Advertisement

ಟಿಪ್ಪು ಸುಲ್ತಾನ್‌ ಇತಿಹಾಸ ಮರುರಚನೆಯಾಗಲಿ

07:15 AM Oct 23, 2017 | Harsha Rao |

ಇಂದೋರ್‌: ಟಿಪ್ಪು ಜಯಂತಿ ವಿವಾದ ಕರ್ನಾಟಕದಲ್ಲಿ ತಾರಕಕ್ಕೇರಿರುವ ಮಧ್ಯೆಯೇ, ಭಾರತದ ಇತಿಹಾಸವನ್ನು ಮರುರಚನೆ ಮಾಡಬೇಕು ಮತ್ತು ಟಿಪ್ಪು ಸುಲ್ತಾನ್‌ ಬಗ್ಗೆ ಚರ್ಚೆಯಾಗಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಹೇಳಿದ್ದಾರೆ.

Advertisement

ಭಾರತದ ಇತಿಹಾಸವನ್ನು ಸರಿಯಾಗಿ ಬರೆದಿಲ್ಲ. ಇದನ್ನು ಮರುರಚನೆ ಮಾಡಬೇಕಿದೆ. ಇತಿಹಾಸದಲ್ಲಿ ಟಿಪ್ಪು ಸುಲ್ತಾನನ ಸ್ಥಾನದ ಬಗ್ಗೆ ಚರ್ಚೆಯಾಗಬೇಕು ಎಂದು ಅವರು ಹೇಳಿದ್ದಾರೆ. ಭಾರತದ ಇತಿಹಾಸವನ್ನು ಬರೆದವರು ಬ್ರಿಟಿಷರ ಅಡಿಯಾಳಾಗಿದ್ದರು. ನಾವು ಹೆಮ್ಮೆ ಪಡಬಹುದಾದ ವ್ಯಕ್ತಿಗಳ ಬಗ್ಗೆ ಅವರು ಉತ್ತಮ ರೀತಿಯಲ್ಲಿ ಬರೆದಿಲ್ಲ. ಮಹಾರಾಣ ಪ್ರತಾಪ್‌ ಮತ್ತು ಅಕºರ್‌ ಒಂದೇ ಕಾಲದ ರಾಜರಾಗಿದ್ದರು. ಇತಿಹಾಸದಲ್ಲಿ ಅಕºರ್‌ನನ್ನು ಅತ್ಯುತ್ತಮ ರಾಜ ಎಂದು ಹಾಡಿ ಹೊಗಳಲಾಗಿದೆ. ಆದರೆ ಹುಲ್ಲಿನಿಂದ ರೊಟ್ಟಿ ಮಾಡಿಕೊಂಡು ತಿಂದು, ಕಾಡಿನಲ್ಲಿ ವಾಸಿಸಿ ದೇಶ ಮತ್ತು ಸಂಸ್ಕೃತಿಯನ್ನು ರಕ್ಷಿಸಿದ ಮಹಾರಾಣ ಪ್ರತಾಪ್‌ ಬಗ್ಗೆ ಇತಿಹಾಸದಲ್ಲಿ ಕಡಿಮೆ ಉಲ್ಲೇಖೀಸಲಾಗಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next