Advertisement

“ಅಧ್ಯಾಪನ ಅತ್ಯಂತ ಶ್ರೇಷ್ಠ ವೃತ್ತಿ: ಲೀಲಾ ಟೀಚರ್‌

07:33 PM Sep 09, 2019 | Sriram |

ವಿದ್ಯಾನಗರ:ಆತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ವೃತ್ತಿ ಶಿಕ್ಷಕ ವೃತ್ತಿ. ತಾಯಿಯ ತಾಳ್ಮೆ, ತಂದೆಯ ಹೊಣೆಗಾರಿಕೆ, ನೈತಿಕ ಬಲದೊಂದಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದಾಗ ಶಿಲೆ ಶಿಲ್ಪವಾಗಲು ಸಾಧ್ಯ ಎಂದು ಕಾಸರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಲೀಲಾ ಟೀಚರ್‌ ಅಭಿಪ್ರಾಯ ಪಟ್ಟರು. ಅವರು ಶಾಲೆಯಲ್ಲಿ ನಡೆದ ಅಧ್ಯಾಪಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಸ್ವ-ಅಧ್ಯಯನ ಪ್ರವೃತ್ತಿ, ಸಹನೆ, ವಿಷಯಗಳ ಕುರಿತಾದ ಸ್ಪಷ್ಟ , ನಿಖರ ಮಾಹಿತಿಯನ್ನು ಹೊಂದಿದ್ದು ಅದನ್ನು ಮಕ್ಕಳಿಗೆ ಆಪ್ತವಾದ ರೀತಿಯಲ್ಲಿ ಮನದಟ್ಟು ಮಾಡುವ ಕಲೆಯೇ ಅಧ್ಯಾಪಕ ವೃತ್ತಿ ಎಂದವರು ಅಭಿಪ್ರಾಯಪಟ್ಟರು. ಶಾಲಾ ಅಧ್ಯಾಪಕ ವೃಂದದವರು ಅಸೆಂಬ್ಲಿಯನ್ನು ನಿರ್ವಹಿಸಿದರು. ಭಾಷಣ, ಗಾಯನಗಳ ಮೂಲಕ ವಿದ್ಯಾರ್ಥಿಗಳ ಮನರಂಜಿಸಿದರು. ವಿದ್ಯಾರ್ಥಿಗಳು ಹೂವುಗಳನ್ನು ನೀಡಿ ಶುಭಾಶಯ ತಿಳಿಸಿದರು. ಅಧ್ಯಾಪಕ ದಿನದಂದು ಸರ್ವಪಲ್ಲಿಯವರ ಜೀವನ ಸಂದೇಶ ತಿಳಿಸ‌ಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next