Advertisement
ಜಿಪಂನಿಂದ ಉತ್ಛನ್ಯಾಯಾಲಯದ ಆವರಣದಲ್ಲಿ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಮ್ಮಿಕೊಂಡಿರುವ ಕಸ ತೆಗೆಯುವ ಹಾಗೂ ಗುಂಡಿ ತೋಡಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲಬುರಗಿ ಉತ್ಛ ನ್ಯಾಯಾಲಯದ ಆವರಣದಲ್ಲಿ ನವಿಲು, ಬಾತುಕೋಳಿಗಳು ತುಂಬಾ ಇವೆ. ಮೊಲ ಹಾಗೂ ಕೆಲವು ಬಾರಿ ಜಿಂಕೆಗಳು ಕಾಣುತ್ತವೆ. ಅವುಗಳಿಗೆ ಆಶ್ರಯ ನೀಡಲು ಪಕ್ಷಿಗಳಿಗೆ ಇಷ್ಟವಾದ ಹತ್ತಿಕಾಯಿ, ಹಣ್ಣಿನ ಗಿಡಗಳನ್ನು ಬೆಳೆಸಿ ಎಂದು ಹೇಳಿದರು.
ಇಲ್ಲಿಯೂ ಉದ್ಯೋಗ ಖಾತ್ರಿ ಯೋಜನೆಯ ಸಹಾಯದಿಂದ ಟ್ರೀ ಪಾರ್ಕ್ ನಿರ್ಮಿಸಬೇಕು. ಹೈಕೋರ್ಟ ಆವರಣ ಸಾರ್ವಜನಿಕ ಸ್ಥಳವಾಗುವುದರಿಂದ ತುಂಬಾ ಚೆನ್ನಾಗಿ ಅಭಿವೃದ್ಧಿ ಪಡಿಸಬೇಕು. ಕಲಬುರಗಿಗೆ ಇದೊಂದು ಆಸ್ತಿ ಆಗುವ ಹಾಗೆ ರೂಪುಗೊಳ್ಳಬೇಕು. ಈ ಭಾಗದಲ್ಲಿ ಹಲವು ಪ್ರಬೇಧದ ಪಕ್ಷಿಗಳಿವೆ. ದೂರದೇಶದ ಪಕ್ಷಿಗಳು ವಲಸೆ ಬರುತ್ತವೆ. ಅವುಗಳಿಗೆ ಹೈಕೋರ್ಟ್ ಆವರಣ ಆಶ್ರಯ ತಾಣವಾಗಿ ನಿರ್ಮಾಣಗೊಳ್ಳಬೇಕು ಎಂದರು.
Related Articles
Advertisement
ಶರಣಸಿರಸಗಿ ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ಮಾತನಾಡಿ, ಶರಣಸಿರಸಗಿ ಗ್ರಾಮದಲ್ಲಿ ಎಲ್ಲರೂ ವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಕೊಂಡಿದ್ದಾರೆ. ಗ್ರಾಮದ ಯಾರೂ ಸಹ ಶೌಚಕ್ಕಾಗಿ ಬಯಲಿಗೆ ಹೋಗುವುದಿಲ್ಲ. ನಾನೂ ಸಹ ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ್ದೇನೆ. ಉದ್ಯೋಗ ಖಾತ್ರಿ ಯೋಜನೆ ಗ್ರಾಮದ ವಿಕಾಸಕ್ಕೆ ಬಹು ಉಪಯುಕ್ತವಾಗಿದೆ ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಪಾಲಿಕೆ ಆಯುಕ್ತ ರಘುನಂದನ ಮೂರ್ತಿ,ಅರಣ್ಯ ಸಂರಕ್ಷಣಾ ಧಿಕಾರಿ ಶಿವಶಂಕರ, ಅರಣ್ಯ ಇಲಾಖೆ ಅಧಿಕಾರಿ ಬಿ.ಎನ್. ಚವ್ಹಾಣ, ಹೈಕೋರ್ಟ್‌ನ ಎ.ಆರ್.ಜಿ. ಅಸೋಡೆ, ಜಿಪಂ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಹಾಜರಿದ್ದರು. ಶರಣಸಿರಸಗಿ ಗ್ರಾಮದ 40 ಉದ್ಯೋಗ ಖಾತ್ರಿ ಕಾರ್ಮಿಕರಿಂದ 30 ದಿನಗಳ ಕಾಲ ಹೈಕೋರ್ಟ್ ಆವರಣದಲ್ಲಿ ಸೂಬಾಬುಲ್ ಗಿಡಗಳನ್ನು ಹಾಗೂ ಹುಲ್ಲು ಸ್ವತ್ಛಗೊಳಿಸುವುದು, ಗುಂಡಿ ತೋಡುವುದು ಹಾಗು ಸಸಿಗಳನ್ನು ನೆಡುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.