Advertisement

ಗುರು-ಶಿಷ್ಯನ ಸಂಬಂಧ

06:00 AM Oct 12, 2018 | |

ನಿಮ್ಮ ಶಾಲಾ ದಿನಗಳನ್ನು, ಅಲ್ಲಿನ ಶಿಕ್ಷಕರನ್ನು ನೆನಪಿಸುವ ಸಿನಿಮಾಗಳು ಈಗಾಗಲೇ ಬಂದಿವೆ. ಅದರಲ್ಲೂ ಗ್ರಾಮೀಣ ಭಾಗದ ಶಾಲೆ, ಅಲ್ಲಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ, ತನ್ನೆಲ್ಲಾ ಆಸೆಗಳನ್ನು ಬದಿಗೊತ್ತಿ ಮಕ್ಕಳ ಉದ್ಧಾರಕ್ಕಾಗಿ ದುಡಿಯುವ ಶಿಕ್ಷಕರು … ಇಂತಹ ಅಂಶಗಳು ನೋಡುಗರನ್ನು ತಮ್ಮ ಬಾಲ್ಯಕ್ಕೆ ಕೊಂಡೊಯ್ಯುವುದರಲ್ಲಿ ಅನುಮಾನವಿಲ್ಲ. ಈಗ ಇದೇ ಕಾನ್ಸೆಪ್ಟ್ ಇಟ್ಟುಕೊಂಡು ಕಿರುಚಿತ್ರವೊಂದು ಬಂದಿದೆ. ಅದು “ಹೆಡ್‌ಮಾಸ್ಟರ್‌ ವಾಮನರಾವ್‌’. 30 ವರ್ಷಗಳಿಂದ ಶಾಲೆಯೊಂದರಲ್ಲಿ ಸೇವೆ ಸಲ್ಲಿಸಿದ ಹೆಡ್‌ಮಾಸ್ಟರ್‌ ಅವರನ್ನು ಕೇಂದ್ರಬಿಂದುವನ್ನಾಗಿಟ್ಟುಕೊಂಡು ಈ ಕಿರುಚಿತ್ರ ಮಾಡಲಾಗಿದೆ. ಶಾಲೆಯಲ್ಲಿ ಓದಿ ಮುಂದೆ ದೊಡ್ಡ ಉದ್ಯೋಗ ಗಿಟ್ಟಿಸಿಕೊಂಡ ಯುವಕ, ಹಲವು ವರ್ಷಗಳ ನಂತರ ಶಾಲೆಗೆ ಬಂದಾಗ ಆತನಿಗೆ ತನ್ನ ಹೆಡ್‌ಮಾಸ್ಟರ್‌ ಹೇಗೆ ಕಾಣುತ್ತಾರೆ, ಅವನ ದೃಷ್ಟಿಕೋನ ಹೇಗಿರುತ್ತದೆ ಮತ್ತು ಹೆಡ್‌ಮಾಸ್ಟರ್‌ ನಡವಳಿಕೆಯ ಸುತ್ತ ಈ ಕಿರುಚಿತ್ರ ಸುತ್ತುತ್ತದೆ. ಈ ಕಿರುಚಿತ್ರವನ್ನು ಗಿರೀಶ್‌ ಬಿಜ್ಜಳ್‌ ನಿರ್ದೇಶಿಸಿ, ನಟಿಸಿದ್ದಾರೆ. ಇವರಿಗೆ ನಿರ್ಮಾಣದಲ್ಲಿ ಅಮರನಾಥ್‌ ಸಾಥ್‌ ನೀಡಿದ್ದಾರೆ.

Advertisement

ಕಿರುಚಿತ್ರದ ಬಗ್ಗೆ ಮಾತನಾಡುವ ಗಿರೀಶ್‌, “ಇತ್ತೀಚೆಗೆ ಶಿಕ್ಷಕರನ್ನು ಕಾಮಿಡಿಯಾಗಿ ತೋರಿಸುವುದನ್ನು ನೋಡಿ ಬೇಸರವಾಯಿತು. ಹಿಂದೆ ಶಿಕ್ಷಕರನ್ನು ನಾವೆಲ್ಲ ಗೌರವದಿಂದ ಕಾಣುತ್ತಿದ್ದೆವು. ಶಾಲೆಯಿಂದ ವಿದ್ಯಾರ್ಥಿಗಳು ಒಳ್ಳೆಯ ಗುಣವನ್ನು ಮೈಗೂಢಿಸಿಕೊಳ್ಳುತ್ತಿದ್ದರು. ಆ ನಿಟ್ಟಿನಲ್ಲಿ ಗುರುಗಳನ್ನು ನೆನೆಯುವ ಹಾಗೂ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವಾಗಲಿ ಎಂಬ ಕಾರಣಕ್ಕೆ ಈ ಕಿರುಚಿತ್ರ ಮಾಡಿದ್ದೇನೆ’ ಎಂದರು. ಚಿತ್ರದಲ್ಲಿ ಹೆಡ್‌ಮಾಸ್ಟರ್‌ ಆಗಿ ಕಾಣಿಸಿಕೊಂಡಿರುವ ಶ್ರೀನಾಥ್‌ ಚಿತ್ತಾರ, “ನಮ್ಮ ಹಿರಿಯರನ್ನು ನೆನಪಿಸಿಕೊಳ್ಳುವ ಪ್ರಯತ್ನವಿದು. ಈ ತರಹದ ಕಿರುಚಿತ್ರಗಳ ಪ್ರದರ್ಶನಕ್ಕೆ ಶಾಲೆಗಳಲ್ಲಿ ಅವಕಾಶ ಸಿಕ್ಕರೆ 

ಒಳ್ಳೆಯದು’ ಎಂದರು. ಚಿತ್ರದ ಒಂದು ಹಾಡನ್ನು ವಿಜಯ್‌ಪ್ರಕಾಶ್‌ ಹಾಡಿದ್ದಾರೆ. ಶಿವು ಬೆರ್ಗಿ ಸಂಗೀತ, ಸಾಹಿತ್ಯ ಕಿರುಚಿತ್ರಕ್ಕಿದೆ. “ಡಬಲ್‌ ಮೀನಿಂಗ್‌ ಹಾಡುಗಳ ನಡುವೆ ಒಂದು ಒಳ್ಳೆಯ ಹಾಡು ಬರೆಯುವ ಅವಕಾಶ ಇಲ್ಲಿ ಸಿಕ್ಕಿದೆ. ಬ್ರಹ್ಮ ನಮ್ಮ ಆಯುಷ್ಯ ಬರೆದರೆ, ಗುರುಗಳು ಭವಿಷ್ಯ ಬರೆಯುತ್ತಾರೆಂಬ ಕಾನ್ಸೆಪ್ಟ್ನಲ್ಲಿ ಈ ಕಿರುಚಿತ್ರ ಮೂಡಿಬಂದಿದೆ’ ಎಂದರು ಶಿವು. 

Advertisement

Udayavani is now on Telegram. Click here to join our channel and stay updated with the latest news.

Next