Advertisement
ಆನೆ ಕಂದಕ, ಸೋಲಾರ್ ಬೇಲಿ, ಸಿಮೆಂಟ್ ಸ್ಲಾ éಬ್ ಅಳವಡಿಕೆ ಹೀಗೆ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಿದರೂ ಫಲಕಾರಿಯಾಗದಿದ್ದಾಗ ಕಂಡುಕೊಂಡದ್ದೇ ಜೇನು ಪೆಟ್ಟಿಗೆಯ ಸರಳ ಪ್ರಯೋಗ.
ಬದಲಿಸಿದ ಆನೆಗಳು !
ಕಳೆದ ಜನವರಿಯಲ್ಲಿ ಯೋಜನೆ ಅನುಷ್ಠಾನವಾಗಿತ್ತು. 6 ತಿಂಗಳ ಈ ಅವಧಿಯಲ್ಲಿ ಒಮ್ಮೆ ಮಾತ್ರ ಬೇರೆ ದಾರಿಯ ಮೂಲಕ ಆನೆಗಳು ತೋಟಕ್ಕೆ ನುಗ್ಗಿದ್ದವು. ಮರಳಿ ಹೋಗುವಾಗ ಜೇನು ಪೆಟ್ಟಿಗೆ ಇರುವಲ್ಲಿ ಬಂದರೂ ಹತ್ತಿರ ಬಂದಾಕ್ಷಣ ನಿಂತು ನೋಡಿ ಬೇರೆ ದಾರಿ ಹಿಡಿದಿದ್ದವು. ಇದು ಅಲ್ಲಿ ಅಳವಡಿಸಿರುವ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಆ ಬಳಿಕ ಆನೆಗಳು ಅವರ ತೋಟಕ್ಕೆ ಬಂದಿಲ್ಲ.
Related Articles
ಇತರೆಡೆ ಅಳವಡಿಕೆ
ಮಳೆಗಾಲದಲ್ಲಿ ಈ ಭಾಗದಲ್ಲಿ ಆನೆಗಳ ಹಾವಳಿ ಅಧಿಕ. ಈ ಮಳೆಗಾಲ ದಲ್ಲಿ ಆನೆ ಹಾವಳಿ ತಡೆಯುವಲ್ಲಿ ಜೇನು ಪೆಟ್ಟಿಗೆ ಪ್ರಯೋಗ ಎಷ್ಟರ ಮಟ್ಟಿಗೆ ಸಹಕಾರಿಯಾಗುತ್ತದೆ ಎಂಬು ದನ್ನು ನೋಡಿಕೊಂಡು ಮುಂದೆ ಇತರ ತೋಟಗಳಲ್ಲೂ ಈ ವಿಧಾನ ಅಳವಡಿಸುವ ಯೋಚನೆ ಸ್ಥಳೀಯರದ್ದು.
Advertisement
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವತಿಯಿಂದ ದ.ಕ., ಉಡುಪಿ ಜೇನು ವ್ಯವಸಾಯಗಾರರ ಸಹಕಾರ ಸಂಘದ ನೇತೃತ್ವದಲ್ಲಿ ಹನಿಮಿಷನ್ ಯೋಜನೆಯಡಿ 35 ಕೃಷಿಕರಿಗೆ ಜೇನು ಕೃಷಿ ತರಬೇತಿ ನೀಡಿ ಜೇನು ಕೃಷಿ ಮಾಡಲು ತಲಾ 10 ಪೆಟ್ಟಿಗೆಗಳನ್ನು ಜೇನು ಕುಟುಂಬ ಸಮೇತ ವಿತರಿಸಲಾಗಿತ್ತು. ಹೀಗೆ ದೊರೆತ ಜೇನು ಪೆಟ್ಟಿಗೆ ಗಳನ್ನು ದೇವರ ಗುಂಡದಲ್ಲಿ ಅಳವಡಿಸ ಲಾಗಿದೆ. ಪೆಟ್ಟಿಗೆಯಲ್ಲಿ ಉತ್ತಮ ಪ್ರಮಾಣದಲ್ಲಿ ಜೇನು ದೊರೆತಿದ್ದು, ಅಲ್ಪ ಆದಾಯವೂ ಕೈಸೇರಿದೆ.
ಪ್ರಥಮ ಪ್ರಯೋಗನಾಗರಹೊಳೆಯಲ್ಲಿ
ನಾಗರಹೊಳೆ ವ್ಯಾಪ್ತಿಯಲ್ಲಿ ಈ ಪ್ರಯೋಗವನ್ನು ಪೊನ್ನಂಪೇಟೆಯ ಫಾರೆಸ್ಟ್ರಿ ಕಾಲೇಜ್ ವತಿಯಿಂದ ನಡೆ ಸಿದ್ದು, ಅಲ್ಲಿ ಕಾಫಿ ತೋಟಕ್ಕೆ ಆನೆಗಳು ಬರುವುದು ಶೇ. 70ರಷ್ಟು ಕಡಿಮೆಯಾಗಿತ್ತು ಎಂದು ಅಧಿಕಾರಿ ಗಳು ಹೇಳಿದ್ದಾರೆ. ಜೇನು ಪೆಟ್ಟಿಗೆ ಇರಿಸಿದ ಬಳಿಕ ತೋಟಕ್ಕೆ ಆನೆ ಹಾವಳಿ ಕಡಿಮೆಯಾಗಿದೆ. ಒಮ್ಮೆ ಬೇರೆ ದಾರಿಯ ಮೂಲಕ ಬಂದರೂ ಪೆಟ್ಟಿಗೆ ಸಮೀಪ ಬಂದು ಬೇರೆ ದಾರಿ ಹಿಡಿದಿವೆ. ಮಳೆಗಾಲದಲ್ಲಿ ಆನೆ ಹಾವಳಿಯನ್ನು ನೋಡಿಕೊಂಡು ಈ ದಾರಿಯ ಮೂಲಕ ಬಾರದೆ ಇದ್ದರೆ ಆನೆ ಹಾವಳಿ ಇರುವ ಬೇರೆ ಕಡೆಗಳಲ್ಲೂ ಜೇನು ಪೆಟ್ಟಿಗೆ ಇರಿಸುವ ಬಗ್ಗೆ ಯೋಚನೆ ಮಾಡಿದ್ದೇವೆ.
– ಡಿ.ಸಿ. ಬಾಲಚಂದ್ರ ದೇವರಗುಂಡ,ಕೃಷಿಕರು