Advertisement

ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ ನೆಲ ಕಲ್ಯಾಣ

11:09 AM Oct 16, 2021 | Team Udayavani |

ಬಸವಕಲ್ಯಾಣ: ಜಗತ್ತಿನಲ್ಲೆ ಪ್ರಥಮ ಬಾರಿಗೆ ಪ್ರಜಾಪ್ರಭುತ್ವ ಕಲ್ಪನೆಗೆ ಅಡಿಪಾಯ ಹಾಕಿದ ನೆಲ ಬಸವಕಲ್ಯಾಣ ನಾಡು ಎಂದು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ| ಸತ್ಯ ನಾರಾಯಣ ಬಟ್ಟು ಹೇಳಿದರು.

Advertisement

ನಗರದ ಹರಳಯನ್ನವರ ಗವಿಯಲ್ಲಿ ಹಮ್ಮಿಕೊಂಡ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ 42ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲ ಸಂಸತ್ತು ಎಂದು ಕರೆಯುವ ಅನುಭವ ಮಂಟಪ ಇಲ್ಲಿತ್ತು. ಈ ಪುಣ್ಯ ಭೂಮಿಯಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು, 12ನೇ ಶತಮಾನದ ಗತವೈಭವ ಮರುಕಳಿಸಲಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ನೇತೃತ್ವ ವಹಿಸಿದ್ದ ಹರಳಯ್ಯ ಗವಿಯ ಡಾ| ಗಂಗಾಂಬಿಕೆ ಅಕ್ಕ ಆಶೀರ್ವಚನ ನೀಡಿದರು. ನಂತರ ಅಂತಾರಾಷ್ಟ್ರೀಯ ವಚನ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ| ಮೀನಾಕ್ಷಿ ಬಾಳಿ ಮಾತನಾಡಿದರು. ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಅನುಭಾವ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಪ್ರೊ| ಬಸವರಾಜ ಡೊಣೂರ, ಬಸವರಾಜ ಸ್ವಾಮಿ, ಸೂರ್ಯಕಾಂತ ಕಾಂಬ್ಳೆ, ಸೇರಿ ದಂತೆ ಮತ್ತಿತರರು ಇದ್ದರು. ಹರಳಯ್ಯ ಸಮಾಜದ ಕಲಬುರಗಿ ಅಧ್ಯಕ್ಷ ಕಾಶಿರಾಮ ನಂದೂರಕರ್‌ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next