ಕಲಘಟಗಿ: ಮನೆ-ಮನಗಳಲ್ಲಿ ಭಾರತ ಸೇವಾದಳ ಪ್ರಜ್ವಲಿಸುವುದರಿಂದ ಯುವ ಪೀಳಿಗೆಯಲ್ಲಿ ದೇಶ ಪ್ರೇಮದ ಜ್ಯೋತಿ ಬೆಳಗಿದೆ. ಜತೆಗೆ ದೇಶಕ್ಕೆ ಅಂಟಿಕೊಂಡ ಪಿಡುಗು ತೊಡೆದು ಹಾಕಲು ಸಹಕಾರಿಯಾಗಿದೆ ಎಂದು ಕ್ರೆಡಲ್ ಮಾಜಿ ಅಧ್ಯಕ್ಷ ಸಿ.ಎಂ. ನಿಂಬಣ್ಣವರ ಹೇಳಿದರು.
ಅವರು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ನಡೆದ ಭಾರತ ಸೇವಾದಳದ ಪ್ರಸಕ್ತ ಸಾಲಿನ ಮಕ್ಕಳ ಭಾವೈಕ್ಯ ಮೇಳದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶಕ್ಕೆ ನಾಯಕತ್ವದ ಕೊರತೆ ಕಳೆದ ಹಲವು ವರ್ಷಗಳಿಂದ ಕಾಡುತ್ತಿದ್ದು, ಪ್ರಸ್ತುತ ಪ್ರಬುದ್ಧ ಮತ್ತು ಪ್ರಭುತ್ವವಾದ ನಾಯಕತ್ವವನ್ನು ಪ್ರಧಾನಿ ನರೇಂದ್ರ ಮೋದಿ ನೀಡುತ್ತಿದ್ದಾರೆ.
ದೇಶದ ಸ್ವಾತಂತ್ರಗೊಳ್ಳುವ ಪೂರ್ವದಲ್ಲಿಯೇ ದೇಶಿಯವಾಗಿ ಹುಟ್ಟಿಕೊಂಡ ಭಾರತ ಸೇವಾದಳ ಬೆಳೆದಂತೆ ರಾಷ್ಟ್ರದ ಯುವ ಪೀಳಿಗೆಗೆ ದೇಶ ಪ್ರೇಮವನ್ನು ಬೆಳೆಸಿಕೊಂಡು ಜಾಗತಿಕವಾಗಿ ಶಾಂತಿ, ಸಹನೆ ಹಾಗೂ ಪ್ರೀತ್ಯಾದರದ ಬೀಜವನ್ನು ಬಿತ್ತಲು ಮುಂದಾಗಬೇಕು ಎಂದರು.
ಹನ್ನೆರಡುಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ, ಧಾರ್ಮಿಕ ತಳಹದಿಯ ಮೇಲೆಯೇ ಸರ್ವ ಜನಾಂಗವನ್ನು ಸಮಾನ ದೃಷ್ಟಿಕೋನದಿಂದ ಅಭಿವೃದ್ಧಿ ಪಡಿಸುತ್ತ ದೇಶದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಭಾರತ ಸೇವಾದಳದ ಶಿಸ್ತು ಸಹಕಾರಿಯಾಗಲಿದೆ ಎಂದರು.
ತಾಪಂ ಅಧ್ಯಕ್ಷೆ ವಿಜಯಲಕ್ಷಿ ಆಡಿನವರ ಮತ್ತು ಉಪಾಧ್ಯಕ್ಷ ಚಂದ್ರಗೌಡ ಪಾಟೀಲ ಅವರು ಜಂಟಿಯಾಗಿ ಭಾರತ ಸೇವಾದಳದ ಮಕ್ಕಳ ಪ್ರಭಾತ ಪೇರಿಗೆ ಚಾಲನೆ ನೀಡಿದರು. ತಾಲೂಕಿನ ಹಲವು ಶಾಲೆಗಳ ವಿದ್ಯಾರ್ಥಿಗಳಿಂದ ಲಾಟಿ, ಹೂಬ್ಸ್, ಲೇಜಿಮ್, ಡಂಬೆಲ್ಸ್ ಮತ್ತು ಸೇವಾದಳದ ಕವಾಯತ್‌ಗಳನ್ನು ಪ್ರದರ್ಶಿಸಲಾಯಿತು.
ಸೇವಾದಳದ ಜಿಲ್ಲಾ ಸಂಘಟಕ ಕಾಶಿನಾಥ ಹಂದ್ರಾಳ, ತಾಲೂಕು ಅಧ್ಯಕ್ಷ ಸಿ.ಎಫ್. ಸ್ವಾದಿ, ಉಪಾಧ್ಯಕ್ಷ ವಿ.ಎಸ್. ಪಾಟೀಲ, ಅಕ್ಷರ ದಾಸೋಹದ ಎ.ಎ. ಬೆಣ್ಣಿ, ದೈಹಿಕ ಶಿಕ್ಷಣಾಧಿಕಾರಿ ಎಸ್.ಎಂ. ಮಕ್ಕಣ್ಣವರ, ಐ.ವಿ. ಜವಳಿ, ಎಸ್.ಎ. ಮಣಕೂರ, ಉಮೇಶ ಬೇರೂಡಗಿ, ಎಲ್.ಸಿ. ಹೊಸಮನಿ, ಆರ್.ಎಂ. ಹೊಲ್ತಿಕೋಟಿ, ಲಾಡಸಾಬನವರ, ಎಚ್.ಬಿ. ದುಮ್ಮವಾಡ, ಎಫ್.ಎಂ. ಬಾಗವಾನ, ವಿ.ವಿ. ಆಲೂರ, ಎಫ್.ಎಸ್. ಹಿರೇಮಠ, ವಿಜಯಲಕ್ಷಿ ಐಹೊಳಿ, ರೇಖಾ ಜೋಶಿ, ಅಕ್ಕಮ್ಮ ಪಾಟೀಲ, ಎನ್.ಎಂ. ಮುತಾಲಿಕ್ ಇದ್ದರು.