Advertisement

ವ್ಯಕ್ತಿಯಿಂದ ಮಹಾನ್‌ ಶಕ್ತಿಯಾದ ಕಯ್ಯಾರರು: ಕಲ್ಕೂರ

08:27 PM Jun 08, 2019 | Team Udayavani |

ಬದಿಯಡ್ಕ: ನೇಗಿಲ ಕ್ರಾಂತಿ, ಕನ್ನಡದ ಜಾಗೃತಿ, ಸಾಹಿತ್ಯದ ಆಸಕ್ತಿ ಕಯ್ಯಾರರನ್ನು ಒಂದು ಶಕ್ತಿಯನ್ನಾಗಿ ಮಾಡಿದೆ. ಸಂಸ್ಕೃತ ಪಂಡಿತರಾಗಿ, ಕನ್ನಡ ಹೋರಾಟಗಾರರಾಗಿ, ಸಾಹಿತ್ಯ ಲೋಕಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ಶ್ರೇಷ್ಠ ಅಧ್ಯಾಪಕ. ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲೂ ಕೈಯಾಡಿಸಿ ಸೆ„ ಎನಿಸಿಕೊಂಡ ಅನುಭವದ ಖಜಾನೆ ಕಯ್ಯಾರ ಕಿಞ್ಞಣ್ಣ ರೈಗಳು ಎಂದು ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಪ್ರದೀಪ ಕುಮಾರ ಕಲ್ಕೂರ ಅಭಿಪ್ರಾಯಪಟ್ಟರು.

Advertisement

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಮತ್ತು ಜನಾರ್ದನ ಕಲಾವೃಂದ ಜೋಡುಕಲ್ಲು ಇವರ ಸಂಯುಕ್ತ ಆಶ್ರಯದಲ್ಲಿ ಜೆಕೆವಿ ಸಭಾಂಗಣದಲ್ಲಿ ಜರಗಿದ ಕನ್ನಡದ ಹಿರಿಯ ಚೇತನ ನಾಡೋಜ ಡಾ| ಕಯ್ನಾರ ಕಿಞ್ಞಣ್ಣ¡ ರೈಗಳ 104ನೇ ಜನ್ಮದಿನಾಚರಣೆ ಮತ್ತು ಗಡಿನಾಡ ಕೇಸರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಕಯ್ನಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೆ„ದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಗಟ್ಟಿ ಕನ್ನಡಿಗರಾಗಿ ಕನ್ನಡವನ್ನೇ ಜೀವನವಾಗಿಸಿದವರು ಕಯ್ನಾರರು. ಅನುಭವ ಸಾಮ್ರಾಜ್ಯದಲ್ಲಿ ಸರಳ ವ್ಯಕ್ತಿತ್ವ ಮತ್ತು ದಿಟ್ಟತನದ ಬರಹಗಳ ಮೂಲಕ, ಹೋರಾಟಗಳ ಮೂಲಕ ಬೆಂಕಿ ಬಿದ್ದಿದೆ ಮನೆಗೆ ಎಚ್ಚೆತ್ತು ಹೋರಾಡಿ ಎಂದು ಕನ್ನಡಿಗರನ್ನು ಒಗ್ಗೂಡಿಸಿ ಹೋರಾಡಿದವರು. ಬಹುಭಾಷಾ ಸಾಧಕರು. ವಿಭಿನ್ನ ಭಾಷಾ ವೈವಿಧ್ಯ ಹೊಂದಿರುವ ಕಾಸರಗೋಡಿನಲ್ಲಿ ಕನ್ನಡಿಗರ ಭಾಷಾ ಪ್ರೇಮ ಗಟ್ಟಿಯಾಗಿ ಉಳಿಯಲು ಇಂತಹ ಚೇತನಗಳೇ ಕಾರಣ ಎಂದು ಅವರು ಹೇಳಿದರು.

ಗ.ಸಾ.ಸಾಂ. ಅಕಾಡೆಮಿಯ ಅಧ್ಯಕ್ಷರಾದ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಕರ್ನಾಟಕ ಇತಿಹಾಸ ಅಕಾಡೆಮಿಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಟಿ.ಎಚ್‌.ಎಂ. ಬಸವರಾಜ ಬಳ್ಳಾರಿಯವರಿಗೆ ಗಡಿನಾಡ ಕೇಸರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.  ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಅಕಾಡೆಮಿಯು ಕಯ್ನಾರರ ಜನ್ಮಭೂಮಿ ಯಲ್ಲಿ ವರ್ಷಂಪ್ರತಿ ಸಂಸ್ಮರಣೆ, ಜನ್ಮದಿನಾಚರಣೆ ಮುಂತಾದ ಕಾರ್ಯಕ್ರಮಗಳ ಮೂಲಕ ಹಿರಿಯ ಚೇತನಕ್ಕೆ ಗೌರವ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕೇರಳ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಪ್ರಾದೇಶಿಕ ಪ್ರಬಂಧಕರಾದ ಎಸ್‌. ಜಗನ್ನಾಥ ಶೆಟ್ಟಿ ಕುಂಬಳೆ ಸಂಸ್ಮರಣಾ ಭಾಷಣ ಮಾಡಿ ಕಯ್ನಾರರ ವ್ಯಕ್ತಿತ್ವ, ಸಾಧನೆ, ರಾಜಕೀಯ, ಸಾಮಾಜಿಕ, ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು.

ರವಿ ನಾಯ್ಕಪು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷ ಎ.ಕೆ.ಎಂ. ಅಶ್ರಫ್‌, ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಸದಸ್ಯ ಪ್ರಸಾದ ರೈ ಕಯ್ನಾರು, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ ಶ್ರೀಧರ ಹೊಳ್ಳ ಕಯ್ನಾರು, ಕ.ಜಾ.ಪ. ಕೇರಳ ಘಟಕ ಅಧ್ಯಕ್ಷ ಎ.ಆರ್‌. ಸುಬ್ಬಯ್ಯಕಟ್ಟೆ , ಪ್ರೊ| ಶ್ರೀನಾಥ್‌, ಮೀಡಿಯ ಕ್ಲಾಸಿಕಲ್‌ ಅಧ್ಯಕ್ಷ ಶ್ರೀಕಾಂತ್‌ ನೆಟ್ಟಣಿಗೆ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ರಾಧಾಕೃಷ್ಣ ಮಡಂದೂರು, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯು.ಎ.ಇ. ಘಟಕದ ಉಪಾಧ್ಯಕ್ಷ ಮುನೀರ್‌ ಕುಬನೂರು, ಸಿದ್ಧಿಕ್‌ ಕಯ್ನಾರ್‌, ಕಾರ್ಯದರ್ಶಿ ಇಬ್ರಾಹಿಂ ಬಾಜೂರಿ, ತಾಜುದ್ದೀನ್‌ ಕುಬನೂರು ಹಾಗೂ ಸದಸ್ಯ ಸಾಕೀರ್‌ ಬಾಯಾರು ಮೊದಲಾ ದವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು. ನವೀನ್‌ ನೆಟ್ಟಣಿಗೆ, ಗೋವಿಂದ ಪೈ ಕಾಲೇಜು ಉಪನ್ಯಾಸಕ ಶಿವಶಂಕರ್‌ ಉಪಸ್ಥಿತರಿದ್ದರು. ಗಾಯಕ ಋತಿಕ್‌ ಯಾದವ್‌ ಪ್ರಾರ್ಥನೆ ಹಾಡಿದರು. ಗ.ಸ.ಸಾಂ. ಅಕಾಡೆಮಿ ಪ್ರಧಾನ ಕಾರ್ಯದರ್ಶಿ ವಂದಿಸಿ ಜತೆಕಾರ್ಯದರ್ಶಿ ಕಾರ್ಯಕ್ರಮ ನಿರ್ವಹಿಸಿದರು.

Advertisement

ಸಾರ್ಥಕವಾಯಿತು
ದೂರದ ಬಳ್ಳಾರಿಯಲ್ಲಿದ್ದ ನನ್ನ ಜಾನಪದ, ಕನ್ನಡ ಚಟುವಟಿಕೆ ಗುರುತಿಸಿ ಕಯ್ನಾರರಂತಹ ಮಹಾನ್‌ ವ್ಯಕ್ತಿತ್ವದ ಜನ್ಮದಿನದಂದು ಪ್ರಶಸ್ತಿ ನೀಡಿ. ಸಾರ್ಥಕ ಭಾವ ಮೂಡಿಸಿದೆ. ಪುಸ್ತಕ ಇಲ್ಲದ ಮನೆ ಹಿಡಿ ಇಲ್ಲದ ಕೊಡಲಿಯಂತೆ. ಪುಸ್ತಕಗಳು ಮಾನವನ ನಿಜವಾದ ಸಂಗಾತಿ ಗಡಿನಾಡಿನ ಕನ್ನಡ ಶಾಲೆಗಳಿಗೆ ಕನ್ನಡ ಪುಸ್ತಕಗಳನ್ನು ನೀಡುವ ಅಕಾಡೆಮಿಯ ಉನ್ನತ ಚಿಂತನೆಗೆ ಪೂರ್ಣ ಬೆಂಬಲವಾಗಿ ಒಂದಷ್ಟು ಪುಸ್ತಕಗಳನ್ನು ನೀಡುತ್ತಿದ್ದೇನೆ.
-ಟಿ.ಎಚ್‌.ಎಂ.ಬಸವರಾಜ್‌ ಸಮ್ಮಾನಿತರು

Advertisement

Udayavani is now on Telegram. Click here to join our channel and stay updated with the latest news.

Next