Advertisement

ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ; ಗುತ್ತಿಗೆದಾರರ ಸಂಘದ ಗಂಭೀರ ಆರೋಪ

03:02 PM Apr 13, 2022 | Team Udayavani |

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕು, ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಹೈಕೋರ್ಟ್ ಹಾಲಿ ನ್ಯಾಯಧೀಶರಿಂದ ನಡೆಸಬೇಕು ಎಂದು ರಾಜ್ಯ ಗುತ್ತಿಗೆದಾರರ ಅಸೋಸಿಯೇಷನ್ ಒತ್ತಾಯಿಸಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ,ಗುತ್ತಿಗೆದಾರನ ಸಾವಿಗೆ ಸರ್ಕಾರವೇ ನೇರ ಹೊಣೆ. ಕೂಡಲೇ ಬಾಕಿ ಇರುವ ಗುತ್ತಿಗೆ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಸಾವಿಗೆ ಯಾರು ಕಾರಣ ಅಂತ ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಸಚಿವರು ಶೇಕಡಾ 40  ರಷ್ಟು ಕಮೀಷನ್ ಕೇಳುತ್ತಿದ್ದಾರೆ ಅಂತ ಆರೋಪ ಮಾಡಿದ್ದರು. ದೆಹಲಿಗೆ ತೆರಳಿ ಅಮಿತ್ ಶಾ,ಪ್ರಧಾನಿ ಮೋದಿ ಅವರಿಗೂ ದೂರು ಸಲ್ಲಿಸಿದ್ದರು. ದೆಹಲಿಯಲ್ಲಿ ದೂರು ಕೊಟ್ಟಾಗಲೇ ಸ್ಪಂದನೆ ಮಾಡಿದ್ದರೆ ಜೀವ ಉಳಿಯುತ್ತಿತ್ತು. ಸಚಿವರು ಮಾನವೀಯತೆಯಿಂದ ನಡೆದುಕೊಂಡಿದ್ದರೆ ಜೀವ ಬಲಿಯಾಗುತ್ತಿರಲಿಲ್ಲ. ಟೆಂಡರ್ ಕರೆಯೋಕೆ 5 ರಷ್ಟು ಕಮಿಷನ್ ಕೊಡಬೇಕಾಗಿದೆ ಎಂದರು.

ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ

ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ನೀರಾವರಿ ಇಲಾಖೆಯಲ್ಲಿಯೂ ಕಮಿಷನ್  ದಂಧೆ ಹೆಚ್ಚು ನಡೆಯುತ್ತಿದೆ.ಆರೋಗ್ಯ ಸಚಿವ ಸುಧಾಕರ್, ಕಾರಜೋಳ ಅತಿ ಹೆಚ್ಚು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

Advertisement

ಗುತ್ತಿಗೆದಾರರು ಒಂದು ತಿಂಗಳು ಕೆಲಸ ಸ್ಥಗಿತಗೊಳಿಸುವಂತೆ ತೀರ್ಮಾನ ಕೈಗೊಂಡಿದ್ದು, ಮೇ 25 ರಿಂದ ಒಂದು ತಿಂಗಳು ರಾಜ್ಯಾದ್ಯಂತ ಕೆಲ್ಸ ಸ್ಥಗಿತಗೊಳಿಸುವುದಾಗಿ  ಹೇಳಿಕೆ ನೀಡಿದ್ದಾರೆ.

ಭ್ರಷ್ಟಚಾರ ಹೆಚ್ಚಿದ್ದರೂ ಸಿಎಂ ಮೌನವಾಗಿರುವುದು ಸರಿಯಲ್ಲ.ರೌಡಿಗಳ ಮೂಲಕ ಸಂತೋಷ್ ಗೆ ಬೆದರಿಕೆ ಹಾಕಿಸುವ ಕೆಲಸ ಸರ್ಕಾರ ಮಾಡಿದೆ. ನಮ್ಮ ಹತ್ತಿರ ಭ್ರಷ್ಟಚಾರದ ದಾಖಲೆಗಳಿವೆ. ಬಿಡುಗಡೆಗೆ ನಾವು ಹೆದರುತ್ತಿದ್ದೇವೆ.ನಮಗೆ ಕೊಲೆ ಬೆದರಿಕೆ ಬರುತ್ತಿದೆ. ಆದರೂ ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ. ಇದು ರೌಡಿಗಳ ಸರ್ಕಾರ ಎಂದು ನೇರ ಆರೋಪ ಮಾಡಿದರು.

ನೀರಾವರಿ ಇಲಾಖೆಯಲ್ಲಿ ಟೆಂಡರನ್ನು ಹೆಚ್ಚು ಮಾಡುವ ಕೆಲಸ ಆಗುತ್ತಿದ್ದಾಗ ಬೊಮ್ಮಾಯಿಗೆ 5 ಬಾರಿ ದೂರು ಕೊಟ್ವರೂ ಪ್ರಯೋಜನವಾಗಿಲ್ಲ. ಈ ಸರ್ಕಾರ ಶೇ. 40 ರಷ್ಟು ಕಮಿಷನ್ ಸರ್ಕಾರ. ಈಶ್ವರಪ್ಪ ರನ್ನ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ಆರೋಗ್ಯ ಇಲಾಖೆ, ನೀರಾವರಿ ಇಲಾಖೆ, ಬಿಬಿಎಂಪಿಯಲ್ಲಿ ಅತಿ ಹೆಚ್ಚು ಭ್ರಷ್ಟಚಾರ ನಡೆಯುತ್ತಿದೆ. ಆರೋಗ್ಯ ಸಚಿವ ಸುಧಾಕರ್ ನೇರವಾಗಿ ಕಮಿಷನ್ ಪಡೆಯುತ್ತಾರೆ.5 ರಷ್ಟು ಕಮಿಷನ್  ಕೊಟ್ಟರೆ ಟೆಂಡರ್ ಗೆ ಅನುಮೋದನೆ ಕೊಡುತ್ತಾರೆ. ಆರೋಗ್ಯ ಇಲಾಖೆ,ನೀರಾವರಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಅತೀ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿರುವ ಇಲಾಖೆಗಳು ಎಂದರು.

ನೀರಾವರಿ ಇಲಾಖೆಯಲ್ಲಿ ಏಜೆಂಟ್ ನೇಮಕ ಮಾಡಿದ್ದಾರೆ. ಅವರ ಮೂಲಕ ಕಮಿಷನ್ ಪಡೆಯುತ್ತಾರೆ. ಬಿಬಿಎಂಪಿಯಲ್ಲಿ 15 ರಷ್ಟು ಕಮಿಷನ್  ದಂಧೆ ನಡೆಯುತ್ತಿದೆ. ಲಂಚ ಕೊಟ್ಟಿರುವ ದಿನಾಂಕ ಎಲ್ಲವೂ ನಮ್ಮ‌ಬಳಿ ದಾಖಲೆ ಇದೆ. ಇಡೀ ರಾಜ್ಯದಲ್ಲಿ ಸುಧಾಕರ್ ಸಂಬಂಧಿಕರೇ ಗುತ್ತಿಗೆದಾರರು . ಆರೋಗ್ಯ ಇಲಾಖೆಯಲ್ಲಿ ಶೇಕಡಾ 60 ರಷ್ಟು ಕೆಲಸ ಅವರ ಸಂಬಂಧಿಕರೇ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ಶಾಸಕರ ಮಕ್ಕಳೇ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದುರ್ಗದ ಶಾಸಕರೊಬ್ಬರ ಮಗ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದು, ಇವತ್ತಿನಿಂದ 15  ದಿನ ಕಾಲಾವಕಾಶ ಕೊಡುತ್ತೇವೆ. ಭ್ರಷ್ಟಾಚಾರದ ದಾಖಲೆಗಳನ್ನ ಬಳಿಕ‌ ಬಿಡುಗಡೆ ಮಾಡುತ್ತೇವೆ ಎಂದು ಸಂಘದ ಉಪಾಧ್ಯಕ್ಷ ಮಂಜುನಾಥ್ ಹೇಳಿಕೆ ನೀಡಿದ್ದಾರೆ.

ಶಾಸಕರು, ಸಚಿವರು ನಮಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಮೊದಲು ಇದಕ್ಕೆ ಬ್ರೇಕ್ ಹಾಕುವ ಕೆಲಸ ಮಾಡಬೇಕು. ಕಮಿಷನ್ ನೀಡುತ್ತಿರುವುದರಿಂದ ಎಲ್ಲಾ‌ ಕಾಮಾಗಾರಿಗಳು ಕಳಪೆಯಿಂದ ಕೂಡಿವೆ. 10 ಸಾವಿರ ಕೋಟಿ ವೆಚ್ಚ ಮಾಡಿ ರಸ್ತೆ ನಿರ್ಮಾಣ ಮಾಡಲಾಗಿದೆ. ರಾಜರಾಜೇಶ್ವರಿ ನಗರದಲ್ಲಿ ಆ ರಸ್ತೆ ಕಳಪೆಯಿಂದ ಕೂಡಿದೆ. 2019 ರಿಂದ ಕಮಿಷನ್ ದಂಧೆ ಹೆಚ್ಚಾಗಿದೆ. ಪ್ರಧಾನಿ ಅವರಿಗೆ ಪತ್ರ ಕೊಟ್ಟ ಮೇಲೆ ಸಂತೋಷ್ ಗೆ ಬೆದರಿಕೆ ಹೆಚ್ಚಾಗಿತ್ತು, ಹೀಗಾಗಿ ತಲೆ ಮರೆಸಿಕೊಂಡು ಓಡಾಡುತ್ತಿದ್ದರು. ಶೀಘ್ರದಲ್ಲೇ ಸುಧಾಕರ್ ಭ್ರಷ್ಟಾಚಾರದ ಕುರಿತ ದಾಖಲೆ‌ ಬಿಡುಗಡೆ ಮಾಡುತ್ತೇವೆ. ಆ ಬಳಿಕ ಅವರೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next