Advertisement
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಅನಂತರ ವಸತಿ ಹೀನರಿಗೆ ವಸತಿ ಅಲ್ಲದೆ, ಸಾಮಾಜಿಕ ಆರ್ಥಿಕ ಜಾತಿ ಸೆನ್ ಸೆಕ್Ò ಸಮೀಕ್ಷೆ (ಸೊಸಿಯೋ ಎಕಾನಾಮಿಕ್ ಕಾಸ್ಟ್ ಸರ್ವೇ) ಮಾಡಲಾಯಿತು. ಬಡವರ ನಿವೇಶನಕ್ಕಾಗಿ 10,500 ಕೋಟಿ ರೂ. ಖರ್ಚು ಮಾಡಿದೆ. ಈ ವರ್ಷ 3 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಕೊಳಗೇರಿ ನಿವಾಸಿಗಳಿಗೆ 45 ಸಾವಿರ ಮನೆ ನೀಡಲಾಗಿದೆ. ಈ ವರ್ಷ ಇನ್ನು 45 ಸಾವಿರ ಮನೆ ನೀಡಲಾಗುವುದು.
Related Articles
Advertisement
ಗಣಿ, ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಅವಳಿ ನಗರದ 10 ಕಿಮೀ ವ್ಯಾಪ್ತಿಯೊಳಗೆ ಭೂಮಿ ಖರೀದಿಸುವುದು ಕಷ್ಟಕರ. ರೈತರಿಂದಲೂ ಭೂಮಿ ಖರೀದಿಸುವುದು ಕಷ್ಟ. ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವ ನಿಟ್ಟಿನಲ್ಲಿ ಇನ್ನು 10 ದಿನಗಳಲ್ಲಿ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ಎಲ್ಲೆಲ್ಲಿ ಜಾಗವಿದೆ ಅದನ್ನು ಗುರುತಿಸಲಾಗುವುದು. ಬಡವರಿಗೆ ನಿವೇಶನ ಹಂಚಿಕೆ ಮಾಡಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಬಡವರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಕಂದಾಯ, ನಗರಾಭಿವೃದ್ಧಿ, ವಸತಿ, ಅರಣ್ಯ ಸಚಿವರು ಒಂದೆಡೆ ಕುಳಿತು ಬ ಹಾಗೂ ಕರಾಬ ಭೂಮಿ ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದರು. ಎಸ್‌ಯುಸಿಐಸಿ ರಾಜ್ಯ ಸಮಿತಿ ಸದಸ್ಯೆ ಕೆ. ಉಮಾ, ಕೆಎಂಎಫ್ ಅಧ್ಯಕ್ಷ ನೀಲಕಂಠ ಅಸೂಟಿ ತನಾಡಿದರು. ಪಾಲಿಕೆ ಸದಸ್ಯ ಮೋಹನ ಹಿರೇಮನಿ, ಇಮ್ರಾನ್ ಯಲಿಗಾರ, ಅಲ್ತಾಫ ಹಳ್ಳೂರ ಮೊದಲಾದವರಿದ್ದರು.
ಹೋರಾಟ ಸಮಿತಿ ರಾಜ್ಯ ಸಂಚಾಲಕ ನಾಗರಾಜ ಗುರಿಕಾರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಆಶಯ ಭಾಷಣ ಮಾಡಿದರು. ರಾಜು ಹಿರೇಒಡೆಯರ ನಿರೂಪಿಸಿದರು. ರಾಜ್ಯದ ವಿವಿಧ ಭಾಗಗಳಿಂದ ನೂರಾರು ಮಹಿಳೆಯರು ಆಗಮಿಸಿದ್ದರು. ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿ ಸದಸ್ಯರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಚಿವರು, ಗಣ್ಯರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.