Advertisement

ಅಂಬೇಡ್ಕರ್‌-ಬಸವಾದಿ ಶರಣರು ಮಹಾನ್‌ ದಾರ್ಶನಿಕರು

01:08 PM Apr 15, 2017 | Team Udayavani |

ದಾವಣಗೆರೆ: ಮಹಾನ್‌ ಮಾನವತಾವಾದಿಗಳಾದ ಬಸವಾದಿ ಶರಣರು, ಅಂಬೇಡ್ಕರ್‌ರಂತಹ ಮೇರು ಪುರುಷರು ಅಸ್ಪೃಶ್ಯತೆ, ಮೇಲು-ಕೀಳು, ತಾರತಮ್ಯದ ಹೋರಾಡಿದ ದಾರ್ಶನಿಕರು ಎಂದು ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸ್ಮರಿಸಿದ್ದಾರೆ. 

Advertisement

ಡಾ| ಬಿ.ಆರ್‌. ಅಂಬೇಡ್ಕರ್‌ರವರ 126ನೇ ಹಾಗೂ ಬಾಬು ಜಗಜೀವನರಾಮ್‌ರವರ 110ನೇ ಜನ್ಮ ದಿನಾಚರಣೆ ಸಮಾರಂಭದ ಅಂಗವಾಗಿ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಸತಿ ಹೀನರ ಸಂಘ, ಅಂಧತ್ವ ನಿಯಂತ್ರಣ ಸಮಿತಿ, ಜಿಲ್ಲಾ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ಪರೀಕ್ಷೆ ಹಾಗೂ ಮಸೂರ ಅಳವಡಿಕೆ ಶಸ್ತ್ರಚಿಕಿತ್ಸೆ ಶಿಬಿರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಹಾನ್‌ ದಾರ್ಶನಿಕರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಾಗಿದೆ ಎಂದರು. 12ನೇ ಶತಮಾನದಲ್ಲಿ ಬಸವಣ್ಣನವರು ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಸರ್ವ ಸಮಾನತೆಯಾಗಿ ಅನುಭವ ಮಂಟಪ ಕಟ್ಟಿದ್ದರು. ಅನುಭವ ಮಂಟಪದಲ್ಲಿ ಪ್ರತಿಯೊಬ್ಬರಿಗೆ ಸಮಾನ ಸ್ಥಾನಮಾನ ನೀಡುವ ಮೂಲಕ ಸಮಾನತೆಯ ಸಂದೇಶ ಸಾರಿದರು.

ಭಾರತರತ್ನ ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಸಮಾನತೆ ಅಂಶ ಅಳವಡಿಸುವ ಮೂಲಕ ಸರ್ವ ಸಮಾನತೆಯ ಆಶಯ ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು. ಅಂಬೇಡ್ಕರ್‌ ಅತ್ಯುತ್ತಮ ಸಂವಿಧಾನ ನೀಡುವ ಮೂಲಕ ಶೋಷಿತ ಪರ ಧ್ವನಿಯಾಗಿದ್ದಾರೆ. ಶಿಕ್ಷಣದಿಂದ ಮಾತ್ರವೇ ಎಲ್ಲರ ಅಭಿವೃದ್ಧಿ ಎಂಬುದನ್ನು ಮನಗಂಡಿದ್ದ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮಂತ್ರ ಸಾರಿದವರು.

ಶಿಕ್ಷಣದಿಂದ ವಿಚಾರವಂತಿಕೆ, ಬುದ್ಧಿವಂತಿಕೆ ಬರುತ್ತದೆ. ಆ ಮೂಲಕ ಜಾಗೃತಿ ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ಗಮನ ನೀಡಬೇಕು ಎಂದು ತಿಳಿಸಿದರು. ಇಂದು ಯುವ ಜನಾಂಗ ಮೊಬೈಲ್‌ ನೀಡುವ ಆಸಕ್ತಿ, ಗಮನವನ್ನ ಅಧ್ಯಯನಕ್ಕೆ ನೀಡುತ್ತಿಲ್ಲ.

Advertisement

ಪುಸ್ತಕ ಓದುವ ಮೂಲಕ ಮತ್ತು ಅದರ್ಶ ಚಿಂತನೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಹಾಗೆಯೇ ಪ್ರಬುದ್ಧ ವಿಚಾರ ತಿಳಿಯಬೇಕು ಎಂದರು. ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ| ಎಚ್‌.ಡಿ. ನೀಲಾಂಬಿಕೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎರಡು ಮೂರು ವರ್ಷದ ಮಕ್ಕಳಿಗೂ ದೃಷ್ಟಿದೋಷ ಕಾಣಿಸಿಕೊಳ್ಳುತ್ತಿದೆ. ಆದಷ್ಟು ಬೇಗ ದೋಷ ಪತ್ತೆ ಹಚ್ಚಿ. ಚಿಕಿತ್ಸೆ ನೀಡಿದಲ್ಲಿ ಸಮಸ್ಯೆ ನಿವಾರಣೆ ಆಗಲಿದೆ ಎಂದು ತಿಳಿಸಿದರು. 

ಇತ್ತೀಚಿನ ದಿನಗಳಲ್ಲಿ ರಕ್ತದ ಅಭಾವ ಹೆಚ್ಚಾಗಿದ್ದು, ರಕ್ತವನ್ನು ಯಾರು ತಯಾರಿಸುವುದಕ್ಕೆ ಸಾಧ್ಯವಿಲ್ಲ. ಬದಲಾಗಿ ಮನುಷ್ಯರೇ ರಕ್ತ ನೀಡಬೇಕಾಗಿದ್ದು, ಸಾಕಷ್ಟು ಶಿಬಿರಗಳನ್ನು ಮಾಡುವ ಮೂಲಕ ರಕ್ತವನ್ನು ಸಂಗ್ರಹಿಸುವ ಕಾರ್ಯವು ನಡೆಯುತ್ತಿದೆ ಎಂದು ಹೇಳಿದರು. ಸಂಘದ ಅಧ್ಯಕ್ಷ ಸಿ. ಅಂಜಿನಪ್ಪ ಕಡತಿ, ಪ್ರಧಾನ ಕಾರ್ಯದರ್ಶಿ ಎಚ್‌.ಸಿ. ಗುಡ್ಡಪ್ಪ, ಎಸ್‌.ಕೆ. ಒಡೆಯರ್‌, ಕೆ.ಜಿ. ಬಸವನಗೌಡ, ಹೊನ್ನಮ್ಮ ಇತರರು ಇದ್ದರು. ಡಾ. ಎ.ಎಂ. ಶಿವಕುಮಾರ್‌ ಅವರನ್ನು ಸನ್ಮಾನಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next