ಬೆಂಗಳೂರು: ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಈ ಆದೇಶ ಹಿಜಾಬ್, ಕೇಸರಿ ಶಾಲಿಗೆ ಸಂಬಂಧಿಸಿದ್ದಾಗಿದೆ, ತಿಲಕ, ಕುಂಕುಮ, ಶಿಲುಬೆಗಳ ವಿಚಾರದಲ್ಲಿ ಹೈಕೋರ್ಟ್ ಏನೂ ಹೇಳಿಲ್ಲ, ವಿಷಯ ಡೈವರ್ಟ್ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕಂದಾಯ ಸಚಿವ ಅರ್ ಅಶೋಕ್ ಹೇಳಿದ್ದಾರೆ.
ವಿಜಯಪುರದ ಇಂಡಿ ಕಾಲೇಜಿನಲ್ಲಿ ಕುಂಕುಮಧಾರಿ ವಿದ್ಯಾರ್ಥಿಗೆ ಪ್ರವೇಶ ನಿರ್ಬಂಧ ಪ್ರಕರಣ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅತಿರೇಕದ ವ್ಯವಸ್ಥೆ. ಇಂಥ ಪ್ರಯತ್ನಗಳ ಮೇಲೆ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ ಬೆಂಬಲಿಗರಾಗಿದ್ದ, ಮಾಜಿ ಬಿಬಿಎಂಪಿ ಸದಸ್ಯ ಮಂಜುನಾಥ್ ಬಿಜೆಪಿ ಸೇರ್ಪಡೆ
ಕುಂಕು, ತಿಲಕ, ನಾಮ, ಶಿಲುಬೆ ಧಾರಣೆ ವಿಚಾರದಲ್ಲಿ ಸರ್ಕಾರವೂ ಯಾವುದೇ ಸೂಚನೆ, ಆದೇಶ ಮಾಡಿಲ್ಲ. ಇದು ಸೌಹಾರ್ದಯುತ ವಾತಾವರಣ ಕೆಡಿಸುವ ಪ್ರಯತ್ನ ಎಂದು ಹೇಳಿದರು.