ಚನ್ನವೀರ ಶಿವಯೋಗಿ ಸಂಸ್ಥಾನದ ಹಿರೇಮಠದ ಪೀಠಾಧಿಪತಿ ಡಾ|ಚನ್ನವೀರ ಶಿವಾಚಾರ್ಯರು ಹೇಳಿದರು. ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕು ಸುಕ್ಷೇತ್ರ ಹಾರಕೂಡ ಮಠದಲ್ಲಿ ಸೋಮವಾರ ಕಲಬುರಗಿ ಗುಪ್ತವಾರ್ತೆ ವಿಭಾಗದ ಮುಖ್ಯಪೇದೆ ರಜನಿಕಾಂತ ಬುರುಡೆ ಅವರು ರಚಿಸಿದ ತಂಬಾಕವಾಡಿ ಮಾತಾ ಜಕ್ಕಮ್ಮೇಶ್ವರಿ ಭಕ್ತಿಗೀತೆಗಳ ಧ್ವನಿ ಸುರುಳಿ ಬಿಡುಗಡೆ ಹಾಗೂ ಹುಲಸೂರು ಗುರುಬಸವೇಶ್ವರ ಮಠದ ಡಾ|ಶಿವಾನಂದ ಮಹಾಸ್ವಾಮಿಗಳವರಿಗೆ ಚೆನ್ನೈ ವಿವಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ದೊರೆತ್ತಿದ್ದಕ್ಕೆ ಶ್ರೀಮಠದಿಂದ ಸತ್ಕಾರ ನೆರವೇರಿಸಿ ಸ್ವಾಮೀಜಿ ಮಾತನಾಡಿದರು. ಹುಲಸೂರ ಶ್ರೀಗಳು 7 ತಿಂಗಳ ಕಾಲ ದೇಶದಾದ್ಯಂತ 9 ಸಾವಿರ ಕಿಮೀ ಪಾದಯಾತ್ರೆ ಕೈಗೊಂಡು ಬಸವತತ್ವ ಪ್ರಚಾರ ಕೈಗೊಂಡಿರುವುದು ಸಾಮಾನ್ಯವಾದುದಲ್ಲ. ಚೆನ್ನೆ ವಿವಿಯಿಂದ ಗೌರವ ಡಾಕ್ಟರೇಟ್ ದೊರೆತ್ತಿರುವುದು ಅವರ ಕಾರ್ಯಕ್ಕೆ ಸಂದ ಗೌರವವಾಗಿದೆ ಎಂದು ಹೇಳಿದರು. ಹಾರಕೂಡ ಮಠದಿಂದ ಸತ್ಕರಿಸಿಕೊಂಡು ಆಶೀರ್ವಚನ ನೀಡಿದ ಡಾ| ಶಿವಾನಂದ ಮಹಾಸ್ವಾಮಿಗಳು, ಹಾರಕೂಡ ಮಠದಿಂದ ಸತ್ಕಾರಗೊಂಡಿರುವುದು ಚೆನ್ನೆ ವಿವಿಯಿಂದ ಗೌರವ ಡಾಕ್ಟರೇಟ್ ಲಭಿಸಿದ್ದಷ್ಟೇ ಸಂತೋಷವಾಗಿದೆ ಎಂದು
ಹೇಳಿದರು. ಧ್ವನಿ ಸುರುಳಿ ಭಕ್ತಿ ಗೀತೆಗಳ ರಚನೆಕಾರ ರಜನಿಕಾಂತ ಬುರುಡೆ ದಂಪತಿಯನ್ನು ಶ್ರೀಗಳು ಸನ್ಮಾನಿಸಿದರು. ಶಿಕ್ಷಕ ಮಲ್ಲಿನಾಥ ಹಿರೇಮಠ, ಕೋಹಿನೂರ ಕಸಾಪ ವಲಯದ ಅಧ್ಯಕ್ಷ ರತಿಕಾಂತ ಶಿರ್ಶಿವಾಡಿ, ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯೆ ಜಯದೇವಿ ಗಾಯಕವಾಡ, ಮುಖಂಡರಾದ ನಾಗೇಶ ಮಹಾಜನ್, ಕಂಠೆಪ್ಪ ಪಾಟೀಲ, ವಿಠuಲ ಹೂಗಾರ, ಗವಿಸಿದ್ದಪ್ಪ ಪಾಟೀಲ, ವಿಠಲ ಹೂಗಾರ, ಶರಣಬಸಪ್ಪ ಕಾಂದೆ, ಗುರುಶಾಂತಪ್ಪ ಬುಜುರ್ಕೆ, ವಿಠಲ ತೊಗಲೂರೆ, ಆನಂದರಾಯ ತಂಬಾಕೆ, ಅಪ್ಪಾರಾಯ ಕಮಲಾಪುರೆ ಸೇರಿದಂತೆ ಮುಂತಾದವರಿದ್ದರು. ನಾಗರಾಜ ಹೆಬ್ಟಾಳ ಧ್ವನಿ ಸುರುಳಿ ಕುರಿತು ಮಾತನಾಡಿದರು. ಅಂಬಾರಾಯ ಉಗಾಜಿ ನಿರೂಪಿಸಿದರು. ಕಾರ್ತಿಕ ಸ್ವಾಮಿ ಪ್ರಾರ್ಥನೆ ಗೀತೆ ಹಾಡಿದರು.
Advertisement