ಸಾಲ, ಹವಾಮಾನ ವೈಪರೀತ್ಯಗಳಂತಹ ಸಮಸ್ಯೆಗಳನ್ನು ನೋಡಿ ಕೃಷಿಯ ಸಹವಾಸವೇ ಬೇಡ ಎನ್ನುವವರು ಸಾಕಷ್ಟು ಮಂದಿ ಸಿಗುತ್ತಾರೆ. ಅಂಥವರ ಮಧ್ಯೆ ಈ ಎನ್. ಅಶೋಕ್‌ಕುಮಾರ್ ಭಿನ್ನವಾಗಿದ್ದಾರೆ. 3 ದಶಕಗಳಿಂದ ತರಕಾರಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಹೀಗೆ ಸಮಗ್ರ ಕೃಷಿ ಮಾಡುತ್ತಲೇ ಹೀಗೂ ಬದುಕಬಹುದು ಅನ್ನೋದನ್ನು ತೋರಿಸಿದ್ದಾರೆ.
Advertisement
ಇವರ ಮೂಲ ದಕ್ಷಿಣ ಕನ್ನಡದ ಸುಳ್ಯ. ಓದಿದ್ದು ಎಂಎಸ್‌ಸಿ. ದೊಡ್ಡಬಳ್ಳಾಪುರದ ಸಮೀಪವಿರುವ ಹದರಿಪುರದಲ್ಲಿ ಜಮೀನಿದೆ. ಇಲ್ಲಿ ಮಾ.ಇಂಟಿಗ್ರೇಟರ್ಸ್ ಅನ್ನೋ ಕೃಷಿ ಕುಟುಂಬ ರೂಪಿಸಿದ್ದಾರೆ. ಇದರ ಮೂಲಕ ಸಮಗ್ರ ಕೃಷಿಗೆ ಕೈ ಹಾಕಿದರು. ಹೆಚ್ಚು ಕಮ್ಮಿ ಇವರ ಕುಟುಂಬದಲ್ಲಿ ಇಂದು 300ಕ್ಕೂ ಹೆಚ್ಚು ಜನರು ಕೃಷಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
Related Articles
Advertisement
2007ರಲ್ಲಿ ಪ್ರಾರಂಭವಾದ ಮಾಇಂಟಿಗ್ರೇಟರ್ಸ್ ತನ್ನ ದಶಕದ ಕಾರ್ಯನಿರ್ವಹಣೆಯಲ್ಲಿ ಮಂಗಳೂರು, ಬಂಟ್ವಾಳ, ಆನವಟ್ಟಿ, ಕುಣಿಗಲ…, ಸುಳ್ಯದಲ್ಲಿ ಶಾಖೆಗಳನ್ನು ಹೊಂದಿದೆ. ಪ್ರಸಿದ್ಧ ಚಿಕನ್ ಬ್ರಾಂಡ್ ವೆಂಕಾಬ…ಗೆ ಬಹುಪಾಲು ಮಾಂಸ ಸರಬರಾಜು ಮಾಡುತ್ತಿರುವುದು ಅಶೋಕ್ ಕುಮಾರ್ ಅವರ ತಂಡ.
ಮಾ. ಇಂಟಿಗ್ರೇಟರ್‌ನಲ್ಲಿ 200 ಕ್ಕೂ ಹೆಚ್ಚು ಜನರು ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, 300ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ರೈತರು ಮಾಇಂಟಿಗ್ರೇಟರ್ಸ…ನಲ್ಲಿ ಪಾಲುದಾರರಾಗಿದ್ದಾರೆ. ಮೊಟ್ಟೆ, ಕೋಳಿ ಮರಿ ಹಾಗೂ ಮಾಂಸ ಸೇರಿ ಕೋಳಿಗೆ ಬೇಕಾಗುವ ಸಮತೋಲಿತ ಆಹಾರವನ್ನು ಒಪ್ಪಂದದಡಿಯಲ್ಲಿ ಸರಬರಾಜು ಮಾಡುತ್ತಿದ್ದಾರೆ. ನೈರ್ಮಲ್ಯದಲ್ಲಿ ಗುಣಮಟ್ಟ: ಕೋಳಿ ಮಾಂಸ, ಮೊಟ್ಟೆಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸ್ವತ್ಛ ಮಾಂಸವನ್ನು ತನ್ನಗ್ರಾಹಕರಿಗೆ ನೀಡಬೇಕು ಎನ್ನುವ ಗುರಿಯೊಂದಿಗೆ ಹಲವು ವೈಜ್ಞಾನಿಕ ಹಂತಗಳನ್ನು ಅನುಸರಿಸುತ್ತಿದೆ. ಕೋಳಿ ಸಾಕಾಣಿಕೆ ಕೇಂದ್ರದೊಳಗೆ ಪ್ರವೇಶಿಸಬೇಕೆಂದರೆ ಸ್ನಾನ ಮಾಡಲೇಬೇಕಿರುವುದು ನಿಯಮ. ಇನ್ನು ಆವರಣದೊಳಗೆ ವಾಹನಗಳು ಪ್ರವೇಶಿಸಬೇಕೆಂದರೂ ರಾಸಾಯನಿಕ ಮಿಶ್ರಣ ನೀರಿನಿಂದ ವಾಹನಗಳನ್ನು ತೊಳೆಯುವುದು ಅವಶ್ಯ. ಇದಲ್ಲದೇ ಕೋಳಿ ಸಾಕಾಣಿಕೆ ಸ್ಥಳದಲ್ಲಿ ನೈರ್ಮಲ್ಯ ಕಾಪಾಡುವುದಕ್ಕಾಗಿ ಸುತ್ತಲೂ ಉದ್ಯಾನವನ ನಿರ್ಮಿಸಲಾಗಿದೆ. ಇದರಿಂದಾಗಿ ವೈರಸ್‌ಗಳಿಂದ ಕೋಳಿಗಳನ್ನು ರಕ್ಷಿಸಲು ಅನುಕೂಲ ಎನ್ನುತ್ತಾರೆ ಅಶೋಕ್. 1200 ಅಡಿ ಭೂಮಿ ಕೊರೆದರೂ ಅಂತರ್ಜಲ ಕಾಣದ ಈ ಜಾಗದಲ್ಲಿ ನೀರಿನ ಮಿತ ಬಳಕೆಯೊಂದಿಗೆ ಮಲೆನಾಡನ್ನು ಸೃಷ್ಟಿಸಲು ಬಯಸಿದ್ದಾರೆ. ರಬ್ಬರ್, ಹಲಸು, ಬೇವು, ಹುಣಸೆ ಸೇರಿ ವಿವಿಧಸಸ್ಯಗಳನ್ನು ಬೆಳೆಸಿದ್ದಾರೆ. ಅದಲ್ಲದೇ ಹದರಿಪುರದಲ್ಲಿನ ಕೋಳಿ ಫಾರಂ ಸುತ್ತಲಿನ ಪ್ರದೇಶದಗುಡ್ಡದಲ್ಲಿ ವ್ಯೂ ಪಾಯಿಂಟ್ ನಿರ್ಮಿಸಿರುವುದು ವಿಶೇಷ. ಇದರಿಂದ ಸುತ್ತಲಿನ 30 ಕ್ಕೂ ಹೆಚ್ಚು ಕಿ.ಮೀ ಪ್ರದೇಶವನ್ನು ವೀಕ್ಷಿಸಬಹುದು. ಅಷ್ಟೇ ಅಲ್ಲ, ನಂದಿ ಬೆಟ್ಟ, ಶಿವಗಂಗೆ ಬೆಟ್ಟಗಳನ್ನು ಕಣ್ತುಂಬಿಕೊಳ್ಳಬಹುದು. * ಸೌಮ್ಯ