Advertisement

ಪ್ರಪಂಚಕ್ಕೆ ಬೆಳಕು ನೀಡಿದ ಮಾನವತಾವಾದಿ ಬುದ್ಧ

12:28 PM May 12, 2017 | Team Udayavani |

ತಿ.ನರಸೀಪುರ: ವಿಶ್ವದ ವಿವಿಧ ದೇಶಗಳದಾದ್ಯಂತ ಅರ್ಥ ಪೂರ್ಣವಾಗಿ ಬುದ್ಧ ಪೂರ್ಣಿಮಾ ಮಹೋ ತ್ಸವ ಆಚರಣೆಯಾಗುತ್ತಿದ್ದು, ಗೌತಮ ಬುದ್ಧರು ಭಾರತಕ್ಕಲ್ಲ ಇಡೀ ಪ್ರಪಂಚಕ್ಕೆ ಬೆಳಕು ನೀಡಿದ ಮಹಾ ಮಾನವತಾವಾದಿ ಎಂದು ಯೋಜನಾ ಆಯೋಗ ಜಂಟಿ ನಿರ್ದೇಶಕ ಡಿ.ಚಂದ್ರಶೇಖರಯ್ಯ ಹೇಳಿದರು.

Advertisement

ಪಟ್ಟಣದ ತ್ರಿವೇಣಿ ನಗರದದಲ್ಲಿರುವ ನಳಂದ ಬುದ್ಧವಿಹಾರದಲ್ಲಿ ಗೌತಮಬುದ್ಧ ಎಜುಕೇಷನ್‌ ಆ್ಯಂಡ್‌ ಕಲ್ಚರಲ್‌ ಟ್ರಸ್ಟ್‌ನ ವತಿಯಿಂದ ಹಮಿ ಕೊಂಡಿದ್ದ 2561ನೇ ಬುದ್ಧಪೂರ್ಣಿಮಾ ಮಹೋ ತ್ಸವದಲ್ಲಿ ಮಾತನಾಡಿ, 1907ರಲ್ಲಿನ ಬುದ್ಧ ಧರ್ಮ ಧಮನದಿಂದಾಗಿ ಭಾರತದಲ್ಲಿ ಬೆಳಕು ಮುಚ್ಚಿ ಹೋಗಿತ್ತು. ವಿಶ್ವಕ್ಕೆ ಶ್ರೇಷ್ಠ ಧರ್ಮ ನೀಡಿದ ಗೌತಮ ಬುದ್ಧರ ಬೆಳಕು ದೇಶದಲ್ಲಿ ಮುಚ್ಚಿ ಹೋಗಿದ್ದುದ್ದನ್ನು ಡಾ. ಬಿ.ಆರ್‌. ಅಂಬೇಡ್ಕರ್‌ ಹೊರ ತೆಗೆದರು ಎಂದರು.

ಸಿಂಧು ಬಯಲಿನ ನಾಗರಿಕತೆಯಿಂದಾಗಿ ಕರೆಯ ಲ್ಪಡುವ ಹಿಂದು ಧರ್ಮ ಜಾತಿ ಮತ್ತು ಅಸಮಾನತೆ ಯಿಂದ ಕೂಡಿದೆ. ಶೋಷಿತರು, ದಲಿತರು ಹಾಗೂ ಹಿಂ.ವರ್ಗಗಳು ಬುದ್ಧ ಧರ್ಮವನ್ನು ಅನುಸರಿಸದಿದ್ದರೆ ಕೋಮುವಾದಿಗಳ ಷಡ್ಯಂತ್ರದಿಂದ ಬದುಕು ಭೀಕರವಾಗಲಿದೆ. ಬುದ್ಧನ ಮಾರ್ಗದಲ್ಲಿ ಬೆಳಕಿನ ಕಡೆಗೆ ನಡೆಯಬೇಕಾದ ನಾವುಗಳ ಮೌಡ್ಯದ ಅಂದಕಾರದತ್ತ ಸಾಗುತ್ತಿರುವುದು ದೊಡ್ಡ ದುರಂತವಾಗುತ್ತಿದೆ ಎಂದು ಎಚ್ಚರಿಸಿದರು.

ಸುಪ್ರೀಂ ಕೋರ್ಟ್‌ ನ್ಯಾಯಾಧೀಶರೊಬ್ಬರು ಬಡ್ತಿ ಮೀಸಲಾತಿ ಪ್ರಕರಣದ ತೀರ್ಪಿನಲ್ಲಿ ಕದ್ದು ಬಡ್ತಿ ಪಡೆಯುತ್ತಿದ್ದಾರೆ ಎನ್ನುವ ಮೂಲಕ ದೇಶದಲ್ಲಿರುವ 35 ಕೋಟಿ ರೂ ದಲಿತರನ್ನು ಅಪಮಾನಿಸಿದ್ದಾರೆ. ತೀರ್ಪಿನ ಹಿಂದೆ ಜಾತಿ ಅಮಾನತೆಯನ್ನು ತರುವವರ ಕುತಂತ್ರವಿದೆ. ಶಿಕ್ಷಣದ ಮೂಲಕ ಶೋಷಿತ ವರ್ಗಗಳು ಪ್ರತಿಭಾವಂತರಾಗುತ್ತಿರುವುದನ್ನು ತಡೆ ಗಟ್ಟಲು ಮೀಸಲಾತಿಗೆ ಬಿಸಿ ನೀರು ಬಿಡುವ ಪ್ರಯತ್ನ ಇದಾಗಿದೆ. ಉತ್ತರ ಭಾರತದಲ್ಲಿ ಮೀಸಲಾತಿ ರದ್ದು ಗೊಳಿಸಿರುವುದರಿಂದ ಯಾವೊಬ್ಬ ಅಹಿಂದ ವರ್ಗದ ವ್ಯಕ್ತಿ ವೈದ್ಯನಾಗಲೂ ಸಾಧ್ಯವಿಲ್ಲದ ಸ್ಥಿತಿ ತಲೆದೂರಿದೆ ಎಂದು ವ್ಯಕ್ತಪಡಿಸಿದರು.

ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಗೌತಮ ಬುದ್ಧರ ಸಂದೇಶ ಹಾಗೂ ಸಿದ್ಧಾಂತಗಳು ಎಲ್ಲಾ ಕಾಲಕ್ಕೂ ಸರ್ವಕಾಲಿಕವಾಗಿದೆ. ಹುಣ್ಣಿಮೆಯಂದು ಹುಟ್ಟಿ, ಅದೇ ದಿನ ಜಾnನೋದಯವನ್ನು ಪಡೆದು, ಪರಿನಿಬ್ಟಾಣ ಹೊಂದಿದ ವಿಶಿಷ್ಟತೆ ಬುದ್ಧ ಹುಟ್ಟಿದ ನಾಡು ಭಾರತದಲ್ಲಿ ಕಾಣುತ್ತೇವೆ. ಬೋಧಿರತ್ನ ಭಂತೇಜಿ ಅವರ ಆಹ್ವಾನದಿಂದಾಗಿ ಇಂತಹ ವಿಶೇಷವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಹೆಮ್ಮೆಯೆನಿಸುತ್ತದೆ ಎಂದರು.

Advertisement

ಬುದ್ಧ ಧರ್ಮ ಬೆಳವಣಿಗೆಗೆ ಉತ್ತೇಜನ ನೀಡಲು ಹಾಗೂ ಗೌತಮಬುದ್ಧ ಎಜುಕೇಷನ್‌ ಆ್ಯಂಡ್‌ ಕಲ್ಚರಲ್‌ ಟ್ರಸ್ಟ್‌ನ ಶೈಕ್ಷಣಿಕ ಚಟುವಟಿಕೆಗಳ ವಿಸ್ತರಣೆ ಪ್ರೋತ್ಸಾಹ ನೀಡಲು ಅಗತ್ಯವಿರುವ 5 ಎಕರೆ ನಿವೇಶನವನ್ನು ಮಂಜೂರು ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಅವರ ಪುತ್ರ ಡಾ.ಯತೀಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು. 

ನಳಂದ ಬುದ್ಧ ವಿಹಾರದ ಬೋಧಿರತ್ನ ಭಂತೇಜಿ ಸಾನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಕೆ.ಮಹದೇವ, ಪ್ರಥಮ ದರ್ಜೆ ಗುತ್ತಿಗೆದಾರ ಹೊಸಪುರ ಕೆ.ಮಲ್ಲು, ಮಕ್ಕಳ ತಜ್ಞವೈದ್ಯ ಡಾ. ಶಿವಪ್ರಕಾಶ್‌, ಕರೋಹಟ್ಟಿ ಗ್ರಾಪಂ ಅಧ್ಯಕ್ಷ ಬಿ.ಎಂ.ಶಿವಕುಮಾರ್‌, ಭೈರಾಪುರ ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ, ದಸಂಸ ತಾಲೂಕು ಸಂಚಾಲಕ ಸೋಮಣ್ಣ, ಬಿಎಸ್‌ಎನ್‌ಎಲ್‌ ಸಲಹಾ ಸಮಿತಿ ಸದಸ್ಯ ಎನ್‌.ಸೋಮು,

ಗುತ್ತಿಗೆದಾರ ಬಸವರಾಜು, ಟ್ರಸ್ಟ್‌ನ ಅಧ್ಯಕ್ಷ ಬನ್ನೂರು ಪುಟ್ಟರಾಜು, ನಿರ್ದೇಶಕರಾದ ಬಿ.ಆರ್‌.ಪುಟ್ಟಸ್ವಾಮಿ, ಜಿ.ದೇವರಾಜು ಸೋಸಲೆ, ಕೆ.ಎನ್‌.ಪ್ರಭುಸ್ವಾಮಿ, ಮರಿಮಹದೇವಯ್ಯ, ಸೀನಪ್ಪ, ಕನ್ನಹಳ್ಳಿ ಮೂರ್ತಿ, ಎನ್‌.ಲಿಂಗಪ್ಪಾಜಿ, ಮುಖಂಡರಾದ ಎಂ.ವೆಂಕಟೇಶ್‌, ಆಲಗೂಡು ನಾಗರಾಜು, ತಾಯೂರು ಸಾಗರ್‌ ಹಾಗೂ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next