Advertisement

ಮಹಾಪುರುಷರು ಒಂದೇ ಸಮಾಜಕ್ಕೆ ಸೀಮಿತರಲ್ಲ: ಶಾಸಕ ನಾಡಗೌಡ

01:18 PM Jan 16, 2018 | |

ಮುದ್ದೇಬಿಹಾಳ: ಮಹಾನ್‌ ವ್ಯಕ್ತಿಗಳನ್ನು ಒಂದೇ ಸಮಾಜಕ್ಕೆ ಸೀಮಿತಗೊಳಿಸುವ ಕೆಲಸ ಆಗಬಾರದು. ಮಹಾತ್ಮರು ಯಾವ ಸಮಾಜದಲ್ಲಿ ಹುಟ್ಟುತ್ತಾರೆ ಅನ್ನೋದು ಮುಖ್ಯವಲ್ಲ. ಹುಟ್ಟಿದ ವ್ಯಕ್ತಿ ಸಂತನಾಗಿ ಸರ್ವಸ್ವವನ್ನು ತ್ಯಾಗಮಾಡಿ ಮಾನವ ಕಲ್ಯಾಣಕ್ಕಾಗಿ ಶ್ರಮಿಸುವವರು ನಮ್ಮ ಪಾಲಿಗೆ ದೇವರೆಂದೆನಿಸಿಕೊಳ್ಳುತ್ತಾರೆ ಎನ್ನುವುದನ್ನು ನಾವೆಲ್ಲ ಅರಿಯಬೇಕು ಎಂದು ಶಾಸಕ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಸಿ.ಎಸ್‌. ನಾಡಗೌಡ ಹೇಳಿದರು.

Advertisement

ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಸೋಮವಾರ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸೋಗು ಹಾಕಿಕೊಂಡು ಬರುವುದು ಬಹಳ ದಿನ ನಡೆಯುವಂಥದ್ದಲ್ಲ. ನಮ್ಮ ಮಕ್ಕಳು ಕೆಟ್ಟರೆ ಇಡಿ ಸಮಾಜ ಕೆಟ್ಟಂತೆ. ನಾವು ತಪ್ಪು ಹೆಜ್ಜೆ ಇಟ್ಟರೆ ಅದರ ನಷ್ಟ ನಮ್ಮ ವಂಶಕ್ಕೆ ಅನ್ನೋದನ್ನ ಎಲ್ಲರೂ ಗಮನಿಸಬೇಕು. ಒಂದು ತಪ್ಪು ನಡೆ ಇಡೀ ವಂಶವನ್ನೇ ನಾಶ ಮಾಡುತ್ತೆ. ಬಸವಣ್ಣನ ಹೊಲಸು ತಿಂಬುವನೇ ಹೊಲೆಯ ಅನ್ನೋ ಮಾತು ಸತ್ಯ. ಹೊಲಸು ತಿನ್ನೋರು ಅಂದರೆ ತಪ್ಪು ಕೆಲಸ ಮಾಡೋರೇ ಹೊರತು ಆಹಾರದ ವಿಷಯದಲ್ಲಿ ಅಲ್ಲ. ವ್ಯಸನ ಬಿಡಬೇಕು. ಮಕ್ಕಳಿಗೆ ಒಳ್ಳೆ ವಿದ್ಯೆ ಕೊಡಬೇಕು. ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. 

ಸಿದ್ದರಾಮೇಶ್ವರರ ಕುರಿತು ಸರ್ಕಾರಿ ಪಿಯು ಕಾಲೇಜು ಕನ್ನಡ ಉಪನ್ಯಾಸಕ ಐ.ಬಿ. ಹಿರೇಮಠ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ಚನ್ನಮ್ಮ ತಂಗಡಗಿ, ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಕಸಾಪ ತಾಲೂಕಾಧ್ಯಕ್ಷ ಎಂ.ಬಿ. ನಾವದಗಿ, ಬಿ.ಎಚ್‌. ಮಾಗಿ, ತಹಶೀಲ್ದಾರ್‌ ಎಂ.ಎ.ಎಸ್‌. ಬಾಗವಾನ, ಜಿ.ಎಸ್‌. ಪಾಟೀಲ, ಗುರಣ್ಣ ತಾರನಾಳ, ಅಬ್ದುಲ್‌ಗ‌ಫೂರ ಮಕಾನದಾರ, ಹನುಮಂತ ವಡ್ಡರ, ಸಿದ್ರಾಮಪ್ಪ ಹಡಲಗೇರಿ, ಪರಶುರಾಮ ನಾಲತವಾಡ ಮತ್ತಿತರರು ವೇದಿಕೆಯಲ್ಲಿದ್ದರು. ಡಾ| ಎಸ್‌.ಸಿ. ಚೌಧರಿ ಸ್ವಾಗತಿಸಿದರು. ಟಿ.ಡಿ. ಲಮಾಣಿ ನಿರೂಪಿಸಿದರು.

ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನೇತಾಜಿ ನಗರದಿಂದ ಮಿನಿ ವಿಧಾನಸೌಧವರೆಗೆ ಸಿದ್ದರಾಮೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಿತು. ಪುರಸಭೆ ಸದಸ್ಯ ಹನುಮಂತ ವಡ್ಡರ ಕೇಸರಿ ಧ್ವಜಾರೋಹಣ ನಡೆಸುವ ಮೂಲಕ ಚಾಲನೆ ನೀಡಿದರು. ಪ್ರಮುಖರಾದ ಪರಶುರಾಮ ನಾಲತವಾಡ, ರವಿ ನಾಲತವಾಡ, ಶೆಟ್ಟೆಪ್ಪ ಭೋವಿ, ರಾಮಣ್ಣ ಹಡಲಗೇರಿ, ಶೇಖರ ಢವಳಗಿ, ಸಂತೋಷ ವಡ್ಡರ, ನಾಗೇಶ ಅಮರಾವತಿ, ಹನುಮಂತ ಬೆಳಗಲ್ಲ, ಎಸ್‌.ಕೆ. ಘಾಟಿ, ನಾಗಪ್ಪ ಮದರಿ, ಕುಮಾರ ಢವಳಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next