ನಿಡಗುಂದಿ: ನಾಲ್ಕು ದಶಕದಿಂದ ತಾಲೂಕು ಕೇಂದ್ರ ರಚಿಸುವಂತೆ ಬೇಡಿಕೆ ಹೊಂದಿದ್ದ ಹೋರಾಟಗಾರರಿಗೆ ಸ್ಪಂದಿಸಿದ ಸರಕಾರ ಶುಕ್ರವಾರ ಗಣರಾಜೋತ್ಸವ ದಿನದಂದು ನೂತನ ತಾಲೂಕು ಕಚೇರಿ ಉದ್ಘಾಟಿಸಿ ಚಾಲನೆ ನೀಡಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಶುಕ್ರವಾರ ನಿಡಗುಂದಿಯಲ್ಲಿ ನೂತನ ತಾಲೂಕು ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ನಾಲ್ಕು ದಶಕದಿಂದ ಇಲ್ಲಿನ ಹೋರಾಟಗಾರರು ನಿಡಗುಂದಿ ತಾಲೂಕು ರಚನೆಗಾಗಿ ಅನೇಕ ಹೋರಾಟ ನಡೆಸಿಕೊಂಡು ಬಂದಿದ್ದರು. ಆದರೆ, ಬೇಡಿಕೆಗೆ ಜೀವ ತುಂಬಲಾಗಿದ್ದಿಲ್ಲ. ಸರಕಾರ ಆರ್ಥಿಕ ಸ್ಥಿ ತಿಗತಿ ಗಮನದಲ್ಲಿಟ್ಟುಕೊಂಡು
ಒಟ್ಟು ಘೋಷಿತ 49 ತಾಲೂಕುಗಳಲ್ಲಿ ನಿಡಗುಂದಿ ಸೇರಿ 32 ತಾಲೂಕುಗಳಲ್ಲಿ ತಾಲೂಕು ಕಚೇರಿ ತೆರೆಯಲಾಗುತ್ತಿದೆ
ಎಂದರು.
ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೆರೆಸದೇ ಪಕ್ಷಾತೀತವಾಗಿ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಪಟ್ಟಣದ ಅಭಿವೃದ್ಧಿ, ಜನರ ಬೇಡಿಕೆಗೆ ಒತ್ತು ನೀಡಬೇಕು. ರಾಜಕೀಯ ಅಭಿವೃದ್ಧಿಗೆ ಮಾರಕಾವಾಗದ ನಿಟ್ಟಿನಲ್ಲಿ ಕಾರ್ಯ ನಡೆಸಬೇಕು. ನಿಡಗುಂದಿ ತಾಲೂಕಿಗೆ ಕ್ರೀಡಾಗಂಗಣದ ಅವಶ್ಯವಿದ್ದು ಶೀಘ್ರವೇ ಜಮೀನನ್ನು ಒದಗಿಸುವ ಮೂಲಕ ತಾಲೂಕು ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗುವ ಜತೆಗೆ ಭವಿಷ್ಯದಲ್ಲಿ ನಿಡಗುಂದಿ ಅತಿ ಎತ್ತರಕ್ಕೆ ಬೆಳೆಯುವ ಕನಸಿದ್ದು ಆ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ರುದ್ರೇಶ್ವರ ಸಂಸ್ಥಾನ ಮಠ ರುದ್ರಮುನಿ ಶ್ರೀಗಳು ಮಾತನಾಡಿ, ನಿಡಗುಂದಿ ಜನರ ತಾಲೂಕಿನ ಬೇಡಿಕೆಗೆ ಸರಕಾರ ಸ್ಪಂದಿಸಿ ತಾಲೂಕು ಕಚೇರಿ ದ್ಘಾಟಿಸುತ್ತಿರುವುದು ಶ್ಲಾಘನೀಯವಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವೇಗವಾಗಿ ಬೆಳೆಯುತ್ತಿರುವ ನಿಡಗುಂದಿ ಪಟ್ಟಣಕ್ಕೆ ಅಭಿವೃದ್ಧಿ ಕನಸನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದ ಶಾಸಕ ಶಿವಾನಂದ ಪಾಟೀಲ ಹಾಗೂ ಹೋರಾಟ ಸಮಿತಿ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನಿಡಗುಂದಿ ತಾಲೂಕು ಗ್ರಾಮಸ್ಥರ ವತಿಯಿಂಂದ ರುದ್ರಮುನಿ ಶ್ರೀಗಳಿಗೆ ಮತ್ತು ಶಾಸಕ ಶಿವಾನಂದ ಪಾಟೀಲ,
ನಿಡಗುಂದಿ ದಂಡಾಧಿಕಾರಿ ಎಂ.ಬಿ. ನಾಗಠಾಣ, ತಾಲೂಕು ಹೋರಾಟ ಸಮಿತಿ ಮುಖಂಡರಿಗೆ ಸನ್ಮಾನಿಸಲಾಯಿತು.
ನಿಡಗುಂದಿ ನೂತನ ತಾಲೂಕು ತಹಶೀಲ್ದಾರ್ ಎಂ.ಬಿ. ನಾಗಠಾಣ, ಪಪಂ ಅಧ್ಯಕ್ಷ ಮೌಲಾಸಾಬ ಅತ್ತಾರ, ಸಿದ್ದಣ್ಣ
ನಾಗಠಾಣ, ಕರವೀರಪ್ಪ ಕುಪ್ಪಸ್ತ, ಶಿವಾನಂದ ಅವಟಿ, ಬಸವರಾಜ ಕುಂಬಾರ, ಸಂಗಮೇಶ ಬಳಿಗಾರ, ಶಂಕರ ರೇವಡಿ, ಸಂಗಮೇಶ ಕೆಂಭಾವಿ, ಸಂಗಣ್ಣ ಕೋತಿನ, ಈರಣ್ಣ ಮುರನಾಳ, ಪ್ರಭು ಪತ್ತಾರ, ಪ.ಪಂ ಸರ್ವ ಸದಸ್ಯರು, ತಾಲೂಕು ಹೋರಾಟ ಸಮಿತಿ ಪದಾಧಿಕಾರಿಗಳು ಇದ್ದರು.