Advertisement

ಎಚ್ಚರ; ಸಿಕ್ಸ್ ಪ್ಯಾಕ್ ಗೀಳು, ಸ್ಟಿರಾಯ್ಡ್ ರಿಯಾಕ್ಷನ್ ಗೆ ಯುವಕ ಬಲಿ!

03:32 PM Mar 07, 2017 | Sharanya Alva |

ಬೆಂಗಳೂರು:ಸಿಕ್ಸ್ ಪ್ಯಾಕ್ ಹುಚ್ಚಿನಿಂದಾಗಿ ಸ್ಟಿರಾಯ್ಡ್ ತೆಗೆದುಕೊಂಡು ರಿಯಾಕ್ಷನ್ ಆದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದ ಕಿರಣ್ ಎಂಬ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Advertisement

ಕಬ್ಬನ್ ಪೇಟೆ ನಿವಾಸಿ ಕಿರಣ್ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಫಿಟ್ನೆಸ್ ಜಿಮ್ ಗೆ ಕಳೆದ ಮೂರು ತಿಂಗಳಿನಿಂದ ಹೋಗುತ್ತಿದ್ದ. ಸಿಕ್ಸ್ ಪ್ಯಾಕ್ ಮಾಡಿಸಿಕೊಳ್ಳಬೇಕೆಂಬ ಗೀಳಿಗೆ ಬಿದ್ದ ಕಿರಣ್ ಜಿಮ್ ಟ್ರೈನರ್ ಮಾತು ಕೇಳಿ ಸ್ಟಿರಾಯ್ಡ್ ತೆಗೆದುಕೊಂಡಿದ್ದ.

ಸ್ಟಿರಾಯ್ಡ್ ತೆಗೆದುಕೊಂಡ ಪರಿಣಾಮ ಕಿರಣ್ ಮೆದುಳು ಕೆಲಸ ಮಾಡುವುದನ್ನೇ ನಿಲ್ಲಿಸಿತ್ತು. ಇದರಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಿರಣ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next