Advertisement
ರಾಹುಲ್ ಗಾಂಧಿಯವರಿಗೆ ಈಗ ಹಠಾತ್ತನೆ ಹಿರಿಯರ ಬಗ್ಗೆ ಹೊಸದಾಗಿ ಗೌರವ ಹುಟ್ಟಿಕೊಂಡಿದೆ ಮತ್ತು ಬಿಜೆಪಿಯ ಶಿಸ್ತಿನ ಸೈನಿಕ ಪ್ರಧಾನಿ ಮೋದಿ ವಿರುದ್ಧ ಅವರು ಹಾಸ್ಯಾಸ್ಪದ, ಆಧಾರರಹಿತ ಆರೋಪಗಳನ್ನು ಮಾಡಲಾರಂಭಿಸಿದ್ದಾರೆ. “ಮೋದಿ ತಮ್ಮ ಕೋಚ್ ಆಡ್ವಾಣಿಯವರ ಮುಖಕ್ಕೆ ಪಂಚ್ ಮಾಡಿದರು’ ಎಂಬ ರಾಹುಲ್‌ರ ಹೇಳಿಕೆಯಲ್ಲಿ ಕಾಂಗ್ರೆಸ್‌ನ ಹತಾಶೆ ಮತ್ತು ಯುವರಾಜನ ಅಹಂಕಾರ ಕಾಣಿಸುತ್ತಿದೆ.ಬಹುಶಃ ರಾಹುಲ್ ಗಾಂಧಿಯವರು ಜಾಣ ಮರೆವಿನಿಂದ ಬಳಲುತ್ತಿದ್ದಾರೆ ಎನಿಸುತ್ತದೆ. ಇದೇ ರಾಹುಲ್ ಅವರು ನವದೆಹಲಿಯ ಪತ್ರಿಕಾಗೋಷ್ಠಿ ಯೊಂದರಲ್ಲಿ ಮನಮೋಹನ್ ಸಿಂಗ್ ಸರ್ಕಾರದ ಸುಗ್ರೀವಾಜ್ಞೆಯನ್ನು ಹರಿದುಹಾಕಿದ್ದರು ಎನ್ನುವುದನ್ನು ನೆನಪಿಸಬೇಕಿದೆ. ಕಾಂಗ್ರೆಸ್‌ನ ಕುಟುಂಬದವರು ಹೀಗೆ ಹಿರಿಯರಿಗೆ ಅಗೌರವ ತೋರಿಸಿದ ಅನೇಕ ಉದಾಹರಣೆಗಳು ಇವೆ.
Related Articles
ಬಿಜೆಪಿಯಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಯವರನ್ನು ಪ್ರಧಾನಿಯನ್ನಾಗಿಸಲಾಯಿತು, ಶ್ರೀ ಅಡ್ವಾಣಿ ಅವರು ಉಪಪ್ರಧಾನಿಯಾದರು. 2009ರಲ್ಲಿ ಅಡ್ವಾಣಿಯವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದರು. ಆ ಸಮಯದಲ್ಲಿ ನೀವೆಲ್ಲ ಅಡ್ವಾಣಿಯವರನ್ನು ಕಟ್ಟರ್ ಹಿಂದುತ್ವ ಪ್ರತಿಪಾದಕ ಎಂದು ಅಪಪ್ರಚಾರ ನಡೆಸುತ್ತಿದ್ದಿರಿ. ಅಡ್ವಾಣಿಯವರು ಮೂರು ಬಾರಿ ಬಿಜೆಪಿಯ ಅಧ್ಯಕ್ಷರಾಗಿದ್ದವರು.
Advertisement
ನೀವು ನಿಮ್ಮ ನಾಯಕತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದಿರಿ ಮತ್ತು ಅನೇಕ ರಾಜಕೀಯ ಎದುರಾಳಿಗಳನ್ನು ಜೈಲಿಗಟ್ಟಿದಿರಿ. ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಿದ್ದಷ್ಟೇ ಅಲ್ಲದೇ, ಪತ್ರಿಕಾ ಸ್ವಾತಂತ್ರ್ಯದ ಮೇಲೂ ಸೆನ್ಸರ್‌ಶಿಪ್ ಹೇರಿದಿರಿ.ಅಂದು ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ಅಟಲ್‌ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ, ರಾಜಮಾತಾ ಸಿಂದಿಯಾ ಅವರನ್ನೆಲ್ಲ ಬಂಧನದಲ್ಲಿ ಇಡಲಾಯಿತು. ಕಾಂಗ್ರೆಸ್‌ನಲ್ಲಿ ನಿಮ್ಮ ಕುಟುಂಬದವರನ್ನು ಬಿಟ್ಟು ಬೇರೆ ಯಾರಿಗೂ ನೀವು ಇದುವರೆಗೂ ಉನ್ನತ ಸ್ಥಾನ ಪಡೆಯಲು ಬಿಟ್ಟಿಲ್ಲ. ತನ್ನದೇ ಪಕ್ಷದ ಹಿರಿಯ ನಾಯಕರಿಗೆ ಅವಮಾನ ಮಾಡುವ ಇತಿಹಾಸ ಕಾಂಗ್ರೆಸ್‌ಗೆ ಇದೆ. ಈಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ, ತಮ್ಮ ಪಕ್ಷವು ಹಿರಿಯರನ್ನು ಗೌರವಿಸುತ್ತದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇವೆಲ್ಲವೂ ಸತ್ಯಕ್ಕೆ ದೂರವಾದ ಸಂಗತಿಗಳು.
(ಕೃಪೆ: ಟೈಮ್ಸ್ ಆಫ್ ಇಂಡಿಯಾ) ಪ್ರಕಾಶ್ ಜಾವಡೇಕರ್ ಕೇಂದ್ರ ಸಚಿವ