ಎಚ್.ಡಿ.ಕೋಟೆ: ಹಾಡಿ ಮಕ್ಕಳೊಂದಿಗೆ ಬೆರೆತು ಸಂತಸದಿಂದಲೇ ಅಕ್ಷರ ಕಲಿಯುತ್ತಿದ್ದ ಬಾಲಕಿ, ತಂದೆ ಸಾವನ್ನಪ್ಪಿದ ಬಳಿಕ ತಾಯಿಯೂ ಜೀವನ ಜಿಗುಪ್ಸೆ ಯಿಂದ ಆತ್ಮಹತ್ಯೆ, ದಿಕ್ಕೇ ತೋಚದಂತಾದ ಬಾಲಕಿ ನೆರವಿಗೆ ನಿಂತ ಅಧಿಕಾರಿಗಳು, ಸಾಂತ್ವನ ಕೇಂದ್ರಕ್ಕೆ ತಬ್ಬಲಿಯನ್ನು ಕರೆದೊಯ್ಯುವಾಗ ಹಾಡಿ ಜನತೆ, ಪುಟಾಣಿಗಳೊಂದಿಗೆ ಅಧಿಕಾರಿಗಳಕಣ್ಣೀರು… ಹೌದು,ಇದೆಲ್ಲಾ ನಡೆದಿದ್ದು ತಾಲೂಕಿನ ಅಣ್ಣೂರು ಹಾಡಿಯಲ್ಲಿ. ತಂದೆ, ತಾಯಿ ಸಾವನ್ನಪ್ಪಿದ ಹಿನ್ನೆಲೆ ತಬ್ಬಲಿಯಾದ ಅಪ್ರಾಪೆ¤ಯನ್ನು ಹಾಡಿ ಮಂದಿ ಬಾಲ ಕಿಯ ಭವಿಷ್ಯ ಮತ್ತು ಪೋಷಣೆ ಹಿತ ದೃಷ್ಟಿಯಿಂದ ತಾಲೂಕು ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದರು.
ಕೂಲಿ ಮಾಡುತ್ತಿದ್ದರು: ಅಣ್ಣೂರು ಹಾಡಿಯ ನಿವಾಸಿ ಗೌರಿ ಪತಿ ಮೃತಪಟ್ಟ ಬಳಿಕ ಕೂಲಿ ಮಾಡಿ ಕೊಂಡು ಹಾಡಿಯಲ್ಲಿ ಜೀವನ ನಡೆಸುತ್ತಿದ್ದರು. ಇವರಿಗೆ 6 ವರ್ಷದ ಸೌಮ್ಯಾಳ (ತಾಯಿ ಮತ್ತು ಮಗು ಇಬ್ಬರ ಹೆಸರು ಬದಲಿಸಲಾಗಿದೆ) ಪೋಷಣೆ ಹೊಣೆ ಹೊತ್ತ ಗೌರಿ, ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಕಳೆದ 4 ದಿನಗಳ ಹಿಂದೆ ಗೌರಿ ಅವರೂ, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿ ದ್ದರು. ಹೀಗಾಗಿ ತಂದೆ- ತಾಯಿ ಇಲ್ಲದ ತಬ್ಬಲಿಯ ಪರಿಸ್ಥಿತಿಯನ್ನು ಅದೇ ಹಾಡಿಯ ಅಂಗನವಾಡಿ ಕೇಂದ್ರದ ಸಹಾಯಕಿ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದು3-4 ದಿನ ತನ್ನ ವಶದಲ್ಲಿರಿಸಿಕೊಂಡರು.
ಬಿಕ್ಕಿ ಬಿಕ್ಕಿ ಅತ್ತರು: ಬುಧವಾರ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆಶಾ ಮತ್ತು ತಾಲೂಕು ಸಾಂತ್ವನ ಕೇಂದ್ರದ ಜಶೀಲಾ ಅವರಿಗೆ ಒಪ್ಪಿಸಿದರು. ಈ ಸಂದರ್ಭದಲ್ಲಿ ಕಳೆದ 6 ವರ್ಷಗಳ ಹಿಂದಿನಿಂದ ಹಾಡಿ ಮಂದಿ ಜತೆ ಹೊಂದಿಕೊಂಡಿದ್ದ ಬಾಲಕಿ ಸೌಮ್ಯಾ, ಹಾಡಿ ಬಿಟ್ಟು ಹೊರಡುವಾಗ ಹಾಡಿ ಮಕ್ಕಳು, ಹಾಡಿ ಮಂದಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆ ಸಹಾಯಕಿ ಬಿಕ್ಕಿಬಿಕ್ಕಿ ಅಳಲಾರಂಭಿಸಿದರು.
ಮಾನವೀಯತೆ ಜತೆಗೆ ಅಗಲಿಕೆಯ ಈ ದೃಶ್ಯ ಕಂಡ ಸಿಡಿಪಿಒ ಆಶಾ ಕೂಡ ತಮಗರಿವಿಲ್ಲದಂತೆ ಕಣ್ಣೀರಾಕಿದ ದೃಶ್ಯ ಮನಕಲಕುವಂತಿತ್ತು. ವಶಕ್ಕೆ ಪಡೆದುಕೊಂಡ ಬಾಲಕಿಯನ್ನು ಮೈಸೂರಿನ ಬಾಲಕಿ ಬಾಲಮಂದಿರಲ್ಲಿ ಆಶ್ರಯ ನೀಡಿ ನಂತರ ಹಿರಿಯ ಅಧಿಕಾರಿಗಳ ಸೂಚನೆಯಂತೆ ಮುಂದಿನ ಕ್ರಮವಹಿಸುವುದಾಗಿ ಆಶಾ ತಿಳಿಸಿದರು. 6 ವರ್ಷ ಹಾಡಿಯಲ್ಲಿ ಬೆಳೆದ ಆದಿವಾಸಿ ಬಾಲಕಿ ಯೊಬ್ಬಳು ಹಾಡಿ ತೊರೆಯುವ ಈ ಮನಕಲಕುವ ಸಂದರ್ಭ ಇದಾದರೂ ತಬ್ಬಲಿ ಬಾಲಕಿ ಭವಿಷ್ಯಕ್ಕೆ ಸಹಕಾರಿಯಾಗಿಲಿ ಎನ್ನುವುದು ಹಾಡಿಯ ಮತ್ತು ಇಲಾಖೆ ಅಧಿಕಾರಿಗಳ ಆಶಯವಾಗಿದೆ.
ಅಧಿಕಾರಿಗಳ ನಿರ್ದೇಶನದಂತೆ ಅಗತ್ಯ ಕ್ರಮ
ತಂದೆ-ತಾಯಿ ಇಲ್ಲದ ತಬ್ಬಲಿ ಬಾಲಕಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ವಶಕ್ಕೆ ಪಡೆಯಲಾಗಿದ್ದು ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿದೆ. ಮುಂದೆ ಮಕ್ಕಳಕಲ್ಯಾಣ ಸಮಿತಿ ನಿರ್ಧಾರದಂತೆಕ್ರಮ ವಹಿಸಲಾಗುವುದು ಎಂದು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಆಶಾ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ .
ಬಸವರಾಜ್ ಎಚ್.ಬಿ.