Advertisement
ಕಳೆದ ನಾಲ್ಕು ವರ್ಷಗಳಿಂದ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಅವರು ನನ್ನನ್ನು ಗವಿಸಿದ್ದೇಶ್ವರ ಜಾತ್ರೆಗೆ ಆಹ್ವಾನ ನೀಡುತ್ತಿದ್ದರು. ಆದರೆ ಇಂದು ಆ ಘಳಿಗೆ ಕೂಡಿಬಂದಿದೆ. ಇದು ಸ್ವರ್ಗದಲ್ಲಿ ನಡೆಯುವಂತಹ ಮಹೋತ್ಸವ ಎಂದೆನಿಸುತ್ತದೆ. ನನ್ನ 80 ವರ್ಷದಲ್ಲಿಯೇ ಇಂತಹ ಲಕ್ಷಾಂತರ ಭಕ್ತ ಸಾಗರದ ಮಧ್ಯೆ ಸಾಗುವ ರಥೋತ್ಸವವನ್ನು ನಾನು ಜನ್ನ ಜೀವನದಲ್ಲಿಯೇ ನೋಡಿಲ್ಲ ಇದು ನನ್ನ ಪುಣ್ಯವೇ ಸರಿ ಎಂದರು.
Related Articles
Advertisement
ಮನುಷ್ಯ ಈ ಎರಡು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವರ್ಷದಿಂದ ವರ್ಷಕ್ಕೆ ಗವಿಸಿದ್ದೇಶ್ವರನ ಜಾತ್ರೋತ್ಸವಕ್ಕೆ ಭಕ್ತರು ಬರುವ ಸಂಖ್ಯೆ ಹೆಚ್ಚಾಗುತ್ತಿದೆ.
ಮಠದ ಭಕ್ತರಿಗೆ ಇದು ನಮ್ಮ ಮಠ ಎಂಬ ಭಾವನೆ ಇರುತ್ತದೆಯೋ ಅಲ್ಲಿಯವರೆಗೂ ಮಠ ಬೆಳೆಯುತ್ತದೆ. ಮಠದ ಬಗೆಗಿನ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಕೊಡಬಾರದು ಎಂದು ಭಕ್ತರಿಗೆ ಮನವಿ ಮಾಡಿದ್ದಲ್ಲದೇ 2019ರ ಜಾತ್ರೆಗೆ ಭಕ್ತ ಸಮೂಹಕ್ಕೆ ಮತ್ತೆ ಆಹ್ವಾನ ನೀಡಿದರು.
ಲಕ್ಷಾಂತರ ಭಕ್ತರ ಉದ್ಘೋಷ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಲಕ್ಷಾಂತರ ಭಕ್ತರು ಅಜ್ಜನ ಜಾತ್ರೆಯ ಮಹಾರಥೋತ್ಸವ ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಸಂಜೆಯಾಗುತ್ತಿದ್ದಂತೆ ಶ್ರೀ ಗವಿಸಿದ್ಧೇಶ್ವರ ಮಹಾರಾಜ್ ಕೀ ಜೈ ಎನ್ನುವ ಉದ್ಘೋಷದೊಂದಿಗೆ ತೇರನ್ನು ಪಾದಗಟ್ಟೆಯವರೆಗೆ ಭಕ್ತಿ ಭಾವದಿಂದ ಎಳೆದರು.
ಗವಿಸಿದ್ಧೇಶ್ವರ ಪ್ರೌಢಶಾಲೆ, ವಸತಿ ಗೃಹ, ಕಾಲೇಜಿನ ಆವರಣದಲ್ಲಿ ಮಹಿಳೆಯರು, ಮಕ್ಕಳು ಜಮಾಯಿಸಿದ್ದರು. ಸುತ್ತಮುತ್ತಲಿನ ಕಟ್ಟಡಗಳ ಮೇಲೂ ಜನಜಂಗುಳಿ ಇತ್ತು. ತೇರು ಪಾದಗಟ್ಟೆಯವರೆಗೆ ಹೊರಡುತ್ತಿದ್ದಂತೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಮುಂಜಾಗ್ರತಾ ಕ್ರಮವಾಗಿ ಮಠದ ಸುತ್ತಮುತ್ತ ಸುಮಾರು 1 ಕಿ.ಮೀ.ವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.