Advertisement

ಅಮೆರಿಕಾದಲ್ಲಿ  ಹುಬ್ಬಳ್ಳಿ ವೈದ್ಯನ ಸಾಧನೆ

03:54 PM Nov 28, 2020 | Adarsha |

ಲೂಯಿಸಿಯಾನ: ಕೊರೊನಾ ವಿರುದ್ಧದ ಹೋರಾಟದಲ್ಲಿ  ತಮ್ಮ ಕುಟುಂಬವನ್ನು ಲೆಕ್ಕಿಸದೆ ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿರುವ ಹುಬ್ಬಳಿ ವೈದ್ಯರೊಬ್ಬರ ಸಾಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಮೆಚ್ಚುಗೆಗೆ ಪಾತ್ರವಾಗಿದೆ.

Advertisement

38 ವರ್ಷದ ಡಾ| ಶ್ರೀಧರ ಕುಲಕರ್ಣಿ  ತಮ್ಮ ಕಾರ್ಯದ ಮೂಲಕ ಯುಎಸ್‌ನಲ್ಲಿ  ಗುರುತಿಸಿಕೊಂಡಿದ್ದಾರೆ. ಕೋವಿಡ್‌- 19 ರೋಗಿಗಳಿಗೆ ಚಿಕಿತ್ಸೆ  ನೀಡುವುದು ಮಾತ್ರವಲ್ಲ ವೈರಾಣು ಸುತ್ತಮುತ್ತಲಿನ ಭಾರತೀಯ ವೈದ್ಯರ ಕೆಲಸದ ಕುರಿತಾದ ಸಾಕ್ಷ್ಯಚಿತ್ರದಲ್ಲಿ ಪಾಲ್ಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಲೂಯಿಸಿಯಾನ ಸ್ಟೇಟ್‌ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ| ಶ್ರೀಧರ ಕುಲಕರ್ಣಿ, ಹಾಲಿವುಡ್‌ ಚಲನಚಿತ್ರ ಬರಹಗಾರ್ತಿ ಮತ್ತು ನಿರ್ಮಾಪಕಿ ಶ್ವೇತಾ ರಾಯ್‌ ನಿರ್ಮಿಸಿರುವ “ಎ ಪೆಂಡಾಮಿಕ್‌: ಅವೇ ಫ್ರಮ್‌ ದಿ ಮದರ್‌ ಲ್ಯಾಂಡ್‌ (2020)’ ಎಂಬ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರು ಭಾರತೀಯ ವೈದ್ಯರು ತಮ್ಮ ತಾಯ್ನಾಡು,  ಹೆತ್ತವರು ಹಾಗೂ ಕುಟುಂಬದಿಂದ ದೂರ ಉಳಿದುಕೊಂಡು ಸೇವೆ ಸಲ್ಲಿಸುತ್ತಿರುವುದನ್ನು ಸಾಕ್ಷ್ಯಚಿತ್ರದಲ್ಲಿ ಬಿಂಬಿಸಲಾಗಿದೆ.

ಇದನ್ನೂ ಓದಿ:ದೀಪಾವಳಿ ಆಚರಣೆ: ‘ರಾಗ ಆರೋಗ್ಯ’ ಸಂಗೀತ ಕಾರ್ಯಕ್ರಮ

ಡಾ| ಕುಲಕರ್ಣಿ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಲಘಟಗಿಯ ಜನತಾ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದರು. ಎಸೆಸೆಲ್ಸಿಯಲ್ಲಿ 20ನೇ ರ್‍ಯಾಂಕ್‌ ಪಡೆದ ಅವರು, ಧಾರವಾಡದ ಜೆಎಸ್‌ಎಸ್‌ನಲ್ಲಿ ಪಿಯುಸಿ ಮುಗಿಸಿ ಸಿಇಟಿಯಲ್ಲಿ 413ನೇ  ರ್‍ಯಾಂಕ್‌ ಪಡೆದರು. ಬಳಿಕ ಹುಬ್ಬಳ್ಳಿ ಕಿಮ್ಸ್ ನಲ್ಲಿ ಎಂಬಿಬಿಎಸ್‌ಗೆ ಸೇರಿ 2006ರಲ್ಲಿ ಕಿಮ್ಸ್ ಹುಬ್ಬಳ್ಳಿಯಲ್ಲಿ ಪದವಿ ಪೂರ್ಣಗೊಳಿಸಿದರು.

Advertisement

ಅನಂತರ ಸ್ಪ್ರಿಂಗ್‌ ಫೈಲ್ಡ್ ಲಿನಾಯ್ಸಗೆ ತೆರಳಿದ ಅವರು, ಅಲ್ಲಿ ಎಂಡಿ ಕೋರ್ಸ್‌ ಮುಗಿಸಿ ಸದ್ಯ ಲೂಸಿಯಾನ ರಾಜ್ಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಮೆಡಿಸಿನ್‌ ಸಿಮ್ಸ್ ನಲ್ಲಿ  2018ರಿಂದ ಕೆಲಸ ಮಾಡುತ್ತಿದ್ದಾರೆ.

ಡಾ| ಶ್ರೀಧರ ಅವರು ಐಸಿಯು ವಿಭಾಗದಲ್ಲಿ ತೀವ್ರವಾದ ಉಸಿರಾಟದ ತೊಂದರೆ ಸಿಂಡ್ರೋಮ್‌ (ಎಆರ್‌ಡಿಎಸ್‌) ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ  ಪರಿಣಿತಿ ಹೊಂದಿದ್ದಾರೆ. ಈ ಕುರಿತು ಸಂಶೋಧನಾ ಅಧ್ಯಯನದಲ್ಲಿ ಅವರು ಗಮನಾರ್ಹ ಕೆಲಸ ಮಾಡಿದ್ದು, ಕೋವಿಡ್‌ ರೋಗಿಗಳ ಉಸಿರಾಟದ ಸಮಸ್ಯೆಗಳ ಅತ್ಯಂತ ಆತಂಕಕಾರಿ ಲಕ್ಷಣ ಗುರುತಿಸುವಲ್ಲಿ ತಜ್ಞರಾಗಿದ್ದಾರೆ.

ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯೊಬ್ಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಹೆತ್ತವರಿಗೆ ಮಾತ್ರವಲ್ಲ ದೇಶವೇ ಹೆಮ್ಮೆ ಪಡುವಂತ ಸಾಧನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next