ಬೆಂಗಳೂರು: ರಾಜ್ಯದಲ್ಲಿ ಜಾರಿಗೆ ತಂದಿರುವ ವಾರಾಂತ್ಯ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಕಾರಣದಿಂದ ಹೊಟೇಲ್ ಉದ್ಯಮಕ್ಕೆ ತೀವ್ರ ಸಂಕಷ್ಟ ಉಂಟಾಗಿದ್ದು, ಸುಮಾರು 18 ಸಾವಿರ ಕೋ. ರೂ. ನಷ್ಟ ಉಂಟಾಗಿದೆ ಎಂದು ಉದ್ಯಮಿಗಳು ಹೇಳುತ್ತಾರೆ.
ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಪ್ರಾರಂಭವಾದ ಬಳಿಕ ವಾರದ ಇತರ ದಿನಗಳಲ್ಲೂ ಜನರು ಹೊಟೇಲ್‌ಗಳತ್ತ ಮುಖ ಮಾಡುತ್ತಿಲ್ಲ. ಹೀಗಾಗಿ, ಶೇ. 40ರಿಂದ 45ರಷ್ಟು ಹೊಟೇಲ್ ಉದ್ಯಮಕ್ಕೆ ಹೊಡೆತ ಬಿದ್ದಿದೆ ಎಂದು ಕರ್ನಾಟಕ ರಾಜ್ಯ ಹೊಟೇಲುಗಳ ಸಂಘದ ಕಾರ್ಯದರ್ಶಿ ಮಧುಕರ್ ಶೆಟ್ಟಿ ಹೇಳಿದ್ದಾರೆ.
ಸರಕಾರ ಕರ್ಫ್ಯೂ ಜಾರಿಗೆ ತರುವ ಮೊದಲು ಗೂ ಮೊದಲು ಪಂಚತಾರ ಹೋಟೆಲ್‌ಗಳ ಕೊಠಡಿಗಳ ಬುಕ್ಕಿಂಗ್ ನಲ್ಲೂ ಸುಧಾರಣೆ ಕಂಡುಬಂದಿತ್ತು ಶೇ.60ರಿಂದ 70ರಷ್ಟು ಬುಕಿಂಗ್ ಆಗುತ್ತಿತ್ತು. ಆದರೆ ಈ ಸಂಖ್ಯೆ ಈಗ ಶೇ.10ಕ್ಕೆ ತಲುಪಿದ್ದು, ಉದ್ಯಮವನ್ನು ಉಳಿಸುವುದು ಕಷ್ಟವಾಗಿದೆ ಎಂದು ರಾಜ್ಯ ಹೊಟೇಲುಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಟಾರ್ ತಿಳಿಸುತ್ತಾರೆ.
ಇದನ್ನೂ ಓದಿ:ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ
ಮಹಾರಾಷ್ಟ್ರ ಮಾದರಿ ಮಾರ್ಗ ಸೂಚಿಯನ್ನು ರಾಜ್ಯದಲ್ಲೂ ಅಳವಡಿಸ ಬೇಕು. ಈಗಾಗಲೇ ಕೋವಿಡ್ ಹಿನ್ನೆಲೆ ಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಶೇ.30ರಷ್ಟು ಹೊಟೇಲುಗಳು ಮುಚ್ಚಿವೆ. ಕರ್ಫ್ಯೂನಿಂದ ಮತ್ತಷ್ಟು ಆರ್ಥಿಕ ಸಂಕಷ್ಟ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ಹೊಟೇಲುಗಳ ಸಂಘದ ಗೌರವ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.