತ ಕಾಯುವಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ,’ ಎಂದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ಬೆಂ.ಪೂರ್ವ ತಾಲ್ಲೂಕಿನ ಜೈ¸ಭುವನೇಶ್ವರಿ ಒಕ್ಕಲಿಗರ ಸಂಘದ ಅಧ್ಯಕ್ಷ ಎಮ್.ಪಿ.ಅಶ್ವಥ್‌ಕುಮಾರ್, ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ, ಬೆಂ.ಪೂರ್ವ ತಾಲ್ಲೂಕಿನ ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಕಬ್ಬಡಿ ಪಿಳ್ಳಪ್ಪ, ಬೊಮ್ಮೆನಹಳ್ಳಿ ಮುನಿರಾಜ್, ಡಿ.ಪಿ.ರಾಮಯ್ಯ, ಅಶ್ವಥ್‌ನಾರಾಯಣ್, ಕೆ.ಪಿ ಶಾಮಣ್ಣ, ಅರವಿಂದಬಾಬು, ಚಿಕ್ಕಹನುಮಯ್ಯ ಇದ್ದರು.