ಹೊಸೂರು: ಸುಶಿಕ್ಷಿತ ಸಮಾಜದಲ್ಲಿ ಚುನಾಯಿತ ಜಪ್ರತಿನಿಧಿಗಳು ಪ್ರಾಮಾಣಿಕತೆಯಿಂದ ಸಮಾಜಮುಖೀ ಚಿಂತನೆಗಳಿಂದ ತಮ್ಮ ಜನಪರಕಾರ್ಯವನ್ನು ಮಾಡಿದಾಗ ಮಾತ್ರ ಗ್ರಾಮಗಳು ಸಮೃದ್ಧಿ ಏಳಿಗೆಯನ್ನು ಹೊಂದಬಹುದು ಎಂದು ಶಾಸಕ ಸಾ.ರಾ ಮಹೇಶ್ ಹೇಳಿದರು.
ಕೆ.ಆರ್ ನಗರ ತಾಲೂಕಿನ ಹೊಸೂರು ಗ್ರಾಮದ ಪದವಿಪೂರ್ವ ಕಾಲೇಜಿನಲ್ಲಿ 17 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡ ಉದ್ಘಾಟನೆ ಮತ್ತು 27 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ 2 ಹೆಚ್ಚುವರಿ ಕೊಠಡಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು
ತಾಲೂಕಿನ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೂರ ದೃಷ್ಟಿಯಿಂದ ಆರು ಹೋಬಳಿ ಕೇಂದ್ರದ ಗಡಿ ಭಾಗಗಳಲ್ಲಿ ಪ್ರತಿ ಶಾಲೆಗೆ 8ಕೋಟಿ ರೂ.ಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿ 6 ಮೊರಾರ್ಜಿ ವಸತಿ ಶಾಲೆಗಳನ್ನು ತೆರೆಯಲಾಗಿದ್ದು ಇದರಿಂದ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.
ಈ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 10ಲಕ್ಷರೂಗಳ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲು ಅನುದಾನ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸೌಲಭ್ಯವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಶಾಖಾ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ ಪ್ರಪಂಚದಲ್ಲಿ ರಾಜನಂತಹ ಶ್ರೀಮಂತನಿಗಿಂತ ವಿದ್ವಾಂಸನಿಗೆ ಗೌರವ ಹೆಚ್ಚಿದ್ದು ವಿದ್ಯೆ ಇಲ್ಲದೇ ಇಂದಿನ ಆಧುನಿಕ ದಿನಮಾನಗಳಲ್ಲಿ ಬದುಕುವುದು ಅಸಾಧ್ಯ ಎನ್ನುವಂತಾಗಿದೆ ಎಂದರು.
ಜಿಪಂ ಸದಸ್ಯೆ ವೀಣಾಕೀರ್ತಿ, ತಾಪಂ ಸದಸ್ಯೆ ಮಮತಾ, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಭಾಸ್ಕರ್, ಸದಸ್ಯರಾದ ಅಜಯ್, ರೇಣುಕಮ್ಮ, ಟಿಎಪಿಸಿಎಂಎಸ್ ಸದಸ್ಯ ಎಸ್.ಟಿ ಕೀರ್ತಿ, ಸಿಡಿಸಿ ಅಧ್ಯಕ್ಷ ಸುದರ್ಶನ್, ಆಶ್ರಯ ಸಮಿತಿ ಮಾಜಿ ಸದಸ್ಯ ಬಿ.ರಮೇಶ್,
ಮಾಜಿ ಗ್ರಾಪಂ ಸದಸ್ಯರಾದ ಜಯಣ್ಣ, ಹೆಚ್.ಜೆ.ರಮೇಶ್, ಯುವ ಮುಖಂಡ ಜಯಶಂಕರ್‌ಕೋಟಿ ಗುತ್ತಿಗೆದಾರರಾದ ಹೊಸಳ್ಳಿ ಪುಟ್ಟರಾಜು ಡಿ.ಎಂ.ಮಹೇಶ್‌ರಾಜೇಶ್, ರಾಘವೇಂದ್ರ, ಎಚ್.ಕೆ.ಕೀರ್ತಿ ಉಪನ್ಯಾಸಕರಾದ ಉಮಶಂಕರ್ ಜಗದೀಶ್, ಶ್ರೀನಿವಾಸ್‌ಸಿಂಗ್, ನಾಗರತ್ನ, ರಮ್ಯ, ಮಂಜುಳಾ ಇತರರು ಇದ್ದರು.