Advertisement
ಆಧುನಿಕ ಕಾಲದ ತಂತ್ರಜ್ಞಾನಗಳು ಒಂದು ಕಡೆ ಉಪಕಾರಿಯಾದರೆ, ಇನ್ನೊಂದೆಡೆ ಆರೋಗ್ಯಕ್ಕೆ ಮಾರಕವಾಗಿವೆ. ಬೇಸಗೆ ಕಾಲದಲ್ಲಿ ಬಳಸುವ ಎಸಿಗಳಂತೆ ಚಳಿಗಾಲದಲ್ಲಿ ಚಳಿಯಿಂದ ರಕ್ಷಿಸಲು ಬಳಸುವ ಹೀಟರ್‌ಗಳೂ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹೀಟರ್‌ಗಳ ಬಳಕೆಯಿಂದ ಆರೋಗ್ಯಕ್ಕೆ ಆಗುವ ಸಮಸ್ಯೆಗಳೇನು? ಎನ್ನುವ ಮಾಹಿತಿ ಇಲ್ಲಿದೆ.
Related Articles
Advertisement
ವಿದ್ಯುತ್‌ಚಾಲಿತ ಹೀಟರ್‌ಗಳು ನೈಸರ್ಗಿಕ ಗಾಳಿಯಲ್ಲಿರುವ ತೇವಾಂಶವನ್ನು ಕಡಿಮೆಗೊಳಿಸುತ್ತವೆ. ನೈಸರ್ಗಿಕ ಗಾಳಿ ಹಾಗೂ ತ್ವಚೆ ಒಣಗಿ ತುರಿಕೆಗೆ ಕಾರಣವಾಗುತ್ತದೆ. ಹೀಗಾಗಿ ಹೀಟರ್‌ಗಳ ಬಳಕೆ ಆದಷ್ಟು ಕಡಿಮೆ ಮಾಡುವುದು ಒಳಿತು. ತಣ್ಣೀರಿನಲ್ಲಿ ಸ್ನಾನ ಮಾಡಿದ ಅನಂತರ ಅಥವಾ ಚಳಿಯಿಂದ ರಕ್ಷಣೆ ನೀಡುವ ಹೀಟರ್ ದೇಹದ ತೇವಾಂಶವನ್ನು ಹೀರಿಕೊಳ್ಳುತ್ತದೆ.
ಚರ್ಮದ ಸಮಸ್ಯೆ
ಹೆಚ್ಚು ಹೀಟರ್‌ಗಳನ್ನು ಬಳಸುವುದರಿಂದ ಚರ್ಮದ ಜೀವಕೋಶಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದು ಚರ್ಮದ ಕಾಯಿಲೆಗಳಿಗೆ ಕಾರಣವಾಗಬಹುದು. ಚರ್ಮ ಹೆಚ್ಚು ಮೃದುವಾಗಿರುವುದರಿಂದ ಬಿಸಿ ಗಾಳಿ ಯನ್ನು ತಡೆದುಕೊಳ್ಳುವ ಶಕ್ತಿ ಕಡಿಮೆ ಇರುತ್ತದೆ.
ದೇಹದ ತಾಪಮಾನ
ಹೀಟರ್‌ಗಳ ಬಳಕೆಯಿಂದ ಕೋಣೆಯ ತುಂಬೆಲ್ಲ ಉಷ್ಣಾಂಶ ಹೆಚ್ಚಾಗಿ ಅಲ್ಲಿನ ತಾಪಮಾನದಲ್ಲಿ ವ್ಯತ್ಯಾಸ ಗೊಂಡು ಆರೋಗ್ಯದ ಮೇಲೆ ಪರಿಣಾಮ ಉಂಟಾಗ ಬಹುದು.
ಸುಟ್ಟಗಾಯಗಳು
ಹೀಟರ್‌ಗಳ ಮುಂದೆ ಕೈ ಚಾಚಿ ನಿಂತುಕೊಳ್ಳುವ ಅಭ್ಯಾಸ ಅನೇಕ ಮಂದಿಗಿದೆ. ಈ ಸಂದರ್ಭದಲ್ಲಿ ಹೀಟರ್ ಕೈಗೆ ತಾಗುವ ಸಂಭವ ಹೆಚ್ಚು. ಇದರಿಂದ ಸುಟ್ಟಗಾಯಗಳಾಗಬಹುದು.
••ಧನ್ಯ ಶ್ರೀ ಬೋಳಿಯಾರ್