Advertisement

ಒಳ ರಸ್ತೆಗಳ ಬದಿಯಲ್ಲಿ ತೆರವಾಗಬೇಕಿದೆ ಹುಲ್ಲು ಪೊದೆ

12:42 PM Oct 16, 2022 | Team Udayavani |

ಮಹಾನಗರ: ನಗರ ಒಳ ರಸ್ತೆ, ಕೆಲವು ಮುಖ್ಯ ರಸ್ತೆಗಳ ಬದಿಗಳಲ್ಲಿ ಹುಲ್ಲು ಪೊದೆಗಳು ಆವರಿಸಿ ಕೊಂಡಿದ್ದು, ಸಾರ್ವ ಜನಿಕರ ಸುಗಮ ಓಡಾಟಕ್ಕಾಗಿ ಇವುಗಳನ್ನು ತೆರವುಗೊಳಿಸುವ ಅಗತ್ಯವಿದೆ.

Advertisement

ಒಂದೆಡೆ ಮಳೆಯಬ್ಬರ ಕಡಿಮೆಯಾಗಿದ್ದು, ಇನ್ನೊಂದೆಡೆ ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌ ತಿಂಗಳು ವಿಷಜಂತುಗಳ ಸಂಚಾರ ಹೆಚ್ಚಿರುವ ಕಾಲ. ಹೀಗಾಗಿ ರಸ್ತೆ ಬದಿಯ ಹುಲ್ಲು- ಪೊದೆಗಳನ್ನು ತತ್‌ಕ್ಷಣ ತೆರವುಗೊಳಿಸು ವುದು ಸೂಕ್ತ. ಕೆಲವು ಕಡೆಗಳಲ್ಲಿ ರಸ್ತೆಯ ಅಂಚಿನ ವರೆಗೆ ಪೊದೆಗಳು ಬೆಳೆದಿದ್ದು, ಸಾರ್ವಜನಿಕರು ರಸ್ತೆಯಲ್ಲೇ ನಡೆದು ಕೊಂಡು ಹೋಗಬೇಕಾದ ಸ್ಥಿತಿ ಇದೆ.

ರಾತ್ರಿ ಹೊತ್ತು ಅಪಾಯಕಾರಿ

ವಿಷ ಜಂತುಗಳು ಕತ್ತಲಾದ ಬಳಿಕ ಪೊದೆಗಳಿಂದ ಹೊರಬರುತ್ತವೆ. ಕೆಲವೆಡೆ ಬೀದಿ ದೀಪಗಳೂ ಇಲ್ಲ. ಹಾಗಾಗಿ ರಾತ್ರಿ ಹೊತ್ತು ನಡೆದುಕೊಂಡು ಹೋಗುವರಿಗೆ, ಮುಂಜಾನೆ ವಾಕಿಂಗ್‌, ಜಾಗಿಂಗ್‌ ಹೋಗುವವರಿಗೆ ರಸ್ತೆ ಬದಿಯಲ್ಲಿರುವ ಹುಲ್ಲುಪೊದೆಗಳು ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚಿದೆ.

ಸದ್ಯ ಬಹುತೇಕ ಕಡೆ ಹುಲ್ಲು ಕಟಾವು ಕೆಲಸಗಳು ಕಟಾವು ಯಂತ್ರದ ಮೂಲಕವೇ ನಡೆಯುತ್ತದೆ. ಇತ್ತೀಚೆಗೆ ದಸರಾ ಸಂದರ್ಭದಲ್ಲಿ ಕೆಲವೆಡೆ ಹುಲ್ಲು ಕಟಾವು ಮಾಡಲಾಗಿದೆ. ಆದರೆ ಹುಲ್ಲನ್ನು ತೆರವು ಮಾಡದೆ ಹಾಗೇ ರಸ್ತೆ ಬದಿಯಲ್ಲಿ ಬಿಡಲಾ ಗಿದೆ. ಇದರಿಂದ ಮಳೆ ಬಿದ್ದು ಒಣ ಹುಲ್ಲುಗಳು ಮತ್ತೆ ಚಿಗುರುತ್ತಿದೆ. ಮಳೆಗೆ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗುತ್ತಿದೆ.

Advertisement

ಹೆದ್ದಾರಿ ಬದಿಯಲ್ಲೂ ಇದೆ

ನಗರದ ವ್ಯಾಪ್ತಿಯ ಹೆದ್ದಾರಿ ಬದಿ ಯಲ್ಲೂ ಹುಲ್ಲುಗಳು ಬೆಳೆದಿವೆ. ಇತ್ತೀ ಚೆಗೆ ಪ್ರಧಾನಿ ನರೇಂದ್ರ ಮೋದಿಯ ವರ ಮಂಗಳೂರು ಕಾರ್ಯಕ್ರ ಮದ ಹಿನ್ನೆಲೆಯಲ್ಲಿ ನಂತೂರು- ಕೂಳೂರು- ಪಣಂಬೂರು ಹೆದ್ದಾರಿಯಲ್ಲಿ ತೆರವುಗೊಳಿಸಲಾಗಿತ್ತು.ಆದರೆ ಪಡೀಲ್‌, ಮರೋಳಿ ಸಹಿತ ಇತರೆಡೆಗಳಲ್ಲಿ ಹುಲ್ಲು ಪೊದೆಗಳು ಹಾಗೇ ಬೆಳೆದಿದ್ದು, ಅವುಗಳನ್ನೂ ಶೀಘ್ರ ತೆರವುಗೊಳಿಸಬೇಕಿದೆ.

ಡಿವೈಡರ್‌ಗಳಲ್ಲೂ ಪೊದೆ

ಕೆಲವು ರಸ್ತೆಗಳಲ್ಲಿ ಡಿವೈಡರ್‌ಗಳಲ್ಲಿ ಬೆಳೆಸಲಾದ ಗಿಡಗಳೂ ಪೊದೆಯಂತಾ ಗಿದ್ದು, ಇವುಗಳನ್ನೂ ಸಮರ್ಪಕವಾಗಿ ಕತ್ತರಿಸಿ, ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು.

ತೆರವಿಗೆ ಸೂಚನೆ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಹುಲ್ಲು ಪೊದೆಗಳನ್ನು ತೆರವುಗೊಳಿಸುವ ಕೆಲಸ ಕೆಲವು ವಾರ್ಡ್‌ಗಳಲ್ಲಿ ನಡೆದಿದೆ. ಎಲ್ಲಿ ಹೆಚ್ಚು ಆವರಿಸಿದೆಯೂ ಅಲ್ಲಿ ತೆರವುಗೊಳಿಸುವ ಸೂಚನೆ ನೀಡಲಾಗುವುದು. –ಜಯಾನಂದ ಅಂಚನ್‌, ಪಾಲಿಕೆ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next