Advertisement

ಕಲಾರಂಗದ ಮೇರು ಪರ್ವತ ಪ್ರಭಾಕರ ಜೋಷಿ

11:42 AM Jan 14, 2018 | Team Udayavani |

ಬೆಂಗಳೂರು: ಯಕ್ಷಗಾನ ಲೋಕವನ್ನು ಶ್ರೀಮಂತಗೊಳಿಸಿರುವ ಖ್ಯಾತ ಸಂಶೋಧಕ ಮತ್ತು ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಕಲಾರಂಗದ ಮೇರು ಪರ್ವತ ಎಂದು ವಿಮರ್ಶಕ ಎಸ್‌.ಆರ್‌. ವಿಜಯಶಂಕರ ಬಣ್ಣಿಸಿದ್ದಾರೆ.

Advertisement

ಶನಿವಾರ ಮಲ್ಲೇಶ್ವರದ ಹವ್ಯಕ ಸಭಾಭವನದಲ್ಲಿ ಸಪ್ತಕ ಸಂಸ್ಥೆ ಹಮ್ಮಿಕೊಂಡಿದ್ದ ಯಕ್ಷ ಸಂಕ್ರಾಂತಿ ತಾಳ ಮದ್ದಲೆ ಕಾರ್ಯಕ್ರಮದಲ್ಲಿ ಡಾ.ಎಂ. ಪ್ರಭಾಕರ ಜೋಷಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಯಕ್ಷಗಾನ ಸಾಹಿತ್ಯಕ್ಕೆ ಜೋಷಿ ಅವರ ಕೊಡುಗೆ ಅಪಾರ ಎಂದು ಹೇಳಿದರು.

ಜೋಷಿಯವರು ಸಂಶೋಧಕರಾಗಿ, ವಿದ್ವಾಂಸರಾಗಿ ಹಾಗೂ ಲೇಖಕರಾಗಿಯೂ ಅಪಾರ ಮೆಚ್ಚುಗೆ ಗಳಿಸಿದ್ದಾರೆ. ಸಾಕಷ್ಟು ಖ್ಯಾತಿ ಪಡೆದಿದ್ದರೂ ಸಾಮಾನ್ಯರ ರೀತಿಯಲ್ಲಿಯೇ ಇರುತ್ತಾರೆ. ಪ್ರಚಾರಗಳಿಂದ ಬಹುದೂರ ಉಳಿಯುವ ಇವರು ಹಲವರಿಗೆ ಮಾದರಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಎಂ. ಪ್ರಭಾಕರ ಜೋಷಿ, ನನ್ನ ಮನೆಯೊಳಗಿನ ಮಾತು ಮಠಾರಿ ಮತ್ತು ತುಳು ಆದರೂ ಕನ್ನಡ ಸಾಹಿತ್ಯದಲ್ಲಿ ಕೆಲವು ಕೃತಿಗಳನ್ನು, ಸಂಶೋಧನಾ ಗ್ರಂಥಗಳನ್ನು ಬರೆದಿದ್ದೇನೆ. ಇವೆಲ್ಲವನ್ನೂ ಕನ್ನಡಿಗರು ಸ್ವೀಕರಿಸಿದ್ದಾರೆ. ಅವರಿಗೆ ನಾನು ಚಿರಋಣಿ ಎಂದು ಹೇಳಿದರು. ಸಪ್ತಕ ಸಂಸ್ಥೆಯ ಸಂಚಾಲಕ ಜಿ.ಎಸ್‌.ಹೆಗಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next