ಬೆಂಗಳೂರು: ವಿಧಾನಸಭೆ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಮುಕ್ತಾಯವಾಗಿದ್ದು, ಬೆಂಗಳೂರು ಮಹಾನಗರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರು ಕಣದಲ್ಲಿ ಉಳಿದಿದ್ದಾರೆ.
ಹಾಲಿ ಸಚಿವರಾದ ರಾಮಲಿಂಗಾರೆಡ್ಡಿ (ಬಿಟಿಎಂ ಲೇ ಔಟ್), ಕೆ.ಜೆ.ಜಾರ್ಜ್ (ಸರ್ವಜ್ಞನಗರ), ರೋಷನ್‌ಬೇಗ್ (ಶಿವಾಜಿನಗರ), ಕೃಷ್ಣಬೈರೇಗೌಡ (ಬ್ಯಾಟರಾಯಬಪುರ), ಎಂ.ಕೃಷ್ಣಪ್ಪ (ವಿಜಯನಗರ) ಮಾಜಿ ಸಚಿವರಾದ ದಿನೇಶ್ ಗುಂಡೂರಾವ್ (ಗಾಂಧಿನಗರ)ಕಾಂಗ್ರೆಸ್ ಅಭ್ಯರ್ಥಿಗಳಾಗಿ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ (ಪದ್ಮನಾಭನಗರ), ಮಾಜಿ ಸಚಿವರಾದ ಅರವಿಂದ ಲಿಂಬಾವಳಿ (ಮಹದೇವಪುರ), ಸುರೇಶ್ ಕುಮಾರ್ (ರಾಜಾಜಿನಗರ), ವಿ. ಸೋಮಣ್ಣ (ಗೋವಿಂದರಾಜನಗರ) ಕಟ್ಟಾಸುಬ್ರಮಣ್ಯ ನಾಯ್ಡು (ಶಿವಾಜಿನಗರ)ಬಿಜೆಪಿ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.
ಕಾಂಗ್ರೆಸ್‌ನ ಹಾಲಿ ಶಾಸಕರಾದ ಎಸ್.ಟಿ.ಸೋಮಶೇಖರ್ (ಯಶವಂಪುತರ), ಮುನಿರತ್ನ (ರಾಜರಾಜೇಶ್ವರಿನಗರ), ಬೈರತಿ ಬಸವರಾಜ್ (ಕೆ.ಆರ್.ಪುರ), ಎನ್.ಎ.ಹ್ಯಾರಿಸ್(ಶಾಂತಿನಗರ), ಪ್ರಿಯಕೃಷ್ಣ (ಗೋವಿಂದರಾಜನಗರ), ಆರ್.ವಿ.ದೇವರಾಜ್ (ಚಿಕ್ಕಪೇಟೆ), ಶಿವಣ್ಣ (ಆನೇಕಲ್) ಜಮೀರ್ ಅಹಮದ್ (ಚಾಮರಾಜಪೇಟೆ) ಅಖಂಡ ಶ್ರೀನಿವಾಸಮೂರ್ತಿ (ಪುಲಕೇಶಿನಗರ) ಬಿಜೆಪಿಯ ಮುನಿರಾಜು (ದಾಸರಹಳ್ಳಿ), ಎಂ.ಕೃಷ್ಣಪ್ಪ (ಬೆಂಗಳೂರು ದಕ್ಷಿಣ) ಅಶ್ವಥ್‌ನಾರಾಯಣ (ಮಲ್ಲೇಶ್ವರಂ),
ಎಸ್.ಆರ್. ವಿಶ್ವನಾಥ್ (ಯಲಹಂಕ), ಸತೀಶ್‌ರೆಡ್ಡಿ (ಬೊಮ್ಮನಹಳ್ಳಿ) ವಿಜಯಕುಮಾರ್ (ಜಯನಗರ) ಎಸ್.ರಘು (ಸಿ.ವಿ.ರಾಮನ್‌ನಗರ) ರವಿ ಸುಬ್ರಹ್ಮಣ್ಯ (ಬಸವನಗುಡಿ) ಜೆಡಿಎಸ್‌ನಿಂದ ಹಾಲಿ ಶಾಸಕ ಗೋಪಾಲಯ್ಯ (ಮಹಾಲಕ್ಷ್ಮಿ ಲೇ ಔಟ್) ಹಾಗೂ ಶ್ರೀಧರ್‌ರೆಡ್ಡಿ (ಶಾಂತಿನಗರ), ಪ್ರಭಾಕರ ರೆಡ್ಡಿ (ಬೆಂಗಳೂರು ದಕ್ಷಿಣ), ಪ್ರಸನ್ನಕುಮಾರ್ (ಪುಲಕೇಶಿನಗರ), ಪಿ.ರಮೇಶ್ (ಸರ್.ಸಿ.ವಿ.ರಾಮನ್‌ನಗರ),
ಅನ್ವರ್ ಷರೀಫ್ (ಸರ್ವಜ್ಞನಗರ), ಹನುಮಂತೇಗೌಡ (ಹೆಬ್ಟಾಳ), ಮಂಜುನಾಥ್ (ದಾಸರಹಳ್ಳಿ), ಜೇಡರಹಳ್ಳಿ ಕೃಷ್ಣಪ್ಪ (ರಾಜಾಜಿನಗರ) ರಾಮಚಂದ್ರ (ರಾಜರಾಜೇಶ್ವರಿನಗರ), ಹೇಮಚಂದ್ರ ಸಾಗರ್ (ಚಿಕ್ಕಪೇಟೆ), ಕಾಳೇಗೌಡ (ಜಯನಗರ) , ಬಾಗೇಗೌಡ (ಬಸವನಗುಡಿ), ಜವರಾಯಿಗೌಡ (ಯಶವಂತಪುರ) ಅಲ್ತಾಫ್ (ಚಾಮರಾಜಪೇಟೆ) ಕಣದಲ್ಲಿದ್ದಾರೆ. ಜನಾಂದೋಲನ ಮಹಾಮೈತ್ರಿ ವತಿಯಿಂದ ರವಿಕೃಷ್ಣಾರೆಡ್ಡಿ ಜಯನಗರದಲ್ಲಿ ಸ್ಪರ್ಧಿಸಿದ್ದಾರೆ.
ವಿಶೇಷವಾಗಿ ರಾಮಲಿಂಗಾ ರೆಡ್ಡಿ ಮಗಳು ಸೌಮ್ಯ ರೆಡ್ಡಿ ಸ್ಪರ್ಧಿಸುವ ಜಯನಗರ, ಮೇಯರ್ ಸಂಪತ್ ರಾಜ್ ಸ್ಪರ್ಧೆ ಮಾಡಿರುವ ಸಿ.ವಿ. ರಾಮನ್ ನಗರ, ಬಿಜೆಪಿ ತೊರೆದು ಜೆಡಿಎಸ್ ಸೇರಿರುವ ಜಮೀರ್ ಅಹಮದ್, ಅಖಂಡ ಶ್ರೀನಿವಾಸಮೂರ್ತಿ ಸ್ಪರ್ಧೆ ಮಾಡಿರುವ ಚಾಮರಾಜಪೇಟೆ ಹಾಗೂ ಪುಲಕೇಶಿ ನಗರ ಕ್ಷೇತ್ರಗಳು ಸಾಕಷ್ಟು ಕುತೂಹಲ ಮೂಡಿಸಿವೆ. ಯಶವಂತಪುರದಲ್ಲಿ ಬಿಜೆಪಿ ಕೊನೆ ಕ್ಷಣದಲ್ಲಿ ಜಗ್ಗೇಶ್ ಅವರನ್ನು ಕಣಕ್ಕಿಳಿಸಿ ಕುತೂಹಲ ಮೂಡುವಂತೆ ಮಾಡಿದೆ.