Advertisement

ದಿ ಗ್ರೇಟ್ ಖಲಿ ಬಿಜೆಪಿಗೆ ಸೇರ್ಪಡೆ : ಮೋದಿ ಕಾರ್ಯಗಳಿಂದ ಪ್ರಭಾವಿತನಾಗಿದ್ದೇನೆ

06:36 PM Feb 10, 2022 | Team Udayavani |

ನವದೆಹಲಿ:  ಡಬ್ಲ್ಯೂ ಡಬ್ಲ್ಯೂ ಇ ದೈತ್ಯ ಕ್ರೀಡಾಳು ‘ದಿ ಗ್ರೇಟ್ ಖಲಿ’ ಎಂದೇ ಖ್ಯಾತರಾಗಿರುವ ದಲೀಪ್ ಸಿಂಗ್ ರಾಣಾ ಅವರು ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ದೇಶದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಗಳಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳಿದ್ದಾರೆ.

Advertisement

ಮಾಜಿ ಪಂಜಾಬ್ ಪೊಲೀಸ್ ಅಧಿಕಾರಿ, ರಾಣಾ ಅವರು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು  ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಸಮ್ಮುಖದಲ್ಲಿ  ಪ್ರಧಾನ ಕಚೇರಿಯಲ್ಲಿ ಪಕ್ಷಕ್ಕೆ ಸೇರಿದರು.

ವಿಶೇಷವೆಂದರೆ , ಈಗ ರದ್ದುಗೊಂಡಿರುವ ಮೂರು ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ಒಂದು ವರ್ಷದ ರೈತರ ಆಂದೋಲನಕ್ಕೆ ಖಲಿ ತನ್ನ ಬೆಂಬಲವನ್ನು ನೀಡಿದ್ದರು.

ಖಲಿ ಅವರು ರಾಷ್ಟ್ರೀಯವಾದಿ ಸಿದ್ಧಾಂತದ ವ್ಯಕ್ತಿಯಾಗಿದ್ದು, ಅವರು ಎಲ್ಲಿ ವಾಸಿಸುತ್ತಿದ್ದರೂ ಅವರ ಹೃದಯವು ಭಾರತದಲ್ಲಿ ಉಳಿಯುತ್ತದೆ ಎಂದು ಜಿತೇಂದ್ರ ಸಿಂಗ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next