Advertisement

ಪ್ರಸ್ತುತತೆಯಿಂದ ವಿಚಾರ ಜೀವಂತ

12:50 PM Jul 03, 2018 | Team Udayavani |

ಮೈಸೂರು: ಯಾವುದೇ ವಿಷಯದ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಗಳು ವಿಭಿನ್ನವಾದ ಅಭಿಪ್ರಾಯಗಳಿರಲಿದ್ದು, ಹಾಗೆಂದ ಮಾತ್ರಕ್ಕೆ ಅವರನ್ನು ಹತ್ಯೆ ಮಾಡುವುದು ತಪ್ಪು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ.ಮಧುಸೂದನ್‌ ಅಭಿಪ್ರಾಯಪಟ್ಟರು. 

Advertisement

ನಗರದ ಕಲಾಮಂದಿರದ ಆವರಣದ ಕಿರುರಂಗ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಚಾರ್ವಾಕ ನಾಟಕೋತ್ಸವ ಉದ್ಘಾಟಿಸಿ “ವೈಚಾರಿಕ ಚಿಂತನೆ ಮತ್ತು ಚಿಂತರಕ ಕಗ್ಗೊಲೆ’ ಎಂಬ ವಿಷಯದ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಯಾವುದೇ ವಿಚಾರಗಳು ಜೀವಂತವಾಗಿ ಉಳಿಯುವುದು ಅದರ ಪ್ರಸ್ತುತತೆಯಿಂದ ಮಾತ್ರ.

ಅಲ್ಲದೆ ಯಾವುದೇ ಚಿಂತಕರು ಸ್ವಾರ್ಥಿಗಳಲ್ಲ, ಅವರು ದೇಶಕ್ಕಾಗಿ, ಒಂದು ಸಮುದಾಯಕ್ಕಿಂತ ಮುಖ್ಯವಾಗಿ ಮಾನವೀಯ ಮೌಲ್ಯಗಳಿಗಾಗಿ ಚಿಂತಿಸುತ್ತಾರೆ. ಹೀಗಾಗಿ ಯಾವುದೇ ವಿಷಯದಲ್ಲಿ ಯಾರೊಬ್ಬರ ವೈಚಾರಿಕತೆಯನ್ನು ಕೊಲ್ಲಲು ಎಂದಿಗೂ ಸಾಧ್ಯವಿಲ್ಲ, ಚಿಂತಕರ ಕೊಂದವರಿಗೆ ಶಿಕ್ಷೆಯಾಗಬೇಕು ಎಂದರು. 

ಬೆಂಗಳೂರಿನ ಉಚ್ಚ ನ್ಯಾಯಾಲಯದ ನ್ಯಾಯವಾದಿ ಎಚ್‌.ಮೋಹನ್‌ಕುಮಾರ್‌ ಮಾತನಾಡಿ, ಇತ್ತೀಚೆಗೆ ಮೀಸಲಾತಿ ಏಕೆ ಬೇಕೆಂದು ಪ್ರಶ್ನಿಸುತ್ತಿರುವುದು ದೇಶದ ಅಖಂಡತೆಗೆ ಧಕ್ಕೆ ತರುತ್ತಿದೆ. ಇಂದು ಒಬ್ಬರ ಏಳಿಗೆಯನ್ನು ಇನ್ನೊಬ್ಬರು ಸಹಿಸಿಕೊಳ್ಳದ ಮನಸ್ಥಿತಿ ಎಲ್ಲರಲ್ಲೂ ಮನೆಮಾಡಿದ್ದು, ಒಬ್ಬರನ್ನು ಕಂಡರೆ ಮತ್ತೂಬ್ಬರಿಗೆ ಆಗುವುದಿಲ್ಲ.

ಬಂಧುತ್ವದ ಬಗ್ಗೆ ಇರುವ ವೈರುಧ್ಯ ಬಹುಶಃ ಬೇರೆ ಯಾವ ದೇಶದಲ್ಲೂ ಕಂಡು ಬರುವುದಿಲ್ಲ. ಇಲ್ಲಿ ಜಾತಿ, ಧರ್ಮಗಳ ನಡುವೆ ಬಾಂಧವ್ಯ ಇಲ್ಲದಂತಾಗಿದೆ. ಆದರೆ ಹಲವು ಧರ್ಮ, ಸಂಸ್ಕೃತಿಗಳು ಒಗ್ಗೂಡಿಸಿ ಭಾರತವಾಗಿದ್ದು, ಈ ಬಗ್ಗೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನ ಬರೆದ ವೇಳೆಯಲ್ಲೇ ಗಮನವಹಿಸಿ ಸಂವಿಧಾನದಲ್ಲೇ ಉಲ್ಲೇಖೀಸಿದ್ದು,

Advertisement

ಇಂತಹ ವೈರುಧ್ಯವನ್ನು ಭಾರತದ ಸಂವಿಧಾನದಲ್ಲಿ ಮಾತ್ರವೇ ಕಾಣಲು ಸಾಧ್ಯ ಎಂದ ಅವರು, ವೈವಿಧ್ಯತೆಯೇ ದೇಶದ ಲಕ್ಷಣ ಮತ್ತು ಶಕ್ತಿಯಾಗಿದ್ದು, ಈ ಶಕ್ತಿಯೊಂದಿಗೆ ನಾವೆಲ್ಲರೂ ಮುನ್ನಡೆಯೋಣ ಎಂದು ಹೇಳಿದರು. 

ವಿಚಾರವಾದಿಗಳಾದ ಪೊ›.ಕಾಳೇಗೌಡ ನಾಗವಾರ, ಮಲ್ಕುಂಡಿ ಮಹದೇವಸ್ವಾಮಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪರಿವರ್ತನ ಪತ್ರಿಕೆ ಸಂಪಾದಕ ಡಾ.ಕೃಷ್ಣಮೂರ್ತಿ ಚಮರಂ, ಚಾರ್ವಾಕ ಸಂಸ್ಥೆಯ ಅಧ್ಯಕ್ಷ ಗಿರೀಶ್‌ ಮಾಚಳ್ಳಿ ಹಾಜರಿದ್ದರು.

ಐದು ನಾಟಕ ಪ್ರದರ್ಶನ: ಚಾರ್ವಾಕ ಸಂಸ್ಥೆ ಆಯೋಜಿಸಿರುವ ಕಥಾನಾಟಕೋತ್ಸವ ಸೋಮವಾರದಿಂದ 5ರವರೆಗೆ ಕಿರುರಂಗಮಂದಿರದಲ್ಲಿ ನಡೆಯಲಿದೆ. ಜು.3ರಂದು “ಮತ್ತೂಬ್ಬ ಮಹಾಮಾಯಿ’, ಜು.4ರಂದು “ಪ್ಲೀಸ್‌ ಅರೆಸ್ಟ್‌ ಮಿ’ ಹಾಗೂ ಜು.5ರಂದು “ಕುರುಕ್ಷೇತ್ರ’ ನಾಟಕ ಪ್ರದರ್ಶನಗೊಳ್ಳಲಿದ್ದು, ನಾಟಕ ವೀಕ್ಷಣೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next