Advertisement
ಕೊರೊನಾ ವೈರಾಣುವಿಗೆ ಹೆದರಿ ತವರಿಗೆ ಹೋಗುವಾಗ “ಜೀವ ಇದ್ದರೆ ಬೆಲ್ಲ ಬೇಡಿ ತಿನ್ನಬಹುದು’ ಎನ್ನುವುದು. ಸೋಂಕು ಇಳಿಕೆ ಆದ ಕೂಡಲೇ “ಊರಲ್ಲಿ ಮಳೆ ಇಲ್ಲ, ಬೆಳೆ ಇಲ್ಲ, ಜೀವನ ನಡೀಬೇಕಲ್ಲ’ ಎಂದು ಬೆಂಗಳೂರಿಗೆ ಮರಳುವುದು. ಸಂದರ್ಭಕ್ಕೆ ತಕ್ಕಂತೆ ಮಾತು ಬದಲಿಸುವ ಜನರು ಒಂದೆಡೆ ಆದರೆ, ಅನ್ನವನಿಕ್ಕಿದ, ಹಸಿವು ಮರೆಸಿದ ಬೆಂಗಳೂರನ್ನು ಬೈದುಕೊಂಡು ತಮ್ಮ ಊರಿಗೆ ತೆರಳುವವರು ಇನ್ನೊಂದೆಡೆ. ಸಣ್ಣ ವಯಸ್ಸಿನವರಿಂದ ವೃದ್ಧರವರೆಗೂ ದುಡಿದು ಬದುಕಲು ಅವಕಾಶಗಳಿರುವುದು ಬೆಂಗಳೂರಿನಲ್ಲಿ. ಕೇವಲ ನಮ್ಮ ರಾಜ್ಯದ ಹಳ್ಳಿಗಳಷ್ಟೇ ಅಲ್ಲ. ಹೊರ ರಾಜ್ಯದವರಿಗೂ ಶಿಕ್ಷಣ, ಉದ್ಯೋಗ ದೊರಕಿಸಿ ಸಲಹುತ್ತಿದೆ ಈ ನಮ್ಮ ಹೆಮ್ಮೆಯ ಬೆಂಗಳೂರು. ಏನಾದರಾಗಲಿ ಇದ್ದಾಗ ಊಟ ಮಾಡಿ, ಇಲ್ಲದಿದ್ದಾಗ ಉಪವಾಸವಿದ್ದರೂ ಸ್ವತಂತ್ರ ನಿರ್ಧಾರ ತೆಗೆದುಕೊಂಡು, ಸ್ವತಂತ್ರ ಜೀವನ ಕಟ್ಟಿಕೊಳ್ಳಲು ಅವಕಾಶಗಳನ್ನು ಕಲ್ಪಿಸಿದ ಬೆಂಗಳೂರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನಾನು ಹೊರ ಜಿಲ್ಲೆಯವಳೇ ಆದರೆ ಬೆಂಗಳೂರು ಎಂಬುದು ನನಗೆ ಕೇವಲ ಒಂದು ಜಿಲ್ಲೆಯಲ್ಲ. ಬೆಂಗಳೂರು ಎಂಬುದು ನನಗೆ ಭಾವನಾತ್ಮಕ ಸೆಲೆ…
Related Articles
Advertisement