ವಿಜಯಪುರ: “ಬಿಜೆಪಿ ಹೈಕಮಾಂಡ್ ಸ್ಥಳೀಯ ನಾಯಕರನ್ನು ಇನ್ನು ಮುಂದೆ ವಿಶ್ವಾಸಕ್ಕೆ ತೆಗೆದುಕೊಂಡು ಆದ್ಯತೆ ನೀಡಲಿದೆ ಎಂಬ ವಿಶ್ವಾಸವಿದೆ. ಏಕೆಂದರೆ ಮಹಾರಾಷ್ಟ್ರ, ಹರ್ಯಾಣ ರಾಜ್ಯಗಳ ವಿಧಾಸಭೆ ಚುನಾವಣೆಯಲ್ಲಿನ ಹಿನ್ನಡೆಯಿಂದ ಪಾಠ ಕಲಿಯಬೇಕಿದೆ’ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ, 30 ಸಾವಿರ ಮತಗಳಿಂದ ಸೋತವರು ಮಹಾರಾಷ್ಟ್ರ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿದ್ದರು. ಅದರಲ್ಲೂ ನಮ್ಮ ಭಾಗದಿಂದ ದೊಡ್ಡ ದೊಡ್ಡವರೆಲ್ಲ ಪ್ರಚಾರಕ್ಕೆ ಹೋಗಿದ್ದರು. ಬಿಜೆಪಿ ಬಹುಮತ ಪಡೆದು ಅನಾಯಾಸವಾಗಿ ಅಧಿಕಾರಕ್ಕೆ ಬರುತ್ತದೆ ಎಂದೆಲ್ಲ ಹೇಳಿಕೊಂಡಿದ್ದರು. ಆದರೆ ಅವರು ಹೋದಲ್ಲೆಲ್ಲ ಬಿಜೆಪಿ ಸೋತು ಹೋಗಿದೆ.
ಹೀಗಾಗಿ ಪಕ್ಷದ ವರಿಷ್ಠರು ಇನ್ನಾದರೂ ಆಯಾ ರಾಜ್ಯಗಳಲ್ಲಿ ಸ್ಥಳೀಯ ನಾಯಕರಿಗೆ ಆದ್ಯತೆ ನೀಡಿ, ಗೌರವ ನೀಡಲೇಬೇಕು’ ಎಂದರು. ಬಿಜೆಪಿಗೆ ನೋವಾದರೆ ನಮ್ಮ ತಾಯಿಗೆ ನೋವಾದಂತೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ಅನ್ಯಾಯ ಆದಾಗ ನಾನು ಮಾತನಾಡುತ್ತೇನೆ. ಆದರೆ ನಮ್ಮ ಪಕ್ಷದ ಕೆಲವು ನಾಯಕರು ನನ್ನನ್ನು ಪಕ್ಷದಿಂದ ಉಚ್ಚಾಟಿಸುವ ಹುನ್ನಾರ ನಡೆಸಿದ್ದಾರೆ. ನನ್ನನ್ನು ಉಚ್ಚಾಟಿಸಿದ ಬಳಿಕವೇ ವಿಜಯಪುರ ನಗರಕ್ಕೆ ಬರುವ ಮಾತನ್ನೂ ಆಡಿದ್ದಾರೆ.
ಆದರೆ ಅವರ ಬಯಕೆ ಈಡೇರುವುದಿಲ್ಲ ಎಂದರು. ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹಿನ್ನಡೆ ಆಗಲು ಕರ್ನಾಟಕದಿಂದ ಪ್ರಚಾರಕ್ಕೆ ಹೋಗಿದ್ದ ಬಿಜೆಪಿ ಮುಖಂಡರೇ ಕಾರಣ ಎಂದರು. ಕಾಂಗ್ರೆಸ್-ಜೆಡಿಎಸ್‌ನ 17 ಶಾಸಕರು ರಾಜೀನಾಮೆ ನೀಡಿದ ಪರಿಣಾಮ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅನರ್ಹ ಶಾಸಕರು ಬಿಜೆಪಿಗೆ ಬಂದರೆ ಅವರಿಗೆ ಟಿಕೆಟ್ ನೀಡಿ, ಗೆಲ್ಲಿಸಬೇಕು. ಅವರಿಗೂ ಅ ಧಿಕಾರ ನೀಡವುದು ನಮ್ಮ ಪಕ್ಷದ ಜವಾಬ್ದಾರಿ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.