Advertisement
ಕೇಂದ್ರ ಸರಕಾರದ ಜಲಶಕ್ತಿ ಮಂತ್ರಾಲಯದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ಮಟ್ಟದಲ್ಲಿ ಸ್ವಚ್ಛತ ಆಂದೋಲನ ಕೈಗೆತ್ತಿಕೊಳ್ಳಲಾಗಿದೆ. ಸೆ. 15ರಿಂದ ಅ. 2ರ ವರೆಗೆ ಪ್ರತೀ ಜಿಲ್ಲೆಯಲ್ಲಿ “ಸ್ವಚ್ಛತೆಯೇ ಸೇವೆ’ ಎಂಬ ಹೆಸರಿನ ವಿಶೇಷ ಆಂದೋಲನವಿದು.
ಸ್ಥಳೀಯ ಸಂಸ್ಥೆ- ಪಂಚಾಯತ್ ವ್ಯಾಪ್ತಿಯಲ್ಲಿ ಶ್ರಮದಾನ ಮಾಡುವ ಮೂಲಕ ಸ್ವಚ್ಛನಗರ-ಗ್ರಾಮದ ಸಂಕಲ್ಪ ತೊಡಲಾಗಿದೆ.
Related Articles
Advertisement
“ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಮೊದಲಿಗೆ ಸೊಳ್ಳೆ ನಿಯಂತ್ರಣಕ್ಕಾಗಿ ವಿಶೇಷ ಆಂದೋಲನ ಶುರು ಮಾಡಲಾಗಿದೆ. ಎಲ್ಲ ಕಡೆಗಳಲ್ಲಿಯೂ ಫಾಗಿಂಗ್ ನಡೆಸಲಾಗುತ್ತಿದೆ’ ಎನ್ನುತ್ತಾರೆ ಮಂಗಳೂರು ಪಾಲಿಕೆ ಆಯುಕ್ತ ಆನಂದ್ ಸಿ.ಎಲ್.
ಆಂದೋಲನ ಸ್ವರೂಪ -ಸ್ವಚ್ಛತೆಗಾಗಿ ಪ್ರತ್ಯೇಕ ಶ್ರಮದಾನ
-ಕಸ ಎಸೆಯುವ ಸ್ಥಳಗಳ ಸ್ವಚ್ಛತೆ-ಅರಿವು ಮೂಡಿಸುವುದು
-ನದಿ-ಸಮುದ್ರ ಸಹಿತ ಜಲಮೂಲದ ಸಮೀಪದ ಪ್ರದೇಶ ಸ್ವಚ್ಛತೆ
-ಏಕಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಜಾಗೃತಿ
-ರಸ್ತೆ ಬದಿ ತ್ಯಾಜ್ಯ ಎಸೆಯುವವರಿಗೆ ದಂಡ ಹಾಗೂ ಜಾಗೃತಿ
-ಅ. 2ರಂದು ವಿಶೇಷ ಗ್ರಾಮ ಸಭೆ
-ಸ್ವಚ್ಛ ಪರಿಸರಕ್ಕಾಗಿ ಶಾಲಾ ಮಕ್ಕಳ ಜಾಥಾ, ಜಾಗೃತಿ ಕಾರ್ಯಕ್ರಮ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮೀಣ ಭಾಗದಲ್ಲಿ ಸ್ವಚ್ಛತ ಅಭಿಯಾನ ಕೈಗೊಳ್ಳುವಂತೆ ಸರಕಾರದಿಂದ ಬಂದ ನಿರ್ದೇಶನದ ಪ್ರಕಾರ ಅ. 2ರ ವರೆಗೆ ಸ್ವತ್ಛತ ಆಂದೋಲನ ಆಯೋಜಿಸಲಾಗಿದೆ. ಸ್ವಚ್ಛತೆಯೇ ಸೇವೆ ಎಂಬ ಆಶಯದಂತೆ ಎಲ್ಲ ಕಡೆಗಳಲ್ಲಿ ಈ ಆಂದೋಲನ ವಿವಿಧ ಸ್ತರದಲ್ಲಿ ಆಯೋಜನೆಗೊಂಡಿದೆ.
-ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ, ದ.ಕ.