Advertisement

ಗೋಹತ್ಯೆ ನಿಷೇಧ ಕಾಯ್ದೆ ಸಮಾಜದಲ್ಲಿ ಶಾಂತಿ ಕದಡುತ್ತದೆ

11:28 AM May 28, 2017 | Harsha Rao |

ಬೆಂಗಳೂರು: ಗೋ ಹತ್ಯೆ ನಿಷೇಧ ಕಾಯ್ದೆ ದೇಶದಲ್ಲಿ ಮೊದಲಿನಿಂದಲೂ ಜಾರಿಯಲ್ಲಿದೆ. ಆದರೆ, ಈಗ ಕೇಂದ್ರ ಸರ್ಕಾರ ಅದನ್ನು ಹೊಸದಾಗಿ ಜಾರಿಗೊಳಿಸಲು ಹೊರಟಿರುವುದು ಸಮಾಜದಲ್ಲಿ ಶಾಂತಿ ಕದಡುವ ರೀತಿಯಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಹೇಳಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರ 51ನೇ
ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಳೆಯ ಕಾಯ್ದೆಯನ್ನೇ ಬೇರೆ ರೂಪದಲ್ಲಿ ಜಾರಿಗೆ ತರುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದೆ. ಇದರಿಂದ ಸಾಕಷ್ಟು ಗೊಂದಲ ಸೃಷ್ಠಿಯಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಅದನ್ನು ಪರಾಮರ್ಶಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು.

Advertisement

ಹಿಂದೂಗಳ ಮತ ಸೆಳೆಯಲು ಗೋಹತ್ಯೆ ನಿಷೇಧ: ಎಚಿxಕೆ ವಿಜಯಪುರ: ವೃದ್ಧ ಗೋವುಗಳ ರಕ್ಷಣೆ ಹೇಗೆ ಎಂಬುದನ್ನು ಸ್ಪಷ್ಟೀಕರಿಸದೆ ಗೋಹತ್ಯೆ ನಿಷೇಧದ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಹಿಂದೂಗಳ ಮತ ಸೆಳೆಯಲು ರಾಜಕೀಯ ತಂತ್ರ ಮಾಡುತ್ತಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರ ಸ್ವಾಮಿ ಟೀಕಿಸಿದ್ದಾರೆ. ಶನಿವಾರ ನಗರದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾನೂನು ಮಾಡಿದವರು ವೃದ್ಧ ಗೋವುಗಳು, ಎತ್ತುಗಳ ರಕ್ಷಣೆ ಹೇಗೆಂದು ತಿಳಿಸಿಲ್ಲ.

ಗ್ರಾಮೀಣ ಪ್ರದೇಶದಲ್ಲಿ ಗೋವುಗಳ ರಕ್ಷಣಾ ಕೇಂದ್ರ ತೆರೆಯಬೇಕು. ಆ ಮೂಲಕ ಗೋವುಗಳ ಕುರಿತು ಮಾತನಾಡುವವರು ವೃದ್ಧ ಗೋವುಗಳ ರಕ್ಷಣೆಯ ಹೊಣೆ ಹೊರುವ ಮೂಲಕ ನಿಜವಾದ ಕಾಳಜಿ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.

ೋವುಗಳಿಗೆ ಪೂಜೆ
ಮೈಸೂರು: ದೇಶದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ನಗರದ ಕೃಷ್ಣರಾಜ ವಿಧಾನಸಬಾ ಕ್ಷೇತ್ರದ ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳು ಶನಿವಾರ ಗೋ ಪೂಜೆ ನಡೆಸಿದರು. ನಗರದ ಸಿದ್ದಪ್ಪ ವೃತ್ತದಲ್ಲಿರುವ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಮಾಜಿ ಸಚಿವ ಎಸ್‌.ಎ.ರಾಮದಾಸ್‌ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳಾ ಘಟಕದ ಕಾರ್ಯಕರ್ತೆಯರು, ಗೋವುಗಳಿಗೆ ಪೂಜೆ ಸಲ್ಲಿಸಿ, ಹುಲ್ಲು ತಿನ್ನಿಸಿ ಕೇಂದ್ರ ಸರ್ಕಾರದ ನಿಲುವನ್ನು ಬೆಂಬಲಿಸಿದರು. ರಾಮದಾಸ್‌ ಮಾತನಾಡಿ, 2012ರಲ್ಲಿ ನಾನು ಮತ್ತು ನನ್ನ ತಾಯಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದಾಗ ನನ್ನ ತಾಯಿ
ಗುಜರಾತ್‌ನಲ್ಲಿ ಗೋಹತ್ಯೆ ನಿಷೇಧಿಸಿರುವಂತೆ ರಾಷ್ಟ್ರಾದ್ಯಂತ ನಿಷೇಧಿಸುವಂತೆ ಮನವಿ ಮಾಡಿದ್ದರು ಎಂದು ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next