Advertisement

ಕಾಶ್ಮೀರದ ತಲೆಯನ್ನೇ ತೆಗೆಯಲಾಗಿದೆ

12:18 AM Aug 06, 2019 | Lakshmi GovindaRaj |

ಜಮ್ಮು ಮತ್ತು ಕಾಶ್ಮೀರದ ತಲೆಯನ್ನೇ ತೆಗೆಯಲಾಗಿದೆ. ಕೇಂದ್ರದ ಕ್ರಮದಿಂದ ಕಣಿವೆ ರಾಜ್ಯದ ಗುರುತು ನಷ್ಟವಾದಂತೆ ಆಗಿದೆ ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಆಕ್ಷೇಪ ಮಾಡಿವೆ. ಸಂವಿಧಾನದ 370ನೇ ವಿಧಿ ರದ್ದು, ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆಯ ವಿಧೇಯಕದ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಈ ಆರೋಪಗಳನ್ನು ಮಾಡಿದ್ದಾರೆ.

Advertisement

ಕೇಂದ್ರ ಸರ್ಕಾರ ರಚನೆ ಮಾಡಲು ಪ್ರಸ್ತಾಪ ಮಾಡಿರುವ ಎರಡು ಕೇಂದ್ರಾಡಳಿತ ಪ್ರದೇಶಗಳು ಕಪ್ಪು ಚುಕ್ಕಿಯಾಗಿವೆ ಎಂದು ದೂರಿದ್ದಾರೆ. ಕಾಶ್ಮೀರವನ್ನು ದೇಶದ ಮುಕುಟ ಎಂದು ಕರೆಯಲಾಗುತ್ತದೆ. ಈಗ ತಲೆಯನ್ನೇ ತೆಗೆಯಲಾಗಿದೆ ಎಂದಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ಡೆರಿಕ್‌ ಒ’ ಬ್ರಿಯಾನ್‌ ಮಾತನಾಡಿ ಇದೊಂದು ಕರಾಳ ಸೋಮವಾರ . ಇದು ದೇಶದ ಸಂವಿಧಾನಕ್ಕೆ ಮತ್ತು ಭಾರತ ಎಂಬ ಮೂಲ ಉದ್ದೇಶಕ್ಕೆ ಕರಾಳ ದಿನ ಎಂದು ಟೀಕಿಸಿದರು.

ಆರ್‌ಜೆಡಿಯ ಡಾ.ಮನೋಜ್‌ ಝಾ ಈ ಜೀವಮಾನದಲ್ಲಿ ಸಂವಿಧಾನದ 370ನೇ ವಿಧಿ ಮತ್ತು ವಿಭಜನೆ ಪ್ರಸ್ತಾಪವೇ ಸಾಧ್ಯವಿಲ್ಲ ಎಂದರು. ಮುಂದಿನ ಐದು ವರ್ಷಗಳಲ್ಲಿ ಕಾಶ್ಮೀರವನ್ನು ಪ್ಯಾಲೆಸ್ತೀನ್‌ ಆಗಿ ಪರಿವರ್ತಿಸಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಟೀಕಿಸಿದ್ದಾರೆ. ಡಿಎಂಕೆಯ ತಿರುಚ್ಚಿ ಶಿವ ಮಾತನಾಡಿ ಇದೊಂದು ಅಸಾಂವಿಧಾನಿಕ ಕ್ರಮ. ಕಾಶ್ಮೀರದ ವಿಧಾನಸಭೆಯೇ ಇಂಥ ಪ್ರಮುಖಾತಿ ಪ್ರಮುಖ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next