Advertisement
ಸುದ್ದಿಗಾರರ ಜತೆ ಅವರು ಮಾತನಾಡಿ, ಡಿ.ಕೆ.ಶಿವಕುಮಾರ್ ಪ್ರತ್ಯಂಗಿರಾ ಹೋಮ ಮಾಡಿದ್ದಾರೆ. ಅವರ ಶತ್ರುಗಳು ಯಾರು? ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ರಾಜಣ್ಣ ಅವರಿದ್ದಾರೆ. ಅವರೆಲ್ಲ ನಾಶವಾಗಲೆಂದು ಈ ಹೋಮ ಮಾಡಿದ್ದಾರೆ. ಸಿಎಂ ಆಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಎಲ್ಲ ದೇಗುಲಗಳಿಗೆ ಅಡ್ಡಾಡುತ್ತಿದ್ದಾರೆ. ಆದರೆ ಕುರ್ಚಿ ಸಿಕ್ಕ ಮೇಲೆ ಮುಸ್ಲಿಮರು ನಮ್ಮ ಸಹೋದರರು, ಅವರಿಗೆ ಏನೇ ಮಾಡಿದರೂ ಹುಷಾರ್ ಎಂದು ಹೇಳುತ್ತಾರೆ. ಅಲ್ಲದೇ ಅವರ ವಿರುದ್ಧ ಒಂದು ದೊಡ್ಡ ತಂಡ ಸಿದ್ಧವಾಗಿದೆ. ಯಾರು ಶತ್ರು ನಾಶಕ್ಕಾಗಿ ಹೋಮ ಮಾಡಿದ್ದಾರೋ ಅವರೆಲ್ಲರೂ ಕೂಡಿಕೊಂಡೇ ಇವರನ್ನು ಮನೆಗೆ ಕಳಿಸುತ್ತಾರೆ ಎಂದರು.
ಸಿ.ಟಿ.ರವಿ ಪ್ರಕರಣದಲ್ಲಿ ಸುವರ್ಣಸೌಧದಲ್ಲಿ ಬಂದು ಗಲಾಟೆ ಮಾಡಿದ್ದು ಮುಸ್ಲಿಮರು. ಲಕ್ಷ್ಮೀ ಹೆಬ್ಬಾಳಕರ್ ಗೂಂಡಾಗಿರಿ ಮಾಡಿಸುತ್ತಿದ್ದಾರೆ. ಇದು ಅವರಿಗೆ ಒಳ್ಳೆಯದಲ್ಲ. ಇದರ ಹಿಂದೆ ಡಿಕೆಶಿ ಇದ್ದಾರೆ ಎಂದು ಹೀಗೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೂರಿದರು. ಸುದ್ದಿಗಾರರ ಜತೆ ಮಾತನಾಡಿ, ಪಂಚಮಸಾಲಿ ಸಮಾಜದ ಸಭೆಗೆ ಬಂದಾಗ ಸಮಾಜದ ಮಗಳಾಗಿ ಬಂದಿದ್ದೇನೆ ಎಂದಿದ್ದರು. ವಿಧಾನಸೌಧದಲ್ಲಿ ನಾನು ಮಂತ್ರಿಯಾಗಿ ಹೋಗಿದ್ದೆ ಎಂದಿದ್ದಾರೆ. ಅಲ್ಲದೇ, ಪಂಚಮಸಾಲಿ ಸಮುದಾಯದ ಮೇಲಿನ ಲಾಠಿ ಚಾರ್ಜ್‌ನಲ್ಲಿ ಡಿಕೆಶಿ ಹಸ್ತಕ್ಷೇಪವಿದೆ. ಸರ್ಕಾರ ಪತನಕ್ಕೆ ಲಕ್ಷ್ಮೀ ಹೆಬ್ಟಾಳಕರ್ ಕಾರಣವಾಗುತ್ತಾರೆಂದು ಭವಿಷ್ಯ ನುಡಿದರು.