Advertisement

ಪದವಿ ಪಠ್ಯಕ್ಕೆ ರಂಗ ಸಾಧಕರ ಚರಿತ್ರೆ: ಪೋತೆ

03:54 PM Jun 19, 2017 | Team Udayavani |

ಕಲಬುರಗಿ: ಇನ್ನೂ ಮುಂದೆ ಪದವಿ ವಿದ್ಯಾರ್ಥಿಗಳಿಗೆ ರಂಗಭೂಮಿ ಸಾಧಕರ ಯಶೋಗಾಥೆಯ ಚರಿತ್ರೆಯನ್ನು ಪಠ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ಆಲೋಚನೆ ನಡೆದಿದೆ ಎಂದು ಗುಲಬರ್ಗಾ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ಎಚ್‌.ಟಿ. ಪೋತೆ ಹೇಳಿದರು. 

Advertisement

ಇಲ್ಲಿನ ಕುಮಾರೇಶ್ವರ ನಾಟ್ಯ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯಪುರದ ಯೋಗಾಪುರ ರಂಗಸೇವಾ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ರವಿವಾರ ಹಮ್ಮಿಕೊಂಡಿದ್ದ ರಂಗ ಸಂಭ್ರಮ ಹಾಗೂ ಸಂಘದ ನಾಲ್ಕನೆ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಈ ನಿಟ್ಟಿನಲ್ಲಿ ಹೈಕದವರೆ ಹೆಚ್ಚಾಗಿ ಇರುವ ರಂಗಭೂಮಿ ಸಾಧಕರ ಪುಸ್ತಕ ಹೊರಬಂದರೆ ಅದನ್ನು ಪಠ್ಯವನ್ನಾಗಿಸುವ ಕುರಿತು ಆಲೋಚನೆ ಮಾಡಲಾಗುವುದು. ಇದರ ಹೊಣೆಗಾರಿಕೆ ರಂಗ ಸಾಹಿತಿ ಗವೀಶ ಹಿರೇಮಠ ವಹಿಸಿಕೊಳ್ಳಬೇಕು, ಆಗಸ್ಟ್‌ನಲ್ಲಿ ನಡೆಯುವ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗುವುದು ಎಂದರು. 

ರಂಗ ಪರದೆ ಹಿಂದಿನ ಕಲಾವಿದರ ಕಷ್ಟಗಳನ್ನು ದೇವರೇ ಬಲ್ಲ, ತಮ್ಮ ನೋವುಗಳನ್ನು ಬದಿಗಿಟ್ಟು ನಮ್ಮನ್ನು ರಂಜಿಸುವ ಕಲಾವಿದರ ಬದುಕು ಹಸನಾಗುವಂತ ಕೆಲಸಗಳು ಆಗಬೇಕಿದೆ ಎಂದರು. ರಂಗಸಂಪನ್ನ ಮಾಲಿಕೆಯಲ್ಲಿ ಗವೀಶ ಹಿರೇಮಠ ರಚಿಸಿದ ಜೀವ ಜೀವಾಳ ಶ್ರೀಧರ ಹೆಗಡೆ ಕೃತಿ ಬಿಡುಗಡೆ ಮಾಡಿದರು.

ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕ ಡಾ| ವಿಕ್ರಮ್‌ ವಿಸಾಜಿ ಮಾತನಾಡಿ, ನಾಟಕಗಳನ್ನು ಆಡುವುದಕ್ಕಿಂತ ನಾಟಕಗಳನ್ನು ರಚನೆ ಮಾಡುವ ಕೈಗಳ ಕೊರತೆ ನಮ್ಮಲ್ಲಿದೆ. ಆ ಕಾರಣಕ್ಕಾಗಿ ನಾವು ಆಡಿರುವ ನಾಟಕಗಳನ್ನೇ ಪುನಃ ಆಡಬೇಕಾಗಿ ಬಂದಿದೆ. ಹುಬ್ಬಳ್ಳಿಯಲ್ಲಿ ಒಂದು ತಿಂಗಳ ನಾಟಕ ರಚನೆ ಶಿಬಿರ ನಡೆಯಿತು.

Advertisement

ಅಲ್ಲಿ ನಾಟಕಕಾರರು  ಹವ್ಯಾಸಿ, ರಂಗಭೂಮಿ ಮತ್ತು ಮಕ್ಕಳಿಗೆ ಸಂಬಂಧಿಸಿದ 35 ನಾಟಕಗಳನ್ನು ರಚನೆ ಮಾಡಿ ಕೊಟ್ಟಿದ್ದಾರೆ. ಮುಂದಿನ ದಶಕ ಈ ನಾಟಕಗಳನ್ನು ಆಡಲು ಅನುಕೂಲವಾಗಲಿದೆ ಎಂದರು. ಸಂಗಮೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ಇಂದಿರಾ ಮಾನ್ವಿಕರ ಕಾರ್ಯಕ್ರಮ ಉದ್ಘಾಟಿಸಿದರು.

ಪತ್ರಕರ್ತ ಪ್ರಭಾಕರ ಜೋಶಿ ಗ್ರಂಥ ಕುರಿತು ಮಾತನಾಡಿದರು. ಇದೇ ವೇಳೆ ರಂಗಸಾಧಕರಾದ ಪಿ.ಎಂ.ಮಣ್ಣೂರ್‌, ಶಂಕರಯ್ಯ ಘಂಟಿ, ಡಾ| ಅಮೃತ ಕಟಕೆ, ಶೋಭಾ ರಂಜೋಳಕರ್‌, ಎಚ್‌.ಶಂಕ್ರಪ್ಪ, ಮಮತಾ ಅರಳಿಹಳ್ಳಿ, ರಾಜಮ್ಮ ಹೆಗಡೆ, ಕಾವೇರಿ ಹುಮನಾಬಾದ, ಸಿದ್ರಾಮಪ್ಪ ಪೊಲೀಸ ಪಾಟೀಲ್‌ ಮತ್ತು ಶಿವಣ್ಣ ಹೂಗಾರ ಅವರಿಗೆ ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಮಣ್ಣೂರ ಮತ್ತು ಡಾ| ಕಟಕೆ ಮತ್ತು ಗವೀಶ ಹಿರೇಮಠ ಮಾತನಾಡಿದರು. ಪತ್ರಕರ್ತ ಶರಣು ಗೊಬ್ಬೂರ, ಸಂಘದ ಅಧ್ಯಕ್ಷೆ ಎಸ್‌.ಜಿ.ತಾಳಿಕೋಟಿ, ಕಲಾವಿದ ನಟರಾಜ್‌ ಇದ್ದರು. ಸಂಘದ ಕಾರ್ಯದರ್ಶಿ ಎಲ್‌.ಬಿ.ಶೇಖ್‌ ಮಾಸ್ತರ ಸ್ವಾಗತಿಸಿದರು. ಕೆ.ಗಿರಿಮಲ್ಲ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಹೆಗಡೆ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next