Advertisement

ಭಾರತದ ಆರ್ಥಿಕತೆಗೆ ಗ್ರೀನ್ ಫೈನಾನ್ಸ್ ಸವಾಲು..!?

05:30 PM Apr 13, 2021 | |

ವಾಷಿಂಗ್ಟನ್ :  ಟ್ರಂಪ್ ಆಡಳಿತಾವಧಿಯ ನಂತರ, ಅಮೆರಿಕಾದ ನೂತನ ಅಧ್ಯಕ್ಷ ಜೋ ಬೈಡನ್ ಹವಾಮಾನ ಬದಲಾವಣೆಯ ಕುರಿತ ಕಾರ್ಯಸೂಚಿಯನ್ನು ಮರುರೂಪಿಸಲು ಮುಂದಿನ ವಾರ ನಡೆಯಲಿರುವ ವಿಶ್ವ ನಾಯಕರ ವಿಶೇಷ ಸಭೆಯಲ್ಲಿ ಜಾಗತಿಕವಾಗಿ ಹಸಿರು ವಲಯದ ಬಂಡವಾಳ ಹೂಡಿಕೆ ಬಗ್ಗೆ ಗಮನ ಹರಿಸಲು ನಿರ್ಧರಿಸಿದ್ದಾರೆ. ಅಮೆರಿಕಾ ಆಡಳಿತವು ಹವಾಮಾನ ಬದಲಾವಣೆಯ ಬಗ್ಗೆ ಪ್ರಾಮುಖ್ಯತೆಯನ್ನು ನೀಡುತ್ತಿದೆ.

Advertisement

ಭಾರತಕ್ಕೆ, ಇದು ಸವಾಲು ಮತ್ತು ಅವಕಾಶವಾಗಿದೆ.  ಹವಾಮಾನ  ಬೇಡಿಕೆಗಳ ನಡುವೆ  ಮತ್ತು ಕಾರ್ಬನ್ ಲೈಟ್ ಫ್ಯೂಚರ್ ಬಗ್ಗೆ ಬದ್ಧತೆಯನ್ನು ತೋರಿಸಬೇಕಾದ ಅಗತ್ಯತೆಯ ನಡುವೆ ಭಾರತವು ದಿಟ್ಟವಾಗಿ ನಡೆದುಕೊಳ್ಳಬೇಕಾಗುತ್ತದೆ.

ಸಿಪಿಐ ವರದಿಯ ಪ್ರಕಾರ, 2016-18ರ ಅವಧಿಯಲ್ಲಿ ಒಟ್ಟು ಹಸಿರು ಹಣಕಾಸುಗಳಲ್ಲಿ ಸುಮಾರು ಶೇಕಡಾ 80 ವಿದ್ಯುತ್ ಉತ್ಪಾದನಾ ವಲಯದತ್ತ ನಿರ್ದೇಶಿಸಲ್ಪಟ್ಟಿದೆ. ಇದು ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿದೆ. ಮುಂದಿನ ಉಪ-ವಲಯ ವರ್ಗೀಕರಣವು ಎರಡು ವರ್ಷಗಳ ಅವಧಿಯಲ್ಲಿ ಸೌರ ವಿದ್ಯುತ್ ಯೋಜನೆಗಳು ಎಲ್ಲಾ ನಿಧಿಗಳಲ್ಲಿ ಸುಮಾರು ಶೇಕಡಾ 41 ರಷ್ಟು ಹಣವನ್ನು ಪಡೆದುಕೊಂಡಿವೆ ಮತ್ತು ಪವನ ಶಕ್ತಿ ಉತ್ಪಾದನೆಯು ಶೇಕಡಾ 23 ರಷ್ಟಿದೆ ಎಂದು ತಿಳಿಸಿದೆ.

ಓದಿ : ಸೆಲ್ಫಿ ತೆಗೆಯಲು ಹೋಗಿ ಕಾಳಿ ನದಿಗೆ ಬಿದ್ದಿದ್ದ ಯುವಕ-ಯುವತಿಯ ಶವ ಪತ್ತೆ

ಈ ನಿಧಿಗಳಲ್ಲಿ ಸುಮಾರು ಶೇಕಡಾ 8 ರಷ್ಟು ಹಣವನ್ನು ಮೆಟ್ರೋ ರೈಲಿನಂತಹ ಮಾಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ಸ್ (ಎಂ ಆರ್ ಟಿ ಎಸ್) ಯೋಜನೆಗಳತ್ತ ನಿರ್ದೇಶಿಸಲಾಗಿದೆ.

Advertisement

ಆದಾಗ್ಯೂ, ಸಿಪಿಐ ವರದಿಯು ಸಾರಿಗೆ ಯೋಜನೆಗಳ ವಿಷಯದಲ್ಲಿ ಪರಿಶೀಲಿಸಿದ ಎರಡು ಹಣಕಾಸಿನ ವರ್ಷಗಳು ಮಹತ್ವದ್ದಾಗಿರಲಿಲ್ಲವಾದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಂ ಆರ್‌ ಟಿ ಎಸ್ ವ್ಯವಸ್ಥೆಗಳ ಮೇಲಿನ ಬಂಡವಾಳ ವೆಚ್ಚದಲ್ಲಿ ಮೇಲ್ಮುಖ ಪ್ರವೃತ್ತಿಯನ್ನು ಹೊಂದಿವೆ ಮತ್ತು ಈ ವಲಯದಲ್ಲಿ ಹೆಚ್ಚಿನ ಹೂಡಿಕೆಯನ್ನು ನಿರೀಕ್ಷಿಸಲಾಗಿದೆ.

ಹಸಿರು ವಲಯದ ಮೇಲಿನ ಹೂಡಿಕೆಗಳ ಕಡೆಗೆ ಹಣಕಾಸು ಚುಕ್ಕಾಣಿ ಹಿಡಿಯುವಲ್ಲಿ ಕೇಂದ್ರೀಯ ಬ್ಯಾಂಕ್ ಪ್ರಮುಖ ಪಾತ್ರ ವಹಿಸುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ ಬಿ ಐ) ತನ್ನ ಹಸಿರು ಹಣಕಾಸು ಉಪಕ್ರಮದ ಭಾಗವಾಗಿ, 2015 ರಲ್ಲಿ ಆದ್ಯತೆಯ ವಲಯದ ಸಾಲದಡಿಯಲ್ಲಿ ಸಣ್ಣ ನವೀಕರಿಸಬಹುದಾದ ಇಂಧನ ಕ್ಷೇತ್ರವನ್ನು ಒಳಗೊಂಡಿತ್ತು. ಮುಂಬರುವ ವರ್ಷಗಳಲ್ಲಿ ನವೀಕರಿಸಬಹುದಾದ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವುದರಿಂದ ಈ ಅನುಪಾತವು ಸುಧಾರಿಸುತ್ತದೆ ಎಂದು ಆರ್‌ ಬಿ ಐ ನಿರೀಕ್ಷಿಸುತ್ತದೆ.

ಹಸಿರು ಬಾಂಡ್‌ ಗಳು ಹಸಿರು ವಲಯದ ಹಣಕಾಸು ಸಂಗ್ರಹಿಸುವ  ವಿಧಾನವಾಗಿದೆ. ಜನವರಿ 2018 ರಿಂದ, ಭಾರತವು ಸುಮಾರು  8 ಬಿಲಿಯನ್ ಮೌಲ್ಯದ ಬಾಂಡ್‌ ಗಳನ್ನು ಹೊಂದಿದೆ ಎಂದು ಆರ್‌ ಬಿ ಐ ನ ಜನವರಿಯ ಮಾಸಿಕ ಬುಲೆಟಿನ್ ನ ವರದಿ ತಿಳಿಸಿದೆ. ಆದರೂ, ಇದು ಭಾರತದಲ್ಲಿ ನೀಡಲಾಗುವ ಎಲ್ಲಾ ಬಾಂಡ್‌ ಗಳಲ್ಲಿ ಕೇವಲ 0.7 ರಷ್ಟಿದೆ ಎಂದು ಆರ್ ‌ಬಿ ಐ ವರದಿ ಹೇಳಿದೆ.

ಓದಿ : ಇಂದಿನಿಂದ ರಂಜಾನ್ ಉಪವಾಸ: ಹೊಸ ಗೈಡ್ ಲೈನ್ಸ್ ಪ್ರಕಟಿಸಿದ ಸರ್ಕಾರ

Advertisement

Udayavani is now on Telegram. Click here to join our channel and stay updated with the latest news.

Next