ಪ್ರತೀ ವರ್ಷಕ್ಕಿಂತ ಹೆಚ್ಚು ತಾಪ ಇರಲಿದೆ ಎಂದ ಇಲಾಖೆ
ತೆಲಂಗಾಣ, ಆಂಧ್ರ ಕರಾವಳಿಗಳಲ್ಲಿ ಬಿಸಿಗಾಳಿ ಬಾಧೆ
Advertisement
ಹೊಸದಿಲ್ಲಿ: ಈ ವರ್ಷದ ಮಾರ್ಚ್‌ನಿಂದ ಮೇ ತಿಂಗಳವರೆಗಿನ ಅವಧಿಯಲ್ಲಿ ದೇಶದ ಆಗ್ನೇಯ ಭಾಗ, ಪಶ್ಚಿಮ, ಕೇಂದ್ರ ವಲಯ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಪ್ರತಿ ವರ್ಷ ಬೇಸಗೆಯಲ್ಲಿ ದಾಖಲಾಗುತ್ತಿದ್ದುದಕ್ಕಿಂತ ಅಧಿಕ ತಾಪಮಾನ ಇರಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಈ ಬೇಸಗೆಯಲ್ಲಿ ಈ ಪ್ರಾಂತ್ಯಗಳು ಕಾದ ಕುಲುಮೆಯಂತಾಗಲಿವೆಯೇ ಎಂಬ ಆತಂಕ ಸೃಷ್ಟಿಯಾಗಿದೆ.
ಬಿಸಿಗಾಳಿ ವಲಯದಲ್ಲಿರುವ ರಾಜ್ಯಗಳಾದ ರಾಜಸ್ಥಾನ, ಹಿಮಾಚಲ ಪ್ರದೇಶ, ಪಂಜಾಬ್, ದಿಲ್ಲಿ, ಉತ್ತರಾಖಂಡ, ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಬಿಹಾರ, ಛತ್ತೀಸ್‌ಗಢ, ಝಾರ್ಖಂಡ್, ಪ.ಬಂಗಾಲ, ಒಡಿಶಾ, ತೆಲಂಗಾಣ ಮತ್ತು ಮಹಾರಾಷ್ಟ್ರ, ಆಂಧ್ರಪ್ರದೇಶ ಕರಾವಳಿಯ ಕೆಲವು ಭಾಗಗಳಲ್ಲಿ ಅತ್ಯಧಿಕ ತಾಪಮಾನ ಇರಲಿದೆ ಎಂದು ಇಲಾಖೆ ತಿಳಿಸಿದೆ.