Advertisement

ಹಸುವಿನ ಮೂಗಿನಲ್ಲಿ ಬೆಳೆದ ಕೋಡುಗಳು!

01:18 PM Apr 27, 2017 | Team Udayavani |

ಧಾರವಾಡ: ಮೂಗಿನಲ್ಲಿ ಕೋಡುಗಳು ಬೆಳೆಯುವ ಮೂಲಕ ಮರೇವಾಡದ ಹಸುವೊಂದು ಸುದ್ದಿ ಆಗಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಮರೇವಾಡದ ರೈತ ಚಂದ್ರಶೇಖರ ಚೌಡಿಮನಿ ಎಂಬುವರ ಆಕಳ ಮೂಗಿನಲ್ಲಿ ಕೋಡುಗಳು ಮೂಡಿರುವ ಸಂಗತಿ ತಿಳಿದು ಪಶು ತಜ್ಞ ವೈದ್ಯರಾದ ಡಾ| ಎಸ್‌.ವಿ.ಸಂತಿ, ಡಾ| ಅಶೋಕ ಕರ್ಕೊಳ್ಳಿ, ಡಾ| ಮುತ್ತನಗೌಡ ಬಿರಾದಾರ ಹಾಗೂ ಪಶು ವೈದ್ಯಕೀಯ ಪರೀಕ್ಷಕ ಮಾರ್ತಾಂಡಪ್ಪ ಕತ್ತಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಹಸುವನ್ನು ಪರಿಶೀಲಿಸಿರುವ ತಜ್ಞ ವೈದ್ಯರು, ಆಕಳು ಮೂಗಿನಲ್ಲಿ ಕೋಡುಗಳು ಮೂಡಿರುವುದಕ್ಕೆ ಅನುವಂಶಿಕ ಕಾರಣಗಳನ್ನು ನೀಡಿದ್ದಾರೆ.

Advertisement

ಮೂಗಿನಲ್ಲಿ ಕೋಡುಗಳು ಮೂಡಿದ್ದು ನಮಗೂ ಆಶ್ಚರ್ಯ ಮೂಡಿಸಿದೆ. ಈ ಕೋಡುಗಳ ಬೆಳವಣಿಗೆ ಸಾಮಾನ್ಯ
ಕೋಡುಗಳಷ್ಟು ಇರುವುದಿಲ್ಲ. ಹೀಗಾಗಿ ಆಕಳ ಜೀವಕ್ಕೂ ಯಾವುದೇ ಅಪಾಯವಿಲ್ಲ. ಈ ಆಕಳು ಕರುವಿಗೂ ಈ
ರೀತಿ ಕೋಡು ಬೆಳೆಯಬಹುದು ಅಥವಾ ಬೆಳೆಯದೇ ಇರಬಹುದು ಎಂಬುದನ್ನು ಹಿರಿಯ ಪಶುವೈದ್ಯ ಡಾ|ಎಸ್‌.ವಿ. ಸಂತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next