Advertisement
ರಾಜ್ಯದ 5948 ಗ್ರಾಪಂಗಳ ಎರಡನೇ ಅವಧಿಗೆ (2020ನೇ ಸಾಲಿನ ಚುನಾವಣೆ ನಂತರದ) ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ನಿಗದಿಪಡಿಸಲು ರಾಜ್ಯ ಚುನಾವಣಾ ಆಯೋಗ ವಾರದ ಹಿಂದಷ್ಟೇ (ಮೇ 25ರಂದು) ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದು, ಜಿಲ್ಲಾಧಿಕಾರಿಗಳು ಮೀಸಲಾತಿ ನಿಗದಿ ಪ್ರಕ್ರಿಯೆಗೆ ಸಿದ್ಧತೆ ನಡೆಸಿದ್ದಾರೆ.
Related Articles
Advertisement
ರೆಸಾರ್ಟ್ ರಾಜಕಾರಣಕ್ಕೂ ಸಜ್ಜು: ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಯಾವ ಮೀಸಲಾತಿ ಬರಬಹುದು. ಯಾವ ವರ್ಗಕ್ಕೆ ಮೀಸಲಾತಿ ಬಂದರೆ ಯಾರನ್ನು ಬೆಂಬಲಿಸಬೇಕೆಂಬ ಚರ್ಚೆ ಹಳ್ಳಿಗಳಲ್ಲಿ ಜೋರಾಗಿದೆ. ಇನ್ನು ಕೆಲ ಸದಸ್ಯರು ತಮ್ಮನ್ನು ಯಾರೆಲ್ಲ ಬೆಂಬಲಿಸಬಹುದೆಂದು ಲೆಕ್ಕಾಚಾರದಲ್ಲಿ ಮಗ್ನರಾಗಿದ್ದಾರೆ. ಕೆಲ ಪ್ರಬಲ ಆಕಾಂಕ್ಷಿಗಳು ತಮಗೆ ಅನುಕೂಲವಾಗುವ ಮೀಸಲಾತಿ ಬಂದರೆ ಬೆಂಬಲಿಸುವಂತೆ ಸದಸ್ಯರ ಮನವೊಲಿಸುವ ಕಾರ್ಯ ಮುಂದುವರಿಸಿದ್ದಾರೆ. ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ. ಅಗತ್ಯ ಬಿದ್ದರೆ ರೆಸಾರ್ಟ್ ರಾಜಕಾರಣಕ್ಕೂ ರೆಡಿ ಎನ್ನುವ ರೀತಿಯಲ್ಲಿ ಕೆಲ ಬಲಾಡ್ಯ ಸದಸ್ಯರು ಕಾರ್ಯಪ್ರವೃತ್ತರಾಗಿರುವುದು ಹಳ್ಳಿ ರಾಜಕಾರಣ ರಾಜ್ಯ ರಾಜಕಾರಣವನ್ನು ಮೀರಿಸುವ ಲಕ್ಷಣ ಗೋಚರಿಸುತ್ತಿದೆ.
ಒಟ್ಟಾರೆ ಹಳ್ಳಿಗಳಲೀಗ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗುವ ಮೊದಲೇ ಅಧಿಕಾರ ತಮ್ಮ ಕೈಗೆ ಹಿಡಿಯಲು ಯಾವೆಲ್ಲ ತಂತ್ರಗಾರಿಕೆ ನಡೆಸಬೇಕು ಎಂಬ ತಾಲೀಮು ಶುರುವಾಗಿದೆ.
ಮೀಸಲಾತಿಗಾಗಿ ಹರಕೆ!ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಇಂಥದ್ದೇ ವರ್ಗಕ್ಕೆ ಬರುವಂತಾಗಬೇಕು ಜತೆಗೆ ಗ್ರಾಪಂ ಅಧಿಕಾರ ತಮ್ಮ ಕೈಗೆ ಸುಲಭವಾಗಿ ಸಿಗುವಂತಾಗಬೇಕೆಂದು ಕೆಲ ಸದಸ್ಯರು ದೇವರಲ್ಲಿ ಹರಕೆ ಹೊರುತ್ತಿರುವ ಘಟನೆಗಳು ಸಹ ಅಲ್ಲಲ್ಲಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೊದಲ ಅವಧಿಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪಕ್ಷವೇ ಬೇರೆ. ಎರಡನೇ ಅವಧಿ ಆಯ್ಕೆ ವೇಳೆ ಆಡಳಿತದಲ್ಲಿರುವ ಪಕ್ಷವೇ ಬೇರೆಯಾಗಿರುವುದರಿಂದ ಈ ಬಾರಿ ತಂತ್ರಗಾರಿಕೆ, ರಾಜ್ಯ ರಾಜಕಾರಣ ಮೀರಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಮೀಸಲಾತಿ ಪ್ರಕಟಗೊಳ್ಳುವ ಮೊದಲೇ ಅಧಿಕಾರ ತಮ್ಮವರ ಕೈಯಲ್ಲೇ ಹಿಡಿದಿಟ್ಟುಕೊಳ್ಳುವ ಲೆಕ್ಕಾಚಾರ ಶುರುವಾಗಿದೆ.
-ಸಂಕನಗೌಡ, ಹಿರೇಕೌಂಶಿ ಗ್ರಾಪಂ ಸದಸ್ಯ -ಎಚ್.ಕೆ. ನಟರಾಜ