Advertisement

ಕಳವು ಮಾಡಲೆಂದು ಬಂದಾತ ಮನೆ ಮಾಲಕನಿಗೆ ಇರಿಯಲೆತ್ನಿಸಿ ಪರಾರಿಯಾದ

06:00 AM Mar 21, 2018 | Team Udayavani |

ಉಳ್ಳಾಲ: ಕಳವು ಮಾಡಲು ಬಂದ ವ್ಯಕ್ತಿ ಮನೆ ಮಾಲಕನಿಗೆ  ಎಚ್ಚರವಾದಾಗ ಚೂರಿಯಿಂದ ಇರಿಯಲು ಯತ್ನಿಸಿ ಪರಾರಿಯಾದ ಘಟನೆ ಪಿಲಾರು ಲಕ್ಷ್ಮೀಗುಡ್ಡೆ ಬಳಿ ನಡೆದಿದೆ. ಮಾಲಕ ಅಪಾಯವಿಲ್ಲದೆ ಪಾರಾಗಿದ್ದಾರೆ.

Advertisement

ಲಕ್ಷ್ಮಿಗುಡ್ಡೆ ನಿವಾಸಿ ಸಂಜೀವ ಗಟ್ಟಿ ಚೂರಿ ಇರಿತದಿಂದ ಪಾರಾದವರು. ನಿನ್ನೆ ತಡರಾತ್ರಿ ಮನೆಯ ಹಿಂಬದಿಯ ಬಾಗಿಲಿನ ಸರಳು ಮುರಿದು ಒಳನುಗ್ಗಿದ್ದ ಕಳ್ಳ ಮನೆಯೊಳಗೆ ತಡಕಾಡುತ್ತಿದ್ದಾಗ ಸಂಜೀವ ಗಟ್ಟಿ ಅವರಿಗೆ ಎಚ್ಚರವಾಯಿತು., ಬೆಳಗಿನ ಜಾವ ಪುತ್ರ ಜಾಗಿಂಗ್‌ಗೆ ತೆರಳಲು ಎದ್ದಿರಬೇಕು ಎಂದು ಮಲಗಿದಲ್ಲೇ ಯಾರು ಎಂದು ಕೇಳಿ ಟಾರ್ಚ್‌ ಹಾಕಿದಾಗ ಕಳ್ಳ ಓಡಲು ಅನುವಾಗಿದ್ದ. ಈ ಸಂದರ್ಭದಲ್ಲಿ ಅಪರಿಚಿತ ಮನೆಯೊಳಗಿಇರುವ ವಿಚಾರ ತಿಳಿಯುತ್ತಿದ್ದಂತೆ ಹಿಡಿಯಲು ಮುಂದೆ ಬಂದಾಗ ಆತ ಚೂರಿಯಿಂದ ಇರಿಯಲು ಯತ್ನಿಸಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕಳ್ಳ ಈ ವೇಳೆ ಪರಾರಿಯಾದ,

ಮನೆಯ ಬಗ್ಗೆ ತಿಳಿದವರಿಂದಲೇ ಕೃತ್ಯ: ಗಟ್ಟಿಯವರ ಕುಟುಂಬದ ದೈವಸ್ಥಾನದ ಕೆಲಸಕ್ಕೆ ಮಂಗಳವಾರ ಕೇರಳದಿಂದ ಮರ ತರುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ಹಣ ಇಟ್ಟಿರುವ ಮಾಹಿತಿ ತಿಳಿದೇ ಕಳ್ಳ  ಮನೆಗೆ ನುಗ್ಗಿದ್ದ. ‌ ಮನೆಯ ಕುರಿತು ಮತ್ತು ಸಂಜೀವ ಗಟ್ಟಿಯ ವಿಚಾರದಲ್ಲಿ ತಿಳಿದವರೇ ಈ ಕೃತ್ಯದಲ್ಲಿ ಭಾಗವಹಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂದರ್ಭದಲ್ಲಿ ಹಿಂಬದಿಯ ಬಾಗಿಲಿನ ಬಳಿ ರಕ್ತದ ಕಲೆ ಕಂಡು ಬಂದಿದ್ದು, ಕಳ್ಳನಕೈಗೆ ಗಾಯವಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.  ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದು, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next