Advertisement

ಕೊಡಗಿನಲ್ಲಿ ಭಾರೀ ಮಳೆ ಇಂದು ಶಾಲಾ, ಕಾಲೇಜುಗಳಿಗೆ ರಜೆ

07:40 AM Jul 20, 2017 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜೀವನದಿ ಕಾವೇರಿ ಮೈದುಂಬಿಕೊಂಡಿದ್ದು, ಪ್ರಸಕ್ತ ಸಾಲಿನ ಪ್ರಥಮ ಪ್ರವಾಹ ಕಾಣಿಸಿಕೊಂಡಿದೆ. ಭಾಗ ಮಂಡಲ ಜಲಾವೃತಗೊಂಡು ದ್ವೀಪವಾಗಿ ಪರಿಣಮಿಸಿದೆ.

Advertisement

ವರ್ಷಾಧಾರೆಯ ಹಿನ್ನೆಲೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಜಿಲ್ಲಾಧಿಕಾರಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ ಅವರು ಜು. 20ರಂದು ಜಿಲ್ಲೆಯ ಎಲ್ಲ ಶಾಲಾ ಕಾಲೆೇಜುಗಳಿಗೆ ರಜೆ ಘೋಷಿಸಿದ್ದಾರೆ.
ಜಿಲ್ಲಾ ಕೇಂದ್ರ ಮಡಿಕೆೇರಿ ಸೇರಿದಂತೆ ಕಾವೇರಿ, ಲಕ್ಷ್ಮಣತೀರ್ಥ ನದಿ ಪಾತ್ರದ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾಗಮಂಡಲ ಸೇರಿದಂತೆ ದಕ್ಷಿಣ ಕೊಡಗಿನ ಹಲವೆಡೆಗಳಲ್ಲಿ ನದಿಯ ಪ್ರವಾಹದಿಂದ ರಸ್ತೆಗಳು ಮುಳುಗಡೆಯಾಗಿ ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಕೆಲವೆಡೆ ಬರೆಕುಸಿತ ಸಂಭವಿಸಿದೆ.

ಬುಧವಾರ ಬೆಳಗ್ಗೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿ ಉಕ್ಕಿ ಹರಿಯುವ ಮೂಲಕ ಪ್ರವಾಹ ವೇರ್ಪಟ್ಟಿತು. ಇದರಿಂದ ಅಲ್ಲಿನ ಭಾಗ ಮಂಡಲ ಮತ್ತು ಅಯ್ಯಂಗೇರಿ ರಸ್ತೆಗಳ ಮೇಲೆ 3ರಿಂದ 4 ಅಡಿಗಳಷ್ಟು ಪ್ರವಾಹದ ನೀರು ಆವರಿಸಿ ಕೊಂಡು ಭಾಗಮಂಡಲ ಅಕ್ಷರಶಃ ದ್ವೀಪವಾಗಿ ಮಾರ್ಪಟ್ಟು ಗ್ರಾಮಸ್ಥರು ಸಂಚಾರಕ್ಕೆ ಸಂಕಷ್ಟವನ್ನು ಎದುರಿಸುವಂತಾಯಿತು.

ಬೋಟ್‌ ವ್ಯವಸ್ಥೆ
ಭಾಗಮಂಡಲದಲ್ಲಿ ಪ್ರವಾಹವೇರ್ಪಟ್ಟ ಹಿನ್ನೆಲೆ ಯಲ್ಲಿ ಗ್ರಾಮಸ್ಥರ ಸಂಚಾರಕ್ಕೆ ಜಿಲ್ಲಾಡಳಿತ ಬೋಟ್‌ ವ್ಯವಸ್ಥೆ ಕಲ್ಪಿಸಿದೆ. ಎರಡನೇ ದಿನವೂ ಮಳೆೆಯ ಆರ್ಭಟ ಮುಂದುವರಿದಿದೆ. ಕಾವೇರಿ ನದಿ ಪಾತ್ರದ ನಾಪೆ‌ೂàಕ್ಲು, ಬಲಮುರಿ, ಸಿದ್ದಾಪುರ, ಕುಶಾಲನಗರ ವ್ಯಾಪ್ತಿಯಲ್ಲಿಯೂ ಧಾರಾಕಾರ ಮಳೆಯಾಗುತ್ತಿದೆ.

ಸೇತುವೆ ಮುಳುಗಡೆ
ಭಾರೀ ಮಳೆೆಯಿಂದ ಮೂರ್ನಾಡು ಸಮೀಪದ ಬಲಮುರಿಯಲ್ಲಿ ಕಿರು ಸೇತುವೆ ಮುಳುಗಡೆಗೊಂಡಿದೆ. ಸೇತುವೆ ಮೇಲೆ ಸುಮಾರು 6 ಅಡಿಯಷ್ಟು ನೀರು ಹರಿಯುತ್ತಿದೆ. ಎತ್ತರದ ಪ್ರದೇಶದಲ್ಲಿ ಮತ್ತೂಂದು ಸೇತುವೆ ಇರುವುದರಿಂದ ಜನ ಸಂಚಾರಕ್ಕೆ ತೊಡಕುಂಟಾಗಿಲ್ಲ.

Advertisement

ಉಕ್ಕಿ ಹರಿಯುತ್ತಿರುವ ಲಕ್ಷ್ಮಣತೀರ್ಥ
ದಕ್ಷಿಣ ಕೊಡಗಿನ ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ನದಿ ಪಾತ್ರದ ಗದ್ದೆಬಯಲುಗಳಲ್ಲಿ ಪ್ರವಾಹದ ನೀರು ಆವರಿಸಿಕೊಂಡಿದೆ. ಹಲವೆಡೆಗಳಲ್ಲಿ ಸಂಚಾರ ಕಡಿತಗೊಳ್ಳುವ ಅಪಾಯ ಎದುರಾಗಿದೆ.

ಮೈಕೊರೆಯುವ ಚಳಿಗಾಳಿ
ಜಿಲ್ಲಾ ಕೇಂದ್ರ ಮಡಿಕೇರಿ ವ್ಯಾಪ್ತಿಯಲ್ಲಿ ಚಳಿ ಸಹಿತ ಭಾರೀ ಗಾಳಿ ಮಳೆೆಯಾಗುತ್ತಿದ್ದು, ನಗರದ ಕೆಲವೆಡೆ ಸಣ್ಣಪುಟ್ಟ ಹಾನಿಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next